ಸಂಪೂರ್ಣ ಮದ್ಯ ನಿಷೇಧ ಮಾಡಿ ಆದೇಶ ಹೊರಡಿಸಿದ್ದು, ಒಂದು ವೇಳೆ ಮದ್ಯಪಾನ ಮಾಡಿದಲ್ಲಿ ಭಾರೀ ದಂಡವೂ ಬೀಳಲಿದೆ.
ಮಂಡ್ಯ (ಡಿ.28): ಮದ್ಯಪಾನ ನಿರ್ಮೂಲನೆ ಮಾಡಲು ಗ್ರಾಮಸ್ಥರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಮಂಡ್ಯದ ಉಪ್ಪರಕನಹಳ್ಳಿ ಗ್ರಾಮಸ್ಥರಿಂದ ಕುಡುಕರ ಮೇಲೆ ನಿಗಾ ವಹಿಸಲು ಕಾವಲು ಪಡೆ ರಚನೆ ಮಾಡಲಾಗಿದೆ. ಗ್ರಾಮ ಪಂಚಾಯತ್ ಮುಖಂಡರು ಮದ್ಯ ನಿಷೇಧ ಮಾಡಿದ್ದಾರೆ. ನ್ಯಾಯ ಪಂಚಾಯಿತಿ ಮಾಡುವ ಮೂಲಕ ಈ ನಿರ್ಧಾರ ಕೈಗೊಳ್ಳಲಾಗಿದೆ.
undefined
ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತಿತ್ತು. ಇದರಿಂದಾಗಿ ಇಲ್ಲಿನ ಯುವಪೀಳಿಗೆಯೂ ಸಹ ಕುಡಿತದ ಚಟಕ್ಕೆ ಬಲಿಯಾಗಿತ್ತು. ಈ ನಿಟ್ಟಿನಲ್ಲಿ ಯುವ ಪೀಳಿಗೆಯನ್ನು ಕುಡಿತದಿಂದ ಪಾರು ಮಾಡಲು ಈ ಪ್ಲಾನ್ ಮಾಡಿದ್ದಾರೆ.
ಒಂದು ವೇಳೆ ಗ್ರಾಮದಲ್ಲಿ ಮದ್ಯ ಮಾರಾಟ ಮಾಡಿದರೆ 10 ಸಾವಿರ ದಂಡ ಹಾಗೂ ಮದ್ಯ ಸೇವನೆ ಮಾಡಿದಲ್ಲಿ 5 ಸಾವಿರ ರು. ದಂಡ ವಿಧಿಸಲಾಗುತ್ತದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇನ್ನು ಕುಡಿದವರ ಬಗ್ಗೆ ಮಾಹಿತಿ ನೀಡಿದರೂ ಕೂಡ ಅಂತವರಿಗೆ 1 ಸಾವಿರ ರು. ಬಹುಮಾನವನ್ನೂ ನೀಡಲಾಗುತ್ತದೆ. ಇನ್ನು ಮದ್ಯಪಾನ, ಮದ್ಯ ಮಾರಾಟ ಸಂಪೂರ್ಣ ನಿಷೇಧ ಮಾಡುವ ಉದ್ದೇಶದಿಂದಾಗಿ ಕಾವಲು ಸಮಿತಿಯನ್ನೂ ಕೂಡ ರಚನೆ ಮಾಡಲಾಗಿದೆ. 25 ಮನೆಗಳಿಗೆ ಐವರಂತೆ ಒಂದು ತಂಡವನ್ನು ರಚನೆ ಮಾಡಲಾಗಿದೆ.
ಮದ್ಯ ಮುಕ್ತ ಗ್ರಾಮಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೆರವನ್ನೂ ಕೂಡ ಪಡೆದುಕೊಳ್ಳಲಾಗಿದೆ. ಮದ್ಯಪಾನ ಮಾಡುವವರ ಮೇಲೆ ನಿಗಾ ಹಿಡುವುದು ಕಾವಲು ಸಮಿತಿ ಕೆಲಸವಾಗಿದ್ದು, ಹೊರಗೆ ಕುಡಿದು ಬರುವವರ ಮೇಲೂ ನಿಗವಹಿಸಲಾಗುತ್ತದೆ.
ಡಿಸೆಂಬರ್ 28ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ