ಮಂಡ್ಯದಲ್ಲಿ ಮೂವರು ಅರ್ಚಕರ ಭೀಕರ ಕೊಲೆ ನಡೆದಿದ್ದು, ಮೂವರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿ ಸಿಎಂ ಬಿ ಎಸ್ ಯಡಿಯೂರಪ್ಪ ಆದೇಶ ನೀಡಿದ್ದಾರೆ.
ಮಂಡ್ಯ (ಸೆ.11): ಮಂಡ್ಯ ಜಿಲ್ಲೆಯಲ್ಲೊಂದು ಭೀಕರ ಕೃತ್ಯ ನಡೆದಿದೆ. ಜಿಲ್ಲೆಯ ಗುತ್ತಲಿನಲ್ಲಿರುವ ಅರ್ಕೇಶ್ವರ ದೇಗುಲದಲ್ಲಿ ಮೂವರು ಅರ್ಚಕರ ಭೀಕರ ಹತ್ಯೆ ನಡೆದಿದೆ.
ತಲೆ ಮೇಲೆ ಕಲ್ಲು ಎತ್ತಿ ಹಾಕಿ ಗಣೇಶ, ಪ್ರಕಾಶ, ಆನಂದ ಎಂಬ ಮೂವರು ಅರ್ಚಕರನ್ನು ಕೊಲೆ ಮಾಡಲಾಗಿದೆ. ದೇವಾಲಯದ ಆವರಣದಲ್ಲೇ ಕೊಲೆ ನಡೆದಿದ್ದು, ಹುಂಡಿ ಹಣಕ್ಕಾಗಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಹುಂಡಿ ಹೊತ್ತೊಯ್ದು ದೇಗುಲದ ಹೊರಗೆ ಬಿಸಾಡಲಾಗಿದೆ. ಸ್ಥಳಕ್ಕೆ ಐಜಿಪಿ ವಿಫುಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನುರಿತ ಕಳ್ಳರಿಂದಲೇ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮಂಡ್ಯ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರೈಲ್ವೆಯಲ್ಲಿ ಕೆಲಸ ಕೊಡಿಸೋದಾಗಿ ಲಕ್ಷಾಂತರ ರು. ಪೀಕಿದ ನೌಕರ..! .
ಈ ಹಿಂದೆಯೂ ಹಲವಾರು ಕೃತ್ಯಗಳಲ್ಲಿ ಭಾಗಿಯಾಗಿರುವ 5-10 ಮಂದಿ ಇರುವ ಚನ್ನಪಟ್ಟಣ ಮೂಲದ ಕಳ್ಳರ ತಂಡ ಈ ಕೃತ್ಯ ಎಸಗಿರಬಹುದಾದ ಶಂಕೆ ವ್ಯಕ್ತವಾಗಿದೆ.
ಮಂಡ್ಯ ಜಿಲ್ಲೆಯಲ್ಲೇ ಈ ಹಿಂದೆ ಮೂರ್ನಾಲ್ಕು ಇದೇ ರಿತಿಯ ಕೃತ್ಯಗಳು ನಡೆದಿದ್ದವು. ಹಿಂದೆ ಜಿಲ್ಲೆಯ ತೊಪ್ಪನಹಳ್ಳಿ, ಶ್ರೀರಂಗಪಟ್ಟಣದ ಕರೀಘಟ್ಟ, ಮಂಡ್ಯದ ಹೊಳಲು ತಾಂಡವೇಶ್ವರ ದೇವಾಲಯದಲ್ಲಿಯೂ ಕಳ್ಳತನ ನಡೆದಿದ್ದವು. ಇಂದಿನ ಪ್ರಕರಣಕ್ಕೂ, ಈ ಹಿಂದಿನ ಪ್ರಕರಣಗಳಿಗೂ ಸಾಮ್ಯತೆ ಇದ್ದು, ಆರೋಪಿಗಳ ಪೊಲೀಸರು ಬಲೆ ಬೀಸಿದ್ದಾರೆ.
ತಲಾ ಐದು ಲಕ್ಷ ಪರಿಹಾರ
ಇನ್ನು ಹತ್ಯೆಯಾದ ಮೂವರು ಅರ್ಚಕರ ಕುಟುಂಬಕ್ಕೆ ತಲಾ ಐದು ಲಕ್ಷ ಪರಿಹಾರ ಘೊಷಿಸಿ ಸಿಎಂ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದ್ದಾರೆ.
ಮಂಡ್ಯದ ಅರಕೇಶ್ವರ ದೇವಸ್ಥಾನದ ಪೂಜಾರಿಗಳಾಗಿದ್ದ ಶ್ರೀ ಗಣೇಶ್, ಶ್ರೀ ಪ್ರಕಾಶ್ ಮತ್ತು ಶ್ರೀ ಆನಂದ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ದೇವಸ್ಥಾನದ ಹುಂಡಿಯನ್ನು ಕಳ್ಳತನ ಮಾಡಿರುವ ವಿಷಯ ತಿಳಿದು ಅತ್ಯಂತ ನೋವಾಗಿದೆ. (1/2)
— CM of Karnataka (@CMofKarnataka)ಹತ್ಯೆಗೊಳಗಾದ ದೇವಸ್ಥಾನದ ಪೂಜಾರಿಗಳ ಕುಟುಂಬಕ್ಕೆ ತಲಾ 5.00 ಲಕ್ಷ ರೂ. ಪರಿಹಾರ ನೀಡಲಾಗುವುದು. ತಪ್ಪಿತಸ್ಥರ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. (2/2)
— CM of Karnataka (@CMofKarnataka)