ಗಣಪತಿ ಕಾರ್ಯಕ್ರಮದಲ್ಲಿ ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್‌ಗೆ ಗಾಯ, ಆಸ್ಪತ್ರೆ ದಾಖಲು

Published : Sep 12, 2026, 10:55 PM IST
Mandya MLA Ganiga Ravikumar Suffers Injury

ಸಾರಾಂಶ

ಗಣಪತಿ ಮೂರ್ತಿ ರಿವೀಲ್ ಕಾರ್ಯಕ್ರಮದಲ್ಲಿ ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ತಲೆಗೆ ಗಾಯವಾಗಿದೆ. ತಕ್ಷಣವೇ ಶಾಸಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಸಕರು ಗಾಯಗೊಂಡಿದ್ದು ಹೇಗೆ?

ಮಂಡ್ಯ (ಸೆ.12) ರಾಜ್ಯದಲ್ಲಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಮಂಡ್ಯದಲ್ಲಿ ಗಣಪತಿ ಹಬ್ಬ ಆಚರಣೆ ಜೋರಾಗಿದೆ. ಬೃಹತ್ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೂ ಮುನ್ನ ಮೂರ್ತಿಯನ್ನು ಅನಾವರಣ ಮಾಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ರವಿಕುಮಾರ್ ತಲೆಗೆ ಗಾಯವಾಗಿದೆ. ಕಾರ್ಯಕ್ರಮದಲ್ಲಿ ಹಾಕಲಾಗಿದ್ದ ಸ್ಕ್ರೀನ್‌ನ ಕೊಂಡಿ ಬಿದ್ದು ರವಿಕುಮಾರ್ ಗಾಯಗೊಂಡಿದ್ದಾರೆ. ತಕ್ಷಣ ಶಾಸಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಲೆಗೆ ಬಿದ್ದ ಸ್ಕ್ರೀನ್ ಕೊಂಡಿ

ಮಂಡ್ಯದ ಮರಿಗೌಡ ಬಡಾವಣೆಯಲ್ಲಿ ಪ್ರತಿ ವರ್ಷ ಅದ್ದೂರಿಯಾಗಿ ಗಣೇಶೋತ್ಸವ ಆಚರಿಸಲಾಗುತ್ತದೆ. ಈ ಬಾರಿಯೂ ಬೃಹತ್ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗಣೇಶನ ಪ್ರತಿಷ್ಠಾಪನೆಗೂ ಮೊದಲು ಮೂರ್ತಿಯನ್ನು ಅನಾವರಣ ಮಾಡುವ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರು ಗಾಯಗೊಂಡಿದ್ದಾರೆ. ಸ್ಕ್ರೀನ್‌ನ ಕೊಂಡಿ ಶಾಸಕರ ತಲೆ ಮೇಲೆ ಬಿದ್ದು ಗಾಯಗೊಂಡಿದ್ದಾರೆ.ಅದ್ಧೂರಿ ಕಾರ್ಯಕ್ರಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಗಾಯಗೊಂಡ ಶಾಸಕ ಗಣಿಗ ರವಿಕುಮಾರ್ ಅವರನ್ನು ತಕ್ಷಣವೇ ಮಂಡ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಶಾಸಕರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಪಂದನ ಆಸ್ಪತ್ರೆಯತ್ತ ಶಾಸಕ ಗಣಿಗ ರವಿಕುಮಾರ್ ಬೆಂಬಲಿಗರು ದೌಡಾಯಿಸಿದ್ದಾರೆ.

PREV
Read more Articles on
click me!

Recommended Stories

ಮಡಿಯಾಲದಲ್ಲಿ ಶೀಘ್ರದಲ್ಲೇ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಉನ್ನತ ಶಿಕ್ಷಣ ಕೇಂದ್ರ ಕಾರ್ಯಾರಂಭ
Belagavi: ಕಾರ್ ಓಡಿಸಿದ ವ್ಯಕ್ತಿಗೆ ಹೆಲ್ಮೆಟ್ ಫೈನ್! ಪೊಲೀಸರ ಯಡವಟ್ಟಿಗೆ ಹೆಲ್ಮೆಟ್ ಧರಿಸಿ ಪ್ರತಿಭಟಿಸಿದ ಮಾಲೀಕ!