ಮಂಡ್ಯ ಹಾಡ್ಲಿ ಗ್ರಾಮದಲ್ಲಿ ಸುಟ್ಟ ಶವ ಪ್ರಕರಣಕ್ಕೆ ಭೀಕರ ಟ್ವಿಸ್ಟ್; ತಾಯಿ, ಅಕ್ಕ, ಅಳಿಯರಿಂದಲೇ ಸಿದ್ದರಾಜು ಕೊಲೆ!

Published : Jun 09, 2025, 09:35 AM IST
Mandya Brunt Body Case

ಸಾರಾಂಶ

ಮಳವಳ್ಳಿ ತಾಲೂಕಿನ ಹಾಡ್ಲಿ ಗ್ರಾಮದಲ್ಲಿ ಪತ್ತೆಯಾದ ಸುಟ್ಟ ಶವದ ಪ್ರಕರಣದಲ್ಲಿ ಭೀಕರ ಟ್ವಿಸ್ಟ್. ಮನೆಯವರೇ ಸೇರಿಕೊಂಡು ಕೊಲೆ ಮಾಡಿ ಜಮೀನಿನಲ್ಲಿ ಸುಟ್ಟು ಹಾಕಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.

ಮಂಡ್ಯ (ಜೂ.09): ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಾಡ್ಲಿ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ಪತ್ತೆಯಾದ ಸುಟ್ಟ ಸ್ಥಿತಿಯ ಶವದ ಪ್ರಕರಣಕ್ಕೆ ಭೀಕರ ಟ್ವಿಸ್ಟ್ ಸಿಕ್ಕಿದೆ. ಈ ದುರ್ಘಟನೆಯ ಹಿಂದೆ ಯಾರಾದರೂ ಶತ್ರುಗಳು ಇರಬಹುದು ಎಂಬ ಅನುಮಾನದಲ್ಲಿದ್ದ ಪೊಲೀಸರು, ಸಾವಿನ ಸುತ್ತಲೂ ತನಿಖೆ ನಡೆಸಿದಾಗ ಸ್ವತಃ ಆತನ ಮನೆಯವರ ಸುತ್ತಲೂ ಸಾಕ್ಷಿ ಲಭ್ಯವಾಗಿವೆ. ಮನೆಯವರೇ ಸೇರಿಕೊಂಡು ಕೊಲೆ ಮಾಡಿ ನಂತರ ಜಮೀನಿನಲ್ಲಿ ಸುಟ್ಟು ಹಾಕಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.

ಪ್ರಕರಣದ ವಿವರ: ಕಳೆದ ಮೂರು ದಿನಗಳ ಹಿಂದೆ ಹಾಡ್ಲಿ ಗ್ರಾಮದ ಜಮೀನೊಂದರಲ್ಲಿ ಸಂಪೂರ್ಣವಾಗಿ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿತ್ತು. ಈ ಕುರಿತು ಹಲಗೂರು ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದರು. ಶವದ ಗುರುತು ಪತ್ತೆ ಹಚ್ಚಿದಾಗ, ಅದು ಸಿದ್ದರಾಜು ಎಂಬಾತನದ್ದು ಎಂದು ತಿಳಿದುಬಂದಿತು. ಇದೇ ತನಿಖೆಯಲ್ಲಿ ಅತ್ಯಂತ ಶೋಚನೀಯ ವಿಷಯವೊಂದು ಬೆಳಕಿಗೆ ಬಂದಿದೆ. ಸಿದ್ದರಾಜುವನ್ನು ಕೊಲೆಗೈದು ಶವವನ್ನು ಸುಟ್ಟು ಹಾಕಿದ್ದವರು ಬೇರೆ ಯಾರೂ ಅಲ್ಲ, ಅವನ ತಾಯಿ, ಅಕ್ಕ, ಅಕ್ಕನ ಮಗ ಹಾಗೂ ಅಳಿಯ.

ಆರೋಪಿಗಳ ವಿವರ:

  • ತಾಯಿ : ನಿಂಗಮ್ಮ
  • ಅಕ್ಕ : ಪದ್ಮ
  • ಅಳಿಯ : ನವೀನ್ ಅಲಿಯಾಸ್ ಬೆಟ್ಟೇಗೌಡ
  • ಅಕ್ಕನ ಮಗ : ನಂದೀಶ್

ಕೊಲೆ ಹಿನ್ನೆಲೆ:

ಪತ್ನಿ ಬಿಟ್ಟು ಹೋಗಿದ್ದರಿಂದ ಸಿದ್ದರಾಜು ಮಾನಸಿಕವಾಗಿ ವಿಚಲಿತ (mentally disturbed) ಆಗಿದ್ದನು. ಈ ಹಿನ್ನೆಲೆಯಲ್ಲಿ ತಾಯಿ ಮತ್ತು ಅಕ್ಕನ ಮೇಲೆ ಪದೇಪದೇ ಕೆಟ್ಟ ಪದಗಳನ್ನು ಬಳಸಿ ಮಾತನಾಡುತ್ತಿದ್ದನಯ. ಜೊತೆಗೆ, ಅಕ್ಕನ ಮಗಳಿಗೂ ವೈವಾಹಿಕ ಜೀವನದಲ್ಲಿ ಬಿಕ್ಕಟ್ಟು ಬಂದಿತ್ತು. ಇದಕ್ಕೂ ಸಿದ್ದರಾಜುವೇ ಕಾರಣನೆಂದು ನವೀನ್ ನಂಬಿದ್ದನು. ಆಗಲೇ ಆಸ್ತಿ ವಿಚಾರವಾಗಿ ಅಕ್ಕನ ಮೇಲೂ ಶಂಕೆ ವ್ಯಕ್ತಪಡಿಸುತ್ತಿದ್ದ ಸಿದ್ದರಾಜು, ತನ್ನ ಕೋಪ, ನಿಂದನೆಗಳಿಂದ ಕುಟುಂಬಸ್ಥರು ರೋಸಿ ಹೋಗುವಂತೆ ಮಾಡಿದ್ದನು. ಅಂತಿಮವಾಗಿ, ಈ ಎಲ್ಲ ಬೇಸರಗಳು ಕ್ರೌರ್ಯಕ್ಕೆ ತಿರುಗಿದ್ದವು. ಇದಾದ ನಂತರ ನವೀನ್, ತಾಯಿ ನಿಂಗಮ್ಮ, ಅಕ್ಕ ಪದ್ಮ ಹಾಗೂ ನಂದೀಶ್ ಸೇರಿಕೊಂಡು ಮನೆ ಮಂದಿಗೆಲ್ಲಾ ಕಿರುಕುಳ ನೀಡುತ್ತಿದ್ದ ಸಿದ್ದರಾಜುನನ್ನು ಕೊಲೆ ಮಾಡಿ ನಂತರ, ಶವವನ್ನು ಹೊತ್ತೊಯ್ದು ಜಮೀನಿನಲ್ಲಿ ಸುಟ್ಟು ಹಾಕಿದ್ದರು.

ಪೊಲೀಸ್ ತನಿಖೆ ಯಶಸ್ವಿ:

ಹಲಗೂರು ಪೊಲೀಸರು ಪ್ರಕರಣವನ್ನು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಿದ ಫಲವಾಗಿ, ಕೊಲೆಗಾಗಿ ಜಮೀನಿನಲ್ಲಿ ಸುಟ್ಟ ಶವದ ಹಿಂದೆ ಇರುವ ಭೀಕರ ಕುಟುಂಬ ಕುತಂತ್ರವನ್ನು ಬಯಲು ಮಾಡಿದರು. ಈಗ ಈ ನಾಲ್ವರೂ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಈ ಘಟನೆ ಮಂಡ್ಯ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಆಘಾತದ ಅಲೆ ಎಬ್ಬಿಸಿದೆ. ತಾಯಿ, ಅಕ್ಕ, ಅಳಿಯ, ಮೊಮ್ಮಗ ಸೇರಿ ಮನೆಯವರನ್ನೇ ಕೊಂದಿರುವ ಈ ಕ್ರೂರ ಘಟನೆಯು ನೈತಿಕ ಮೌಲ್ಯಗಳ ಕುಸಿತಕ್ಕೆ ಉದಾಹರಣೆಯಾಗಿದೆ.

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ