ಮದುವೆ ಆಫರ್ ನೀಡಿ ಐದು ಹೆಣ್ಮಕ್ಕಳ ಜೊತೆಗೆ ಸೆ*ಕ್ಸ್..! ಕೊನೆಗೆ ಕೈಕೊಡಲು ಹೋಗಿ ಅರೆಸ್ಟ್ ಆದ ವಂಚಕ

Kannadaprabha News   | Kannada Prabha
Published : Mar 24, 2026, 07:05 AM IST
Bengaluru Crime

ಸಾರಾಂಶ

ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಆರೋಪದ ಮೇಲೆ ತಮಿಳುನಾಡು ಮೂಲದ ಜೀವನ್ ವಾಸುದೇವ್ ಎಂಬಾತನನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ, ಆರೋಪಿಯು ಇದೇ ರೀತಿ ಸುಮಾರು ಐದಾರು ಯುವತಿಯರಿಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರು: ಯುವತಿಯೊಬ್ಬರಿಗೆ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಆರೋಪದ ಮೇರೆಗೆ ಆರೋಪಿಯನ್ನು ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

24 ವರ್ಷದ ಯುವತಿಗೆ ವಂಚನೆ

ಬಂಧಿತ ವ್ಯಕ್ತಿ ತಮಿಳುನಾಡು ಮೂಲದ ಜೀವನ್ ವಾಸುದೇವ್ (31) ಹುಳಿಮಾವು ನಿವಾಸಿಯಾದ 24 ವರ್ಷದ ಯುವತಿಗೆ ವಂಚಿಸಿದ್ದಾನೆ. ಈ ಸಂಬಂಧ ಆಕೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ವಿಚಾರಣೆಯಲ್ಲಿ ಇದೇ ರೀತಿ ಸುಮಾರು ಐದಾರು ಮಂದಿ ಯುವತಿಯರಿಗೆ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ್ದಾನೆ ಎಂಬುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೀವ ಬೆದರಿಕೆ:

ಆರೋಪಿ ಜೀವನ್, ನಗರದ ಹೊಸರೋಡ್‌ನಲ್ಲಿ ಜಾಮ್ ಎಂಬ ಡಾನ್ಸ್ ಸ್ಟುಡಿಯೋ ನಡೆಸುತ್ತಿದ್ದ. ಜತೆಗೆ ಹೌಸ್‌ಕಿಪಿಂಗ್‌ ಮತ್ತು ಭದ್ರತಾ ಸಿಬ್ಬಂದಿ ಒದಗಿಸುವ ಸಂಸ್ಥೆ ಕೂಡ ನಡೆಸುತ್ತಿದ್ದ. 2018 ರಿಂದ ಸಂತ್ರಸ್ತೆಗೆ ಆರೋಪಿಯ ಪರಿಚಯವಿದ್ದು, 2025ರ ಜೂನ್‌ನಲ್ಲಿ ಆರೋಪಿ ತನ್ನ ಪ್ರೇಮ ನಿವೇದನೆ ಮಾಡಿಕೊಂಡು, ಮದುವೆಯಾಗುವುದಾಗಿ ಸಂತ್ರಸ್ತೆಗೆ ಹೇಳಿದ್ದ. ದೂರುದಾರರು ತಾಯಿಯನ್ನೂ ಕೂಡ ಒಪ್ಪಿಸಿದ್ದರು. ಬಳಿಕ, ಆರೋಪಿ ಎಇಸಿಎಸ್ ಲೇಔಟ್‌ನ ಸರ್ವೀಸ್ ಅಪಾರ್ಟಮೆಂಟ್‌ ಮತ್ತು ಹೊಸರೋಡ್‌ನಲ್ಲಿರುವ ಹೋಟೆಲ್‌ಗೆ ಕರೆದೊಯ್ದು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಆ ನಂತರ ಆರೋಪಿಯನ್ನು ಭೇಟಿಯಾದ ಸಂತ್ರಸ್ತೆ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಳು. ಆಗ ಆರೋಪಿ, ನಾನು ನಿನ್ನನ್ನು ಮದುವೆ ಆಗುವುದಿಲ್ಲ. ನೀನು ನನಗೆ ದೈಹಿಕ ತೃಪ್ತಿ ನೀಡುತ್ತಿಲ್ಲ ಎಂದಿದ್ದಲ್ಲದೇ ಆಕೆಯ ನಡತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅವಾಚ್ಯವಾಗಿ ನಿಂದಿಸಿದ್ದ.

ಈ ವಿಚಾರವಾಗಿ ಪೊಲೀಸ್ ಠಾಣೆಗೆ ದೂರು ನೀಡಿದರೆ ಕೊಲೆ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದ. ಈ ಸಂಬಂಧ ಸಂತ್ರಸ್ತೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Read more Articles on
click me!

Recommended Stories

ಕಣ್ಣು ಕಾಣದ ಸ್ನೇಹಿತೆಯ ಮನೆಯಲ್ಲಿ ಚಿನ್ನ ಕದ್ದ ಖತರ್ನಾಕ್ ದಂಪತಿ! ಒಂದು ವರ್ಷದ ಬಳಿಕ ಪ್ರಕರಣ ಬಯಲು, ಅರೆಸ್ಟ್!
ಲಕ್ಕುಂಡಿ ಮಣ್ಣಲ್ಲಿ ಅಡಗಿದ್ದ ಚಾಲುಕ್ಯರ ರಹಸ್ಯ ಪತ್ತೆ! 13 ಸಾಲುಗಳಲ್ಲಿ ಕನ್ನಡ ಶಾಸನ, ಜಗದೇಕಮಲ್ಲನ ಆಳ್ವಿಕೆ ಉಲ್ಲೇಖ