
ಬೆಂಗಳೂರು (ಆ.18): ಸಿದ್ಧರಾಮಯ್ಯ 24 ಕೊಲೆ ಮಾಡಿದ ವ್ಯಕ್ತಿ. ಗೃಹ ಸಚಿವ ಪರಮೇಶ್ವರ್ ನರಸತ್ತ ವ್ಯಕ್ತಿ. ಆತ ಮಾತನಾಡೋದಲ್ಲ ಬೊಗಳೋದು... ಹೀಗೆ ರಾಜ್ಯದ ಸಿಎಂ ಹಾಗೂ ಗೃಹ ಮಂತ್ರಿಗಳ ವಿರುದ್ಧ ವಿವಾದಾತ್ಮಕವಾಗಿ ಮಾತನಾಡಿದ್ದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ತಕ್ಷಣವೇ ಬಂಧಿಸುವಂತೆ ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ಸೂಚನೆ ನೀಡಿದ್ದಾರೆ.ಕಳೆದೊಂದು ವರ್ಷದಲ್ಲಿ ವಿವಿಧ ವೇದಿಕೆಗಳಲ್ಲಿ, ಸೋಶಿಯಲ್‌ಮೀಡಿಯಾಗಳಲ್ಲಿ ಮಾತನಾಡುವ ವೇಳೆ ಮಹೇಶ್ ಶೆಟ್ಟಿ ತಿಮರೋಡಿ ಈ ಮಾತುಗಳನ್ನು ಆಡಿದ್ದರು. ಇದೆಲ್ಲವನ್ನೂ ಗಮನಿಸಿದ ಸರ್ಕಾರ ತಿಮರೋಡಿ ವಿರುದ್ಧ ಕ್ರಮಕ್ಕೆ ಆದೇಶ ಹೊರಡಿಸಿದೆ.
ಜಿ.ಪರಮೇಶ್ವರ್‌ಗೆ ನರ ಉಂಟಾ? ಆತ ನರಸತ್ತ ಒಬ್ಬ ಗೃಹಮಂತ್ರಿ. ನಾನು ಹೇಳುವಂಥದ್ದು.ಈಗ ಸುಗ್ರೀವಾಜ್ಞೆ ಜಾರಿಯಲ್ಲಿದೆ ಅಂತಾ ಯಾಕೆ ಹೇಳಿದ್ರು? ನೋಡ್ವಾ ಅದನ್ನ ಯಾಕೆ ಜಾರಿ ಮಾಡಿದ್ದು ಅನ್ನೋದು ಹೇಳಲಿ.
ನಾನು ಮೊನ್ನೆ ಒಂದು ಸಾರಿ ಹೇಳಿದ್ದೇನೆ. ಧರ್ಮಸ್ಥಳ ಎನ್ನುವ ನ್ಯಾಯಪೀಠದಲ್ಲಿ, ಧರ್ಮಪೀಠದಲ್ಲಿ ನ್ಯಾಯ ಸಿಗ್ಲಿಲ್ಲ ಅಂದ್ರೆ ಆ ದೇವಸ್ಥಾನ ಯಾಕೆ ನಮಗೆ? ಆ ಮಂಜುನಾಥ ಯಾಕೆ? ಆ ಅಣ್ಣಪ್ಪ ಯಾಕೆ? ಅದನ್ನ ಬುಲ್ಡೋಜರ್ ಹಾಕಿ ಬೀಳಿಸಬೇಕು ಎಂದಿದ್ದೇನೆ.
ನಾನು ಯಾವ ದೇವರಿಗೂ ಹೆದರುವವನು ಅಲ್ಲ.ಅಲ್ಲಿ ಕಾಣತ್ತೂರು, ಇಲ್ಲಿ ಧರ್ಮಸ್ಥಳ. ನನಗೆ ಯಾವುದೂ ಲೆಕ್ಕಕ್ಕೆ ಇಲ್ಲ. ಧರ್ಮಸ್ಥಳದಲ್ಲಿ ಅಣ್ಣಪ್ಪನಿಗೆ, ಮಂಜುನಾಥನಿಗೆ ಕೈ ಮುಗಿಯುವುದು ವೇಸ್ಟ್. ಜೆಸಿಬಿ ತಂದು ಆ ದೇವಸ್ಥಾನವನ್ನು ಒಡೆದುಹಾಕಲಿ.
ಆ ಸಿದ್ಧರಾಮಯ್ಯ ಮಾತನಾಡುವಾಗ, ಆಂ ಆಂ ಅಂತಾ ಮಾತಾಡ್ಲಿಕ್ಕೆ ಆಗ್ತದೆ. ಒಂದು ಅಕ್ವಿಟಲ್ ಕಮಿಟಿ ಇಲ್ಲಿಯವರೆಗೆ ರಚನೆ ಮಾಡ್ಲಿಕ್ಕೆ ಆಗ್ಲಿಲ್ಲ ಸಿದ್ಧರಾಮಯ್ಯಗೆ. ಎಷ್ಟು ಮಂದಿ ಇದ್ದಾರೆ ಇಲ್ಲಿ. ಗೃಹ ಮಂತ್ರಿ. ಅವನಂತೂ ದೊಡ್ಡ ಅವಿವೇಕಿ. ಅವನಿಗೆ ಪೂರ್ತಿ ಬುರುಡೆ ಇಲ್ಲ. ಬುರುಡೆ ಇಲ್ಲದಂತ ಜನಗಳನ್ನು ಹಾಕಿಕೊಂಡು ನೀವು ಏನು ಸರ್ಕಾರ ಮಾಡ್ತೀರಿ ಸ್ವಾಮಿ? ಈಗ ಇದೇ ಸಿದ್ಧರಾಮಯ್ಯ ಹತ್ರ ನಾನು ಪ್ರಶ್ನೆ ಮಾಡ್ತಾ ಇದ್ದೇನೆ? ನಿಮಗೆ ಸ್ವಲ್ಪವಾದರೂ ಮುಖದಲ್ಲಿ ಚರ್ಮ ಅಂತಾ ಇದ್ರೆ, ಮಾನ ಮರ್ಯಾದೆ ಉಳಿಸಿಕೊಳ್ಳೋಕೆ ಇದ್ರೆ, ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೇ ಹೇಳಿದ್ನಲ್ಲ 24 ಮರ್ಡರ್ ಮಾಡಿದ ಸಿದ್ಧರಾಮಯ್ಯ ಅಂತಾ. ಏನಾದ್ರೂ ಮಾಡ್ಲಿಕ್ಕೆ ಆಯ್ತಾ? ಅವರ ಮೇಲಿನ ಆರೋಪ ಇದ್ರೂ ಏನೂ ಮಾಡೋಕೆ ಆಗ್ತಿಲ್ಲ. ಅವರಿಗೆ ಜ್ಞಾನ ಇಲ್ವಾ? ಕಲಿತದ್ದು ಜಾಸ್ತಿ ಆಗಿದ್ಯಾ? ಇಲ್ಲ ಅಧಿಕಾರದ ಮದ ಜಾಸ್ತಿ ಆಯ್ತಾ? ಗೊತ್ತಿಲ್ಲ. ಇದನ್ನೆಲ್ಲಾ ನೋಡುವಾಗ ನಮಗೆ ಅಯ್ಯೋ ಅನಿಸ್ತದೆ.
ಸ್ವಾರ್ಥಕ್ಕೆ ಬದುಕುವವರಿಗೋಸ್ಕೋರ, ಸಮಾಜವನ್ನು ಹಾಳು ಮಾಡುವವರಿಗೆ ನೀವು ಅವಕಾಶ ಕೊಡ್ತಿರಿ. ಹೈಕೋರ್ಟ್‌ನಲ್ಲಿ ಸೌಜನ್ಯಳ ಕೇಸ್ ಹಾಕಿದ್ದೇವೆ. ಎರಡು ಮೂರು ಸಲ ಡೇಟ್ ಬಂದಿದೆ. ಒಂದು ಅವಕಾಶ ಕೊಡಿ ಮರುತನಿಖೆಗೆ ಅಂತಾ ಕೇಳಿದ್ರೆ ನಿಮ್ಮ ನಾಲಿಗೆಗೆ ಏನು ಬೀಗ ಬಿದ್ದಿದ್ಯಾ? ಅಣ್ಣಪ್ಪನ,ಮಂಜುನಾಥನ ಶಾಪ ಹಾಳಾಗಿ ಹೋಗ್ತೀರಾ. ಮೊನ್ನೆ ಚುನಾವಣೆ ಟೈಮ್‌ನಲ್ಲಿ ಬಂದು ಹೋಗಿದ್ರಿ. ಆಯ್ತು, ಗೊತ್ತಾಯ್ತಲ್ಲ ನಿಮ್ಮ ಹಣೆಬರಹ. ಮಂಜುನಾಥನ ಅಣ್ಣಪ್ಪನ ಶಾಪ ಮುಂದಿನ ದಿನಗಳಲ್ಲಿ ನಿಮ್ಮ ಮನೆಗಳಲ್ಲಿ ಕಳೆದುಕೊಳ್ಳುತ್ತೀರಿ. ಅಧಿಕಾರಗಳು ಮಾತ್ರವಲ್ಲ ನಿಮ್ಮ ಮನೆಗಳಲ್ಲೂ ಕಳೆದುಕೊಳ್ತೀರಿ. ಎಚ್ಚರಿಕೆ ಇರ್ಲಿ. ಆಲ್ರಡಿ ಕಳೆದುಕೊಂಡಿದ್ದಾಗಿದೆ ಸಿದ್ಧರಾಮಯ್ಯ ಅವರೇ, ಬಿಜೆಪಿ ಲೀಡರ್‌ಗಳು ಕೂಡ ಮನೆಯಲ್ಲಿ ಮಕ್ಕಳನ್ನು ಕಳೆದುಕೊಂಡಿದ್ದಾರೆ. ಇದು ಅಣ್ಣಪ್ಪನ ಮಂಜುನಾಥನ ಶಾಪ. ಸಿದ್ಧರಾಮಯ್ಯಗೂ ಕೂಡ ಹೇಳ್ತೇನೆ. ನೀವು ಸಿಂಪತಿ ಗಿಟ್ಟಿಸಿಕೊಳ್ಳುವುದು ಬೇಡ. ಮುಖದಲ್ಲಿ ಸ್ವಲ್ಪ ಚರ್ಮ ಇದ್ರೆ ನ್ಯಾಯ ಕೊಡಿಸಿ.
ಇನ್ನು ಅವರು ಹೊಡೆದ್ರೆ ನಾವೂ ಹೊಡೀತೇವೆ. ಇದನ್ನ ತಕ್ಷಣ ಈ ರಾಜ್ಯದ ಸಿದ್ಧರಾಮಯ್ಯ ಸರ್ಕಾರ ನಿದ್ರೆ ಹೊಡೆಯೋದನ್ನು ಬಿಟ್ಟು ಮಾಡ್ಲಿಲ್ಲ ಅಂದ್ರೆ ಮುಂದಿನ ದಿನಗಳಲ್ಲಿ ನಾವು ಕೂಡ ಕಾನೂನು ಕೈಗೆ ತೆಗೆದುಕೊಳ್ಳಬೇಕಾಗುತ್ತದೆ.
ಆ ಸಿದ್ಧರಾಮಯ್ಯಗೆ, ಡಿಕೆಶಿಗೆ ಮಾಡ್ಬಹುದಿತ್ತು.ಹಿಂದು ದೇವಸ್ಥಾನ ಅಲ್ಪಸಂಖ್ಯಾತರ ಕೈಗೆ ಹೇಗೆ ಬಂತು ಅಂತಾ? ಬೇರೆ ಎಲ್ಲರ ಹತ್ರ ಆ, ಊ ಅಂತಾ ಮಾತನಾಡ್ತೀರಲ್ಲ, ಅಲ್ಪಸಂಖ್ಯಾತರಾದ ನಿಮ್ಮ ಕೈಗೆ ಹಿಂದು ದೇವಸ್ಥಾನ ಹೇಗೆ ಬಂತು ಅಂತಾ ಕೇಳ್ಬಹುದಿತ್ತು. ಮುಖ್ಯಮಂತ್ರಿ ಅಲ್ವಾ ಕೇಳೋ ಅಧಿಕಾರ ಇತ್ತು. ನಾನಾದ್ರೆ ಕೇಳ್ತಿದ್ದೆ. ಮುಜರಾಯಿ ಇಲಾಖೆಗೆ ಬರೆದುಹಾಕ್ತಿದ್ದೆ. ತಾಖತ್ ಬೇಕ್ರಿ. ಕುರ್ಚಿ ಬಿಸಿ ಮಾಡೋದಲ್ಲ. ಮುಖ್ಯಮಂತ್ರಿ ಆದ್ರೆ ಅವ್ನಿಗೆ ಆಯ್ತು. ಡಿಸಿಎಂ ಆದ್ರೆ ಅವ್ನಿಗೆ ಆಯ್ತು. ಪ್ರಧಾನಮಂತ್ರಿ ಆದ್ರೆ ಅವ್ನಿಗೆ ಆಯ್ತು. ಧರ್ಮ ತಪ್ಪಿದ್ರೆ ಯಾರನ್ನೂ ಬಿಡೋದಿಲ್ಲ ನಾವು. ಇದು ಸತ್ಯ.
ಜಿ.ಪರಮೇಶ್ವರ ನೋಡು ನಿನ್ನ ಹೇಳಿಕೆ ಇದು. ನೀನು ಗೃಹಚಾರ ಕೆಟ್ಟ ಗೃಹಮಂತ್ರಿ. ಯಾಕೆ ಅಂದ್ರೆ 2023ರ ಜೂನ್ 14ಕ್ಕೆ ಅಕ್ವಿಟಲ್ ಕಮಿಟಿ ರಚನೆ ಮಾಡ್ಬೇಕು ಅಂತಾ ಆದೇಶ ಆಗಿದೆ. ಇದರಲ್ಲಿ ತನಿಖೆ ಮಾಡಿದ ತನಿಖಾಧಿಕಾರಿ ಯಾರೆಲ್ಲಾ ಇದ್ದಾರೆ. ಅವರ ಮೇಲೆ ಕೇಸ್ ಮಾಡ್ಬೇಕು, ಅವರ ಮೇಲೆ ತನಿಖೆ ಮಾಡ್ಬೇಕು. ಯಾವ ಡಾಕ್ಟರ್ ಇದ್ದಾರೆ. ಆತ ಸತ್ತು ಹೋದ. ಕೊಲೆ ಮಾಡಿ ಬಿಸಾಡಿದ್ರು ಅವನನ್ನು. ಯಾರು? ಈ ರಾಜ್ಯ ಸರ್ಕಾರ ಇದಕ್ಕೆ ಹೊಣೆ. ಡಾ. ಆದಮ್‌ನನ್ನು ಕೊಲೆ ಮಾಡ್ಲಿಕ್ಕೆ ರಾಜ್ಯ ಸರ್ಕಾರ ಕೂಡ ಪರೋಕ್ಷವಾಗಿ ಸಹಾಯ ಮಾಡಿದೆ. ಡಾ. ಆದಮ್‌ನದ್ದು ಸಾವಲ್ಲ. ಕೊಲೆ ಅದು. ಸ್ಲೋ ಪಾಯಿಸನ್ ಹಾಕಿ ಕೊಲೆ ಮಾಡಿದ್ದಾರೆ. 7 ಅಲ್ಲ 8ನೇ ಸಾಕ್ಷಿಯನ್ನೂ ನಾಶ ಮಾಡಿದ್ದಾರೆ.
ಈ ದೇಶದ ಪ್ರಧಾನಿ,ಮುಖ್ಯಮಂತ್ರಿ ಇರಬಹುದು. ಈ ರಾಜ್ಯದ ಗೃಹಮಂತ್ರಿ ಒಬ್ಬ ಇದ್ದಾನೆ ನೋಡಿ. ಅವ ಒಬ್ಬ ಏನು ಬೊಗಳ್ತಾನೆ ಅಂತಾ ಹೇಳಿದ್ರೆ ಅವನಿಗೆ ಗೊತ್ತಿರೋದಿಲ್ಲ. ಮುಗಿದ ಅಧ್ಯಾಯ ಅಂತಾ ಹೇಳ್ತಾನೆ. ಇಂಥ ಒಬ್ಬ ನೀಚ ನಮ್ಮ ರಾಜ್ಯದ ಗೃಹಮಂತ್ರಿ ಆದ್ರೆ ಹೇಗ್ರಿ ನಾವು ಬದುಕೋದು? ಸೌಜನ್ಯ ಕೇಸ್ ಮುಗಿದ ಅಧ್ಯಾಯ ಅಂತಾರೆ. ಆದ್ರೆ ಗೃಹಸಚಿವರ ಮನೆಯಲ್ಲಿ ಹೆಂಡ್ತಿ ಮಕ್ಕಳು ಯಾರೂ ಇಲ್ವಾ?