‘ಗಡಿಯಲ್ಲಿ ಮರಾಠಿಗರ ಮೇಲೆ ದೌರ್ಜನ್ಯ ನಡೆಸಿದ್ರೆ ಮತ್ತೆ ಬೆಂಕಿ ಹತ್ತುತ್ತೆ’

By Suvarna News  |  First Published Jan 3, 2020, 11:58 AM IST

ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂಕೋರ್ಟ್ ನಲ್ಲಿದೆ‌ ಸುಪ್ರೀಂಕೋರ್ಟ್‌ನಲ್ಲಿ ಏನು ತೀರ್ಪು ಬರುತ್ತೆ ಕಾದು ನೋಡೋಣ| ಭೀಮಾಶಂಕರ್ ಪಾಟೀಲ್ ವಿರುದ್ಧ ಕ್ರಮ ಕೈಗೊಳ್ಳಬೇಕು|ಮರಾಠಿಗರ ಮೇಲೆ ಭಾಷಿಕ ದೌರ್ಜನ್ಯ ನಡೆಯುತ್ತಿದೆ|


ಬೆಳಗಾವಿ[ಜ.03]: ಮುಂಬೈ ದೇಶದ ಅತಿದೊಡ್ಡ ಆರ್ಥಿಕ ರಾಜಧಾನಿಯಾಗಿದೆ.  ಕರ್ನಾಟಕದ ರಾಜಕಾರಣಿಗಳು ಯಾರು ಮಹಾರಾಷ್ಟ್ರಕ್ಕೆ ಬರೋದೆ ಇಲ್ವಾ? ಕರ್ನಾಟಕ ನವನಿರ್ಮಾಣ ಸೇನೆಯ ಅಧ್ಯಕ್ಷ ಭೀಮಾಶಂಕರ್ ಪಾಟೀಲ್ ಗುಂಡು ಹಾರಿಸುವ ಹೇಳಿಕೆ ಕೊಟ್ಟಿದ್ದಾನೆ. ಇಂತಹ ಹೇಳಿಕೆ ಕೊಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಹಾರಾಷ್ಟ್ರ ಸಚಿವ ಹಸನ್ ಮುಶ್ರಿಫ್ ಉದ್ದಟತನದ ಹೇಳಿಕೆ ನೀಡಿದ್ದಾರೆ. 

"

Tap to resize

Latest Videos

ಮಹಾರಾಷ್ಟ್ರದ ಪುಂಡ ರಾಜಕಾರಣಿಗಳಿಗೆ ಬೆಳಗಾವಿ ವಿಮಾನ ನಿಲ್ದಾಣ ಪ್ರವೇಶಕ್ಕೆ ನಿಷೇಧಿಸಬೇಕೆಂಬ ಕರ್ನಾಟಕ ನವನಿರ್ಮಾಣ ಸೇನೆ ಒತ್ತಾಯ ವಿಚಾರದ ಬಗ್ಗೆ ಮಾತನಾಡಿದ ಅವರು, ಯಡಿಯೂರಪ್ಪ ಅಂತವರು ಮುಖ್ಯಮಂತ್ರಿ ಇದ್ದಾಗ ಈ ರೀತಿ ಮಾಡೋದು ಸರಿಯಲ್ಲ. ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂಕೋರ್ಟ್ ನಲ್ಲಿದೆ‌ ಸುಪ್ರೀಂಕೋರ್ಟ್‌ನಲ್ಲಿ ಏನು ತೀರ್ಪು ಬರುತ್ತೆ ಕಾದು ನೋಡೋಣ ಎಂದು ಹೇಳಿದ್ದಾರೆ.  

ಕರ್ನಾಟಕದಲ್ಲಿ ಮರಾಠಿ ಮಾತನಾಡುವವರು ಇದಾರೋ ಇಲ್ಲವೋ? ಇಲ್ಲಿಯ ಮರಾಠಿಗರ ಮೇಲೆ ಭಾಷಿಕ ದೌರ್ಜನ್ಯ ನಡೆಯುತ್ತಿದೆ ಇಲ್ವೋ? ಅವರಿಗೆ ಅನ್ಯಾಯ‌ ಆಗುತ್ತಿದೆ ಇಲ್ಲವೋ ಇದನ್ನೆಲ್ಲಾ ಸರ್ಕಾರ ನೋಡಬೇಕಲ್ವಾ‌ ? ಇದೇ ರೀತಿ ಮುಂದುವರಿದ್ರೆ ಮತ್ತೆ ಬೆಂಕಿ ಹತ್ತುತ್ತೆ ಎಂದು ಹೇಳಿದ್ದಾರೆ.  ಕಳೆದ ಎರಡು ದಿನಗಳ ಹಿಂದಷ್ಟೇ ಬೆಳಗಾವಿಗೆ ಬಂದಿದ್ದ ಹಸನ್ ಮುಶ್ರಿಫ್ ರಾತ್ರೋ ರಾತ್ರಿ ಪರಾರಿಯಾಗಿದ್ದರು. ಇದೀಗ ಮತ್ತೊಂದು ಉದ್ಧಟತನದ ಹೇಳಿಕೆ ನೀಡುವ ಮೂಲಕ ಗಡಿಯಲ್ಲಿ ಉರಿಯುವ ಬೆಂಕಿ ಸುರಿದಿದ್ದಾರೆ.

click me!