ಶನಿವಾರ 1046 ಮಂದಿಗೆ ಕೊರೋನಾ, 7 ಮಂದಿ ಬಲಿ| ಜುಲೈ ಮೊದಲ ವಾರದಲ್ಲಿ ನಗರದಲ್ಲಿ ಕೊರೋನಾ ಸೋಂಕು ಪ್ರಕರಣ ದಿನವೊಂದರಲ್ಲಿ ಒಂದು ಸಾವಿರ ಗಡಿ ದಾಟ್ಟಿತ್ತು, ಇದೀಗ ಐದು ತಿಂಗಳ ಬಳಿಕ ಶನಿವಾರ ನಗರದಲ್ಲಿ 1,100ಕ್ಕಿಂತಲೂ ಕಡಿಮೆ ಸೋಂಕು ಪ್ರಕರಣಗಳು ವರದಿಯಾಗಿದೆ|
ಬೆಂಗಳೂರು(ನ.08): ರಾಜಧಾನಿಯಲ್ಲಿ ಕೊರೋನಾ ಸೋಂಕು ತಗ್ಗಿದಂತೆ ಕಂಡು ಬಂದಿದ್ದು, ಶನಿವಾರ 1,046 ಹೊಸ ಪ್ರಕರಣ ವರದಿಯಾಗಿವೆ. ಇದು ಕಳೆದ ಐದು ತಿಂಗಳ ಬಳಿಕ ದಿನವೊಂದರಲ್ಲಿ ದಾಖಲಾದ 1,100ಕ್ಕಿಂತಲೂ ಕಡಿಮೆ ಪ್ರಕರಣವಾಗಿದೆ.
ಜುಲೈ ಮೊದಲ ವಾರದಲ್ಲಿ ನಗರದಲ್ಲಿ ಕೊರೋನಾ ಸೋಂಕು ಪ್ರಕರಣ ದಿನವೊಂದರಲ್ಲಿ ಒಂದು ಸಾವಿರ ಗಡಿ ದಾಟ್ಟಿತ್ತು. ಇದೀಗ ಐದು ತಿಂಗಳ ಬಳಿಕ ಶನಿವಾರ ನಗರದಲ್ಲಿ 1,100ಕ್ಕಿಂತಲೂ ಕಡಿಮೆ ಸೋಂಕು ಪ್ರಕರಣಗಳು ವರದಿಯಾಗಿದೆ.
ದೀಪಾವಳಿ ಹಬ್ಬ ಹೇಗೆ ಆಚರಣೆ ಮಾಡ್ಬೇಕು? ಸರ್ಕಾರದಿಂದ ಗೈಡ್ ಲೈನ್ಸ್
ಈ ಹೊಸ ಪ್ರಕರಣಗಳೊಂದಿಗೆ ನಗರದಲ್ಲಿ ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 3,47,748ಕ್ಕೆ ಏರಿಕೆಯಾಗಿದೆ. ಅಂತೆಯೇ ಒಂದೇ ದಿನ 502 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಗುಣಮುಖರಾದವರ ಸಂಖ್ಯೆ 3,25,824ಕ್ಕೆ ತಲುಪಿದೆ. ಸಾವಿನ ಪ್ರಮಾಣವೂ ಇಳಿಮುಖವಾಗಿದ್ದು, ಏಳು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈವರೆಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 3,945ಕ್ಕೆ ಏರಿಕೆಯಾಗಿದೆ. ಈ ನಡುವೆ ನಗರದಲ್ಲಿ ಇನ್ನೂ 17,978 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 480 ಮಂದಿ ಸೋಂಕಿತರಿಗೆ ವಿವಿಧ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.