ನಾವು ಪ್ರೀತಿ ಮಾಡಿ ಮದುವೆಯಾಗಿದ್ದೇವೆ. ನಮಗೆ ರಕ್ಷಣೆ ನೀಡಿ ಹೀಗೆಂದು ಪ್ರೇಮಿಗಳು ಮನವಿ ಮಾಡಿದ್ದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೋಲಾರ [ಡಿ.30]: ಪ್ರೀತಿಸಿ ವಿವಾಹವಾದ ಪ್ರೇಮಿಗಳಿಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ರಕ್ಷಣೆಗಾಗಿ ಮನವಿ ಮಾಡಿದ ವಿಡಿಯೋ ವೈರಲ್ ಆಗಿದೆ.
ಕೋಲಾರ ಜಿಲ್ಲೆಯ ಶಿಳ್ಳಂಗೆರೆಯ ಯುವಕ ಶ್ರೀನಿವಾಸ್ ಎಂಬಾತ ನಿಕ್ಕನಹಳ್ಳಿ ಗ್ರಾಮದ ಯುವತಿಯೊಂದಿಗೆ ವಿವಾಹವಾಗಿದ್ದು, ಇದಕ್ಕೆ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಈ ನಿಟ್ಟಿನಲ್ಲಿ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ತಮಗೆ ಮನೆಯವರಿಂದ ಪ್ರಾಣ ಬೆದರಿಕೆ ಇದ್ದು ಈ ನಿಟ್ಟಿನಲ್ಲಿ ತಲೆ ಮರೆಸಿಕೊಂಡಿದ್ದು, ರಕ್ಷಣೆಗಾಗಿ ಮನವಿ ಮಾಡಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇದೀಗ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಮ್ಮ ವಿವಾಹ ನಡೆದಿದೆ. ತಮ್ಮನ್ನು ರಕ್ಷಣೆ ಮಾಡಿ ಎಂದು ವಿಡಿಯೋದಲ್ಲಿ ಕೇಳಿಕೊಂಡಿದ್ದಾರೆ.
ಈ ಹಿಂದೆಯೂ ಕೂಡ ಈ ರೀತಿಯಲ್ಲಿ ಪ್ರೇಮಿಗಳು ತಮ್ಮ ರಕ್ಷಣೆಗಾಗಿ ಮನವಿ ಮಾಡಿದ್ದ ಅನೇಕ ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಮತ್ತೊಂದು ಜೋಡಿಯು ಸಾಮಾಜಿಕ ಜಾಲತಾಣದಲ್ಲಿ ರಕ್ಷಣೆಗೆ ಮನವಿ ಮಾಡಿದೆ.