ಕೃಷಿಕರಲ್ಲಿ ಆತಂಕ ಹುಟ್ಟಿಸಿದ ಮಿಡತೆಗಳು: ಕೇಂದ್ರ ವಿಜ್ಞಾನಿಗಳ ತಂಡ ಸ್ಥಳಕ್ಕೆ ಭೇಟಿ

By Kannadaprabha NewsFirst Published May 29, 2020, 3:00 PM IST
Highlights

ಕೋಲಾರ ಜಿಲ್ಲೆಯ ಹಳ್ಳಿಯೊಂದರಲ್ಲಿ ದಿಢೀರನೆ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡ ಮಿಡತೆಗಳು ಹಾನಿಕಾರಿಯಲ್ಲ ಎಂದು ಕೇಂದ್ರೀಯ ಸಮಗ್ರ ಕೀಟ ನಿರ್ವಹಣ ಕೇಂದ್ರದ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಕೋಲಾರ(ಮೇ 29): ಜಿಲ್ಲೆಯ ಹಳ್ಳಿಯೊಂದರಲ್ಲಿ ದಿಢೀರನೆ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡ ಮಿಡತೆಗಳು ಹಾನಿಕಾರಿಯಲ್ಲ ಎಂದು ಕೇಂದ್ರೀಯ ಸಮಗ್ರ ಕೀಟ ನಿರ್ವಹಣ ಕೇಂದ್ರದ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯ ಪ್ರಬೇಧದ ಈ ಮಿಡತೆಗಳು ಯಾವುದೇ ಕೃಷಿ ಬೆಳೆಯನ್ನು ಹಾನಿ ಮಾಡೋದಿಲ್ಲ. ಮರುಭೂಮಿಯ ಮಿಡತೆಗಳಂತೆ ಇಲ್ಲಿನ ಎಕ್ಕೆಗಿಡದ ಮಿಡತೆಗಳು ಕೃಷಿ ಬೆಳೆಗಳನ್ನು ತಿನ್ನೋದಿಲ್ಲ ಅಂತ ವಿಜ್ಞಾನಿಗಳು ಹೇಳಿದ್ದಾರೆ.

ಉಡುಪಿಗೆ ಮತ್ತೆ 'ಮಹಾ' ಸೋಂಕು: ಒಂದೇ ದಿನ 27 ಪ್ರಕರಣಗಳು

ಕೋಲಾರ ತಾಲೂಕಿನ ದಿಂಬ ಗ್ರಾಮದ ಎರಡು ಮೂರು ಎಕ್ಕೆ ಗಿಡದಲ್ಲಿ ಬುಧವಾರ ದಿಢೀರನೇ ಹೆಚ್ಚಿನ ಸಂಖ್ಯೆಯ ಮಿಡತೆಗಳು ಕಾಣಿಸಿಕೊಂಡಿವೆ. ಇದರಿಂದ ಆತಂಕಗೊಂಡ ಸ್ಥಳೀಯರು ಕೃಷಿ ಇಲಾಖೆಗೆ ಮಾಹಿತಿ ಕೊಟ್ಟಿದ್ದರಿಂದ ಅಧಿಕಾರಿಗಳು ಭೇಟಿ ಕೊಟ್ಟಿದ್ದರು.

ಮಿಡತೆಗಳಿದ್ದ ಎಕ್ಕೆ ಗಿಡಗಳಿಗೆ ಮೆಲಾಥಿನ್‌ ಅನ್ನೋ ದ್ರಾವಣವನ್ನು ಇದೇ ಸಂದರ್ಭದಲ್ಲಿ ಸಿಂಪಡಣೆ ಮಾಡಲಾಯಿತು. ನಂತರ ಈ ಜಾಗಕ್ಕೆ ಸಮೀಪವಿರುವ ತೋಟದ ಬೆಳೆಗಳನ್ನು ವಿಜ್ಞಾನಿಗಳ ತಂಡವು ಪರಿಶೀಲಿಸಿತು. ಬೆಳೆಗಳಿಗೆ ಹಾನಿಯಾಗಿಲ್ಲ ಅನ್ನೋದನ್ನು ಖಾತ್ರಿಪಡಿಸಿಕೊಂಡು ಸ್ಥಳೀಯರಲ್ಲಿದ್ದ ಆತಂಕವನ್ನು ನಿವಾರಿಸಿ ತಂಡವು ನಿರ್ಗಮಿಸಿತು.

ಲಾಕ್‌ಡೌನ್‌ ಎಫೆಕ್ಟ್‌: ಹೆತ್ತವರ ಕಷ್ಟ ನೋಡಲಾರದೆ ಸುಡು ಬಿಸಿಲಿನಲ್ಲೇ ವ್ಯಾಪಾರಕ್ಕೆ ನಿಂತ ಮಕ್ಕಳು..!

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್‌ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಮಿಡತೆಗಳ ಕಾಟ ಇಲ್ಲ, ವಿಜ್ಞಾನಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಈ ಮಿಡತೆಗಳು ಸ್ಥಳೀಯವಾಗಿರುವವು ಅದರಿಂದ ಯಾವುದೇ ಬೆಳೆಗಳಿಗೆ ತೊಂದರೆ ಆಗುವುದಿಲ್ಲ ಎಂದು ಕೇಂದ್ರೀಯ ಸಮಗ್ರ ಕೀಟ ನಿರ್ವಹಣ ಕೇಂದ್ರ ಡಾ.ಸುಧಾಕರ ತಿಳಿಸಿದ್ದಾರೆ.

click me!