ಶತಮಾನದ ಹಿಂದೆಯೇ ಸ್ಪ್ಯಾನಿಸ್‌ಫ್ಲ್ಯೂಗೆ ಅಥಣಿಯಲ್ಲಿ ಲಾಕ್‌ಡೌನ್‌!

By Kannadaprabha NewsFirst Published Apr 13, 2020, 8:55 AM IST
Highlights
ಸ್ಪ್ಯಾನಿಸ್‌ಫ್ಲ್ಯೂ ಎದುರಿಸಿದ್ದ ಅಥಣಿ ಆಸ್ಪತ್ರೆ| ಹಳೆ ದಿನಗಳನ್ನು ಮೆಲುಕು ಹಾಕಿದ ಸ್ಥಳೀಯರು| ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣ| ಸ್ಪ್ಯಾನಿಸ್‌ಫ್ಲ್ಯೂ ಎಂಬ ಮಹಾಮಾರಿಯನ್ನು ಸಮರ್ಪಕವಾಗಿ ಎದುರಿಸಿದ್ದ ಸರ್ಕಾರಿ ಆಸ್ಪತ್ರೆ| ಆಗಲೂ ಇಂದಿನ ಕೊರೋನಾ ಲಾಕ್‌ಡೌನ್‌ ಸ್ಥಿತಿಯಂತೇ ನಿರ್ಮಾಣವಾಗಿತ್ತಂತೆ|
ಅಥಣಿ(ಏ.13): ಅಥಣಿ ಸರ್ಕಾರಿ ಆಸ್ಪತ್ರೆಗೆ ಶತಮಾನದ ಇತಿಹಾಸವಿದೆ. ಶತಮಾನ ದಾಟಿರುವ ಈ ಆಸ್ಪತ್ರೆಯು ಈ ಹಿಂದೆ ಇಡೀ ಜಗತ್ತನ್ನೇ ಬಾಧಿಸಿದ್ದ ಸ್ಪ್ಯಾನಿಸ್‌ಫ್ಲ್ಯೂ ಎಂಬ ಮಹಾಮಾರಿಯನ್ನು ಸಮರ್ಪಕವಾಗಿ ಎದುರಿಸಿದ್ದು, ಇದೀಗ ಅದೇ ರೋಗದ ಮಾದರಿಯಾಗಿರುವ ಕೊರೋನಾ ವಿರುದ್ಧ ಸಮರ ಸಾರಿದೆ.

ಹೌದು, ಪಟ್ಟಣದ ಕೆಲ ಹಿರಿಯರು ತಮ್ಮ ಪೂರ್ವಜರಿಂದ ಕೇಳಿರುವ ಅನುಭವವನ್ನು ಇಂದಿಗೂ ಕಣ್ಣಿಗೆ ಕಟ್ಟುವಂತೆ ಮನಬಿಚ್ಚಿ ಕನ್ನಡಪ್ರಭದೊಂದಿಗೆ ಹಂಚಿಕೊಂಡಿದ್ದಾರೆ. ಸುಮಾರು 1918ರ ದಿನಗಳವು. ಜಗತ್ತು ಕಂಡು ಕೇಳರಿಯದ ಸ್ಪ್ಯಾನಿಸ್‌ಫ್ಲ್ಯೂ ಎಂಬ ಮಹಾಮಾರಿ ಬಾಧಿಸಿ ವಿಶ್ವದಲ್ಲಿ ಲಕ್ಷಾಂತರ ಜನರು ಸಾವನ್ನಪ್ಪಿದ್ದರು. ಆಗ ಈ ಆಸ್ಪತ್ರೆ ಹಲವಾರು ಮಂದಿಗೆ ಚಿಕಿತ್ಸೆ ನೀಡಿತ್ತು. ಇದೀಗ ಎರಡನೇ ಗಂಡಾಂತರವನ್ನು
ಸಮರ್ಪಕವಾಗಿ ಎದುರಿಸುತ್ತಿದೆ ಎಂದು ಹಿರಿಯರು ಮಾತನಾಡಿಕೊಳ್ಳುತ್ತಿದ್ದಾರೆ.

ಸಂಚಾರ ನಿಯಂತ್ರಿಸಲು ದ್ರೋಣ್ ಬಳಸಿದ ಪೊಲೀಸರು, ದಿಕ್ಕಾಪಾಲಾಗಿ ಓಡಿದ ಹುಡುಗರು..!

ಆಗ ಸರ್ಕಾರಿ ದವಾಖಾನೆ ಇದೊಂದೇ ಬಿಟ್ಟರೆ ಬೇರೆ ಯಾವ ದವಾಖಾನೆಗಳೂ ತಾಲೂಕಿನಲ್ಲಿ ಇರಲಿಲ್ಲ. ಅಂದು ಎಷ್ಟು ಜನ ಈ ರೋಗದಿಂದ ಇಲ್ಲಿ ಸಾವನ್ನಪ್ಪಿದರು ಎಂಬುದರ ಬಗ್ಗೆ ದಾಖಲೆ ಇಲ್ಲ. ಆದರೆ ಸಾವು ನೋವುಗಳು ಲೆಕ್ಕವಿಲ್ಲದಷ್ಟು ಆಗಿವೆ ಎಂದು ಕೆಲವು ಹಿರಿಯರು ಹೇಳುತ್ತಾರೆ.

ಆಗಲೂ ಇಂದಿನ ಕೊರೋನಾ ಲಾಕ್‌ಡೌನ್‌ ಸ್ಥಿತಿಯಂತೇ ನಿರ್ಮಾಣವಾಗಿತ್ತಂತೆ. ಇಡೀ ಊರಿನಲ್ಲಿ ಅಂಗಡಿ ಮುಂಗ್ಗಟ್ಟು ಬಂದ್‌ ಮಾಡಿದ್ದರಂತೆ. ಪಟ್ಟಣದಲ್ಲಿ ಇರುವ ಮನೆಗಳನ್ನು ಬಿಟ್ಟು ತಮ್ಮ ಹೊಲಗಳಲ್ಲಿ ವಾಸ್ತವ್ಯ ಮಾಡಿದ್ದರು ಎಂದು ಹಿರಿಯರು ಹೇಳುತ್ತಾರೆ.
 
click me!