ಅಬ್ಬಿ ಫಾಲ್ಸ್‌ನಲ್ಲಿ ಕೊಚ್ಚಿ ಹೋಗ್ತಿದ್ದ ಪ್ರವಾಸಿಗನನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಯುವಕರು

Published : Aug 24, 2019, 09:05 PM IST
ಅಬ್ಬಿ ಫಾಲ್ಸ್‌ನಲ್ಲಿ ಕೊಚ್ಚಿ ಹೋಗ್ತಿದ್ದ ಪ್ರವಾಸಿಗನನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಯುವಕರು

ಸಾರಾಂಶ

ಅಬ್ಬಿ ಫಾಲ್ಸ್ ನಲ್ಲಿ ಕೊಚ್ಚಿ ಹೋಗ್ತಿದ್ದ ಪ್ರವಾಸಿಗನ ರಕ್ಷಣೆ|  ಸ್ಥಳೀಯರ ಸಮಯ ಪ್ರಜ್ಞೆಯಿಂದ ಬದುಕುಳಿದ ಪ್ರವಾಸಿಗ| ಯುವಕರ ಈ ಸಾಹಸಕ್ಕೆ ಸ್ಥಳೀಯರಿಂದ ಶ್ಲಾಘನೆ.

ಶಿವಮೊಗ್ಗ, [ಆ.24]:  ಕಾಲು ಜಾರಿ ಬಿದ್ದು ಅಬ್ಬಿ ಫಾಲ್ಸ್ ನಲ್ಲಿ  ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗನೊಬ್ಬನ್ನು ಸ್ಥಳೀಯರು  ರಕ್ಷಿಸಿದ್ದಾರೆ.

ಇಂದು [ಶನಿವಾರ]  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿರುವ ಅಬ್ಬಿ ಫಾಲ್ಸ್ ವೀಕ್ಷಣೆಗೆಂದು ಐವರ ತಂಡವೊಂದು ಬಂದಿತ್ತು, ಇವರ ಪೈಕಿ ಓರ್ವ ಪ್ರವಾಸಿಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾನೆ. 

ಬಿದ್ದಿದ್ದೇ ತಡ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ ವೇಳೆ ಕೂಗಾಡಿದ್ದಾನೆ. ಇದನ್ನು ಕೇಳಿದ ಯಡೂರಿನ ಯುವಕರು, ಸಿನೀಮಿಯ ಹಗ್ಗದಿಂದ ಸಿನಿಮೀಯ ರೀತಿಯಲ್ಲಿ  ಪ್ರವಾಸಿಗನನ್ನು ರಕ್ಷಿಸಿದ್ದಾರೆ.

ಕಲ್ಲು ಬಂಡೆಯ ನಡುವೆ ಕೊಚ್ಚಿ ಹೋದ ಕಾರಣ ಪ್ರವಾಸಿಗನಿಗೆ ಅಲ್ಲಲ್ಲಿ ತರಚಿದ ಗಾಯಗಳಾಗಿರುವುದು ಬಿಟ್ಟರೇ, ಸ್ಥಳೀಯರ ಸಮಯ ಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಜೀವ ಉಳಿದಿದೆ. ಸ್ಥಳೀಯ ಯುವಕರ ಈ ಸಾಹಸಕ್ಕೆ ಇಲ್ಲಿನ ಜನರು ಶ್ಲಾಘಿಸಿದ್ದಾರೆ.

PREV
click me!

Recommended Stories

ಪೊಲೀಸ್‌ ಚೆಕಿಂಗ್‌ ವೇಳೆ ಹೋಟೆಲ್‌ ಬಾಲ್ಕನಿಯಿಂದ ಹಾರಿದ ಬೆಂಗಳೂರು ಮಹಿಳೆ, ಸ್ಥಿತಿ ಗಂಭೀರ!
ಡಿ.16ರಂದು ಮಂಡ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ, ಜಿಲ್ಲಾಡಳಿತದಿಂದ ಭರದ ಸಿದ್ದತೆ, ಕಟ್ಟುನಿಟ್ಟಿನ ಭದ್ರತೆ