ಮಂಗಳೂರು ಏರ್ಪೋರ್ಟ್‌ನಲ್ಲಿ ಸಜೀವ ಬಾಂಬ್ ಪತ್ತೆ!

By Suvarna News  |  First Published Jan 20, 2020, 12:11 PM IST

ಮಂಗಳೂರು ಏರ್‌ಪೋರ್ಟ್‌ನಲ್ಲಿ ಸಜೀವ ಬಾಂಬ್ ಪತ್ತೆ| ಲ್ಯಾಪ್‌ಟಾಪ್‌ ಬ್ಯಾಗ್‌ನಲ್ಲಿರುವ ಬಾಂಬ್| ಏರ್ಪೋರ್ಟ್ ಸುತ್ತುವರಿದ ಮಂಗಳೂರು ಪೊಲೀಸರು| ಪ್ರಯಾಣಿಕರು ಸುರಕ್ಷಿತ ಸ್ಥಳಕ್ಕೆ ರವಾನೆ


ಮಂಗಳೂರು[ಜ.20]: ಮಂಗಳೂರು ಏರ್‌ಪೋರ್ಟ್‌ನಲ್ಲಿ ಸಜೀವ ಬಾಂಬ್ ಪತ್ತೆಯಾಗಿದೆ. ಏರ್‌ಪೋರ್ಟ್‌ ಸುತ್ತಮುತ್ತ ಪೊಲೀಸರು ಸುತ್ತುವರೆದಿದ್ದು, ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಲಾಗಿದೆ.

"

Tap to resize

Latest Videos

ಹೌದು ಲ್ಯಾಪ್‌ಟಾಪ್‌ ಒಂದರಲ್ಲಿ ಇಡಲಾಗಿರುವ ಸಜೀವ ಬಾಂಬ್ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದೆ. ಸದ್ಯ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಬಾಂಬ್ ನಿಷ್ಕ್ರಿಯದಳ ಇದನ್ನು ನಿಷ್ಕ್ರಿಯಗೊಳಿಸುವ ಯತ್ನ ನಡೆಸುತ್ತಿದ್ದಾರೆ. ವಿಮಾನ ನಿಲ್ದಾಣ ಆವರಣಕ್ಕೆ ಬಾಂಬ್ ನಿಷ್ಕ್ರಿಯಗೊಳಿಸುವ, ಬಾಂಬ್ ಪ್ರೂಫ್ ವಾಹನವೂ ಆಗಮಿಸಿದೆ.

ಮಂಗಳೂರು ಏರ್‌ಪೋರ್ಟ್‌ನಲ್ಲಿ 2 ಕೋಟಿ ರೂ. ಮೌಲ್ಯದ ಚಿನ್ನ ಪತ್ತೆ!

ಬೆಳಿಗ್ಗೆ ಸುಮಾರು 10 ಗಂಟೆಗೆ ಆಟೋದಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಬಾಂಬ್ ಇರುವ ಲ್ಯಾಪ್‌ಟಾಪ್‌ ಬ್ಯಾಗನ್ನು ಏರ್‌ಪೋರ್ಟ್ ಹೊರಭಾಗದ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಈ ಬ್ಯಾಗ್‌ನಲ್ಲಿ ಸುಮಾರು 10ಕೆ. ಜಿ ಸ್ಫೋಟಕ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಬಾಂಬ್ ಪತ್ತೆಯಾಗಿರುವ ಹಿನ್ನೆಲೆ ಏರ್ಪೋರ್ಟ್ ಆವರಣದಲ್ಲಿ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದ್ದು, ಏರ್ಪೋರ್ಟ್ ಸಂಪರ್ಕಿಸುವ ಎಲ್ಲಾ  ರಸ್ತೆಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಈ ಸಂಬಂಧ ಮಂಗಳೂರು ಪೊಲೀಸ್ ಆಯುಕ್ತ  ಡಾ. ಹರ್ಷ ಪ್ರತಿಕ್ರಿಯಿಸಿದ್ದು, ‘ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿದ್ದು ಸತ್ಯ. CISF ತಂಡ ಬಾಂಬ್ ಇದ್ದ ಬ್ಯಾಗ್ ಪತ್ತೆ ಹಚ್ಚಿದೆ. ಬಾಂಬ್ ಇರುವ ಜಾಗ ಪೊಲೀಸ್ ನಿಯಂತ್ರಣದಲ್ಲಿದೆ' ಎಂದಿದ್ದಾರೆ.

ರಾಜ್ಯದ 5 ಏರ್‌ಪೋರ್ಟ್‌ಗಳಿಗೆ ಮರು ನಾಮಕರಣ?

ಮಂಗಳೂರು ಏರ್ಪೋರ್ಟ್‌ನಲ್ಲಿ

click me!