ಬೆಂಗಳೂರು: ಆಸ್ತಿ ತೆರಿಗೆ ಕಟ್ಟದ ಶಾಪಿಂಗ್‌ ಮಾಲ್‌ ಬ್ಯಾಂಕ್‌ ಖಾತೆ ಮೇಲೆ ಬಿಬಿಎಂಪಿ ಕಣ್ಣು..!

By Kannadaprabha NewsFirst Published Dec 14, 2022, 11:30 AM IST
Highlights

ಆಸ್ತಿ ತೆರಿಗೆಯು ಬಿಬಿಎಂಪಿಯ ಪ್ರಮುಖ ಆದಾಯದ ಮೂಲವಾಗಿದೆ. ಪ್ರತಿ ವರ್ಷ 3ರಿಂದ 3,500 ಸಾವಿರ ಕೋಟಿ ರುಪಾಯಿ ತೆರಿಗೆ ಸಂಗ್ರಹಿಸಲಾಗುತ್ತದೆ. ಈ ಬಾರಿ 4 ಸಾವಿರ ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಆದರೆ, ಈವರೆಗೆ 2,600 ಕೋಟಿ ಮಾತ್ರ ತೆರಿಗೆ ಸಂಗ್ರಹ. 

ಬೆಂಗಳೂರು(ಡಿ.14):  ಅತಿಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ನಗರದ ಶಾಪಿಂಗ್‌ ಮಾಲ್‌ಗಳಿಗೆ 7 ದಿನ ಗಡುವು ನೀಡಿರುವ ಬಿಬಿಎಂಪಿ ಕಂದಾಯ ವಿಭಾಗವು ಈ ಅವಧಿಯಲ್ಲಿ ತೆರಿಗೆ ಪಾವತಿಸದಿದ್ದರೆ, ಮಾಲ್‌ಗಳಿಗೆ ಸಂಬಂಧಿಸಿದ ಬ್ಯಾಂಕ್‌ ಖಾತೆಗಳನ್ನು ಬಿಬಿಎಂಪಿಗೆ ಜೋಡಣೆ (ಅಟಾಚ್ಮೆಂಟ್‌) ಮಾಡಿಕೊಳ್ಳಲು ತೀರ್ಮಾನಿಸಿದೆ.

ಆಸ್ತಿ ತೆರಿಗೆಯು ಬಿಬಿಎಂಪಿಯ ಪ್ರಮುಖ ಆದಾಯದ ಮೂಲವಾಗಿದೆ. ಪ್ರತಿ ವರ್ಷ 3ರಿಂದ 3,500 ಸಾವಿರ ಕೋಟಿ ರುಪಾಯಿ ತೆರಿಗೆ ಸಂಗ್ರಹಿಸಲಾಗುತ್ತದೆ. ಈ ಬಾರಿ 4 ಸಾವಿರ ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಆದರೆ, ಈವರೆಗೆ .2,600 ಕೋಟಿ ಮಾತ್ರ ತೆರಿಗೆ ಸಂಗ್ರಹವಾಗಿದೆ. ಹೀಗಾಗಿ ತೆರಿಗೆ ಸಂಗ್ರಹದ ಪ್ರಮಾಣ ಹೆಚ್ಚಿಸಲು ಅತಿಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಬಿಬಿಎಂಪಿ ಕಂದಾಯ ವಿಭಾಗವು ಮುಂದಾಗಿದೆ.

Bengaluru: ಬಿಬಿಎಂಪಿಗೆ 130 ಕೋಟಿ ತೆರಿಗೆ ಮೋಸ!

ಮೊದಲಿಗೆ ಶಾಪಿಂಗ್‌ ಮಾಲ್‌ಗಳಿಂದ ತೆರಿಗೆ ವಸೂಲಿಗೆ ನಿರ್ಧರಿಸಿ, ಬಾಕಿ ತೆರಿಗೆ ಪಾವತಿಗೆ 7 ದಿನ ಗಡುವು ನೀಡಲಾಗಿದೆ. ಒಂದು ವೇಳೆ ಅದನ್ನು ಪಾಲಿಸದಿದ್ದರೆ ಬ್ಯಾಂಕ್‌ ಖಾತೆಗಳನ್ನು ಅಟಾಚ್ಮೆಂಟ್‌ ಮಾಡಿ, ಆ ಮೂಲಕ ತೆರಿಗೆ ವಸೂಲಿ ಮಾಡಲು ನಿರ್ಧರಿಸಿದೆ.

ನಗರದ ಪ್ರಮುಖ 7 ಶಾಪಿಂಗ್‌ ಮಾಲ್‌ಗಳಿಂದಲೇ .58.37 ಕೋಟಿ ಆಸ್ತಿ ತೆರಿಗೆ ಬಾಕಿಯಿದೆ. ಅದನ್ನು ವಸೂಲಿ ಮಾಡುವ ಕುರಿತು ಈಗಾಗಲೆ ಹಲವು ಬಾರಿ ನೋಟಿಸ್‌ ನೀಡಲಾಗಿದೆ. ಆದರೂ, ತೆರಿಗೆ ಪಾವತಿಗೆ ಮಾಲ್‌ಗಳು ಮುಂದಾಗಿಲ್ಲ. ಹೀಗಾಗಿ ಕಾನೂನಿನ ಮೂಲಕ ಶಾಪಿಂಗ್‌ ಮಾಲ್‌ಗಳ ಬ್ಯಾಂಕ್‌ ಖಾತೆಯನ್ನು ಬಿಬಿಎಂಪಿ ಖಾತೆಯೊಂದಿಗೆ ಜೋಡಣೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಅದರಿಂದ ಬಾಕಿ ತೆರಿಗೆ ಮಾಲ್‌ಗಳ ಬ್ಯಾಂಕ್‌ ಖಾತೆಯಿಂದ ಬಿಬಿಎಂಪಿ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾವಣೆ ಆಗುವಂತೆ ಮಾಡಲಾಗುತ್ತದೆ.

ಕಾನೂನಿನಲ್ಲೂ ಅವಕಾಶ

ಈ ಕುರಿತು ಬಿಬಿಎಂಪಿ ಕಾನೂನು ಕೋಶದಿಂದಲೂ ಅಭಿಪ್ರಾಯ ಪಡೆಯಲಾಗಿದ್ದು, ಕಾನೂನಿನಲ್ಲಿ ಅವಕಾಶ ಇದೆ ಎಂದು ಪಾಲಿಕೆ ಕಾನೂನು ಕೋಶ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಮಾಲ್‌ಗಳ ಮಾಲಿಕರಿಗೆ 7 ದಿನ ಕಾಲಾವಕಾಶ ನೀಡಿ ತೆರಿಗೆ ಪಾವತಿಸುವಂತೆ ಸೂಚಿಸಲಾಗಿದೆ. ಒಂದು ವೇಳೆ ತೆರಿಗೆ ಪಾವತಿಸದಿದ್ದರೆ, ಮಾಲ್‌ಗಳ ಬ್ಯಾಂಕ್‌ ಖಾತೆಯಿಂದ ನೇರವಾಗಿ ಹಣ ವರ್ಗಾಯಿಸಿಕೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 

click me!