ದಿಲ್ಲಿ, ಮುಂಬಯಿ ರೀತಿ ರಾಜಧಾನಿಗೆ ಎರಡು ಪೊಲೀಸ್‌ ಕಮೀಷನರೇಟ್‌

Kannadaprabha News   | Kannada Prabha
Published : Dec 12, 2025, 08:19 AM IST
dr g parameshwar

ಸಾರಾಂಶ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯಾಗಿರುವ ಹಿನ್ನೆಲೆಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಭಜಿಸಿ ಐದು ನಗರ ಪಾಲಿಕೆಗಳನ್ನು ಮಾಡಲಾಗಿದೆ. ಅದೇ ರೀತಿ ಬೆಂಗಳೂರು ಪೊಲೀಸ್ ಆಯುಕ್ತರ ಜೊತೆಗೆ ಮತ್ತೊಂದು ಪೊಲೀಸ್ ಆಯುಕ್ತರ ಹುದ್ದೆಯನ್ನು ಹೊಸದಾಗಿ ಸೃಜಿಸಲು ಪರಿಶೀಲನೆ

ಸುವರ್ಣ ವಿಧಾನ ಪರಿಷತ್‌ : ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯಾಗಿರುವ ಹಿನ್ನೆಲೆಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಭಜಿಸಿ ಐದು ನಗರ ಪಾಲಿಕೆಗಳನ್ನು ಮಾಡಲಾಗಿದೆ. ಅದೇ ರೀತಿ ಬೆಂಗಳೂರು ಪೊಲೀಸ್ ಆಯುಕ್ತರ ಜೊತೆಗೆ ಮತ್ತೊಂದು ಪೊಲೀಸ್ ಆಯುಕ್ತರ ಹುದ್ದೆಯನ್ನು ಹೊಸದಾಗಿ ಸೃಜಿಸಲು ಪರಿಶೀಲನೆ ಮಾಡಲಾಗುವುದು ಗೃಹಸಚಿವ ಡಾ.ಜಿ. ಪರಮೇಶ್ವರ ತಿಳಿಸಿದರು.

ಪೊಲೀಸ್‌ ಕಮೀಷನರೇಟ್ ಎರಡು ವಿಭಾಗ

ಗುರುವಾರ ಬೆಂಗಳೂರು ಪೊಲೀಸ್‌ ಕಮೀಷನರೇಟನ್ನು ಎರಡು ವಿಭಾಗಗಳನ್ನಾಗಿ ವಿಂಗಡಿಸುವಂತೆ ಕಾಂಗ್ರೆಸ್‌ ಸದಸ್ಯ ಡಾ.ಕೆ.ಗೋವಿಂದರಾಜ್‌ ಅವರು ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಸಚಿವರು ಉತ್ತರಿಸಿದರು.

ಬೆಂಗಳೂರಿನ ಪೊಲೀಸರು ಸಮರ್ಥರಿದ್ದಾರೆ

ಪ್ರಸ್ತುತ ಬೆಂಗಳೂರಿನ ಪೊಲೀಸರು ಸಮರ್ಥರಿದ್ದಾರೆ. ಇತ್ತೀಚೆಗೆ ನಡೆದ 11.17 ಕೋಟಿ ರು. ದರೋಡೆ ಪ್ರಕರಣವನ್ನು ಕೇವಲ 24 ಗಂಟೆಗಳಲ್ಲಿ ಬೇಧಿಸಿದ್ದು ದರೋಡೆಕೋರರನ್ನು ಬಂಧಿಸಿದ್ದು, ಹಣವನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 11 ಡಿಸಿಪಿಗಳು, 6 ಮಂದಿ ಜಂಟಿ ಆಯುಕ್ತರು, ಕಾನೂನು ಮತ್ತು ಸುವ್ಯವಸ್ಥೆಯಲ್ಲಿ 25 ಎಸಿಪಿಗಳು ಇದ್ದಾರೆ. ಸೈಬರ್‌ ಕ್ರೈಂಗೆ 9 ಎಸಿಪಿಗಳನ್ನು, ಹೊಸದಾಗಿ ಟ್ರಾಫಿಕ್‌ಗೆ 4 ಡಿಸಿಪಿಗಳು, 12 ಎಸಿಪಿಗಳನ್ನು ಹಾಕಿದ್ದೇವೆ. ಸದ್ಯದ ಮಟ್ಟಿಗೆ ಬೆಂಗಳೂರು ಪೊಲೀಸ್ ಘಟಕವನ್ನು ಎರಡು ವಿಭಾಗಗಳನ್ನಾಗಿ ವಿಂಗಡಿಸಿ ಹಾಲಿ ಇರುವ ಪೊಲೀಸ್ ಆಯುಕ್ತರ ಜೊತೆಗೆ ಮತ್ತೊಂದು ಪೊಲೀಸ್ ಆಯುಕ್ತರ ಹುದ್ದೆಯನ್ನು ಹೊಸದಾಗಿ ಸೃಜಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಪರಿಶೀಲನೆಯಲ್ಲಿ ಇಲ್ಲ. ಸದ್ಯಕ್ಕೆ ಅಗತ್ಯವೂ ಕಾಣುತ್ತಿಲ್ಲ ಎಂದು ತಿಳಿಸಿದರು.

ಆದರೆ ಸದನದಲ್ಲಿ ಹಲವು ಸದಸ್ಯರು ಜಿಬಿಎ ರಚನೆ ಆಗಿದೆ. ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದ್ದು ಬೇರೆ ಪ್ರಮುಖ ನಗರಗಳಲ್ಲಿ ಒಂದಕ್ಕಿಂತ ಹೆಚ್ಚು ಕಮೀಷನರೇಟ್ ಇರುವ ಬಗ್ಗೆ ಪ್ರಸ್ತಾಪಿಸಿದರು.

ಇದಕ್ಕೆ ಸ್ಪಂದಿಸಿದ ಗೃಹ ಸಚಿವರು, ಬೇರೆ ಮೆಟ್ರೋಪಾಲಿಟಿನ್‌ ನಗರಗಳನ್ನು ನೋಡಿದಾಗ ಬೆಂಗಳೂರು ಸುರಕ್ಷಿತವಾಗಿದೆ. ದೆಹಲಿ, ಮುಂಬಯಿ, ಹೈದರಾಬಾದ್ ಗಳಲ್ಲಿ ಒಂದಕ್ಕಿಂತ ಹೆಚ್ಚು ಕಮೀಷನರೇಟ್ ಗಳಿವೆ. ಅಲ್ಲಿ ಒಂದಕ್ಕಿಂತ ಹೆಚ್ಚು ಕಮೀಷನರೇಟ್ ರಚನೆಯಾದ ಬಳಿಕ ಪರಿಸ್ಥಿತಿ ಸುಧಾರಿಸಿದೆಯೇ ಎಂಬುದರ ಬಗ್ಗೆ ಅಧ್ಯಯನ ನಡೆಸುತ್ತೇವೆ. ಆ ನಂತರ ಎರಡು ವಿಭಾಗ ಮಾಡುವ ಕುರಿತು ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದರು.

PREV
Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯರಿಂದ ರಾಜ್ಯದ ದಲಿತರ ಸರ್ವನಾಶ: ಮಾಜಿ ಸಂಸದ ಪ್ರತಾಪ್ ಸಿಂಹ
ಬೆಂಗಳೂರಲ್ಲಿ ಐಪಿಎಲ್‌ ನಡೆಸಲು ಸಂಪುಟ ಅಸ್ತು