* ಅರಣ್ಯ ಇಲಾಖೆ ಸಿಬ್ಬಂದಿ ಇರಿಸಿದ್ದ ಬೋನಿಗೆ ಬಿದ್ದ ಚಿರತೆ
* ಜಾವ ಮಾಂಸ ತಿನ್ನಲು ಹೋಗಿ ಬೋನಿನಲ್ಲಿ ಸಿಲುಕಿ ಹಾಕಿಕೊಂಡ ಚಿರತೆ
* ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಕರಡಿಗುಡ್ಡ ಗ್ರಾಮದ ಹೊರವಲಯದಲ್ಲಿ ಇರಿಸಿದ್ದ ಬೋನು
ಕನಕಗಿರಿ(ಮೇ.15): ತಾಲೂಕಿನ ಕರಡಿಗುಡ್ಡ ಗ್ರಾಮದ ಹೊರವಲಯದಲ್ಲಿ ಕೆಲ ದಿನಗಳಿಂದ ಜಾನುವಾರು ಹಾಗೂ ನಾಯಿಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆಯೊಂದು ಶುಕ್ರವಾರ ನಸುಕಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇರಿಸಿದ್ದ ಬೋನಿಗೆ ಬಿದ್ದಿದೆ.
ಚಿರತೆ ಹಾವಳಿ ಬಗ್ಗೆ ರೈತರು ಅರಣ್ಯಾಧಿಕಾರಿಗಳಿಗೆ ದೂರು ನೀಡಿದ ಬೆನ್ನಲ್ಲೇ ಗುಡ್ಡದ ಪ್ರದೇಶದಲ್ಲಿ ಬೋನು ಇಡಲಾಗಿತ್ತು. ಆದರೂ ಚಿರತೆ ಬೋನಿಗೆ ಬಿದ್ದಿರಲಿಲ್ಲ. ಶುಕ್ರವಾರ ಬೆಳಗಿನ ಜಾವ ಮಾಂಸ ತಿನ್ನಲು ಹೋಗಿದ್ದ ಚಿರತೆ ಬೋನಿನಲ್ಲಿ ಸಿಲುಕಿ ಹಾಕಿಕೊಂಡಿದೆ.
ಗಂಗಾವತಿ: ಕೊನೆಗೂ ಬೋನಿಗೆ ಬಿದ್ದ ಚಿರತೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ಇದು ಮೂರೂವರೆ ವರ್ಷದ ಗಂಡು ಚಿರತೆಯಾಗಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಅದನ್ನು ಸ್ಥಳಾಂತರ ಮಾಡಿದರು. ಇದೇ ಪ್ರದೇಶದಲ್ಲಿ ಇನ್ನೆರಡು ಚಿರತೆ ಮರಿಗಳಿದ್ದು. ಅವುಗಳನ್ನು ಹಿಡಿದು ಆಗುವ ಅನಾಹುತ ತಪ್ಪಿಸಬೇಕು ಎಂದು ರೈತರು ಒತ್ತಾಯಿಸಿದರು.