ಸೋಮವಾರ 127 ಹೊಸ ಸೋಂಕು ಪ್ರಕರಣ ಪತ್ತೆ| 126 ಮಂದಿ ಗುಣಮುಖ, ಇಬ್ಬರು ಸಾವು| ಒಟ್ಟು ಸೋಂಕಿತರ ಸಂಖ್ಯೆ 4,00,692ಕ್ಕೆ ಏರಿಕೆ| ಗುಣಮುಖರ ಸಂಖ್ಯೆ 3,92,389ಕ್ಕೆ ಏರಿಕೆ| ಸದ್ಯ 3,896 ಸಕ್ರಿಯ ಸೋಂಕಿತರಿದ್ದು, 72 ಮಂದಿಯ ಆರೋಗ್ಯ ಸ್ಥಿತಿ ಗಂಭೀರ|
ಬೆಂಗಳೂರು(ಫೆ.09): ರಾಜಧಾನಿ ಬೆಂಗಳೂರಿನಲ್ಲಿ ಎಂಟು ತಿಂಗಳ ನಂತರ ಕೊರೋನಾ ಸೋಂಕಿನ ಪ್ರಕರಣಗಳು ಅತ್ಯಂತ ಕಡಿಮೆಯಲ್ಲಿ ದಾಖಲಾಗಿದೆ.
ಸೋಮವಾರ 127 ಹೊಸ ಸೋಂಕು ಪ್ರಕರಣ ಪತ್ತೆಯಾಗಿದ್ದು, 126 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಮೃತಪಟ್ಟವರದಿಯಾಗಿದೆ. ಕಳೆದ ವರ್ಷ ಜೂ.26ರಂದು 144 ಪ್ರಕರಣ ಪತ್ತೆಯಾಗಿತ್ತು. ನಂತರದ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಸಾವಿರ ದಾಟಿತ್ತು. ಜ.14 ರಂದು 141 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದಾದ ನಂತರದ ಅತಿ ಕಡಿಮೆ ಸೋಂಕಿನ ಪ್ರಕರಣ ಸೋಮವಾರ ದಾಖಲಾಗಿದೆ.
undefined
ರಾಜ್ಯದಲ್ಲಿ ಕಡಿಮೆಯಾದ ಕೊರೋನಾ ಅಬ್ಬರ: ಇಲ್ಲಿದೆ ಫೆ.8ರ ಅಂಕಿ-ಸಂಖ್ಯೆ
ಒಟ್ಟು ಸೋಂಕಿತರ ಸಂಖ್ಯೆ 4,00,692ಕ್ಕೆ ಏರಿಕೆಯಾಗಿದೆ. ಗುಣಮುಖರ ಸಂಖ್ಯೆ 3,92,389ಕ್ಕೆ ತಲುಪಿದೆ. ಸದ್ಯ 3,896 ಸಕ್ರಿಯ ಸೋಂಕಿತರಿದ್ದು, 72 ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಸೋಮವಾರ ಇಬ್ಬರು ಮೃತಪಟ್ಟಿದ್ದು, ಒಟ್ಟು ಸಾವಿಗೀಡಾದವರ ಸಂಖ್ಯೆ 4,406ಕ್ಕೆ ಏರಿಕೆಯಾಗಿದೆ.