ಪೂರಕ ಪರಿಸರವಿಲ್ಲದೇ ಕಲಿಕೆ ಸರಿ ದಿಕ್ಕಿನಲ್ಲಿ ಸಾಗಲ್ಲ: ಬೊಮ್ಮಾಯಿ

By Kannadaprabha News  |  First Published Jun 19, 2023, 11:41 PM IST

ಮಕ್ಕಳ ಕಲಿಕೆಗೆ ಸರಿಯಾದಂತಹ ಸ್ಥಳ ಮತ್ತು ಪರಿಸರ ಇಲ್ಲದಿದ್ದರೆ ಅವರ ವಿದ್ಯಾರ್ಜನೆ ಸರಿಯಾದ ದಿಕ್ಕಿನಲ್ಲಿ ಸಾಗಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು. 


ಶಿಗ್ಗಾಂವಿ (ಜೂ.19): ಮಕ್ಕಳ ಕಲಿಕೆಗೆ ಸರಿಯಾದಂತಹ ಸ್ಥಳ ಮತ್ತು ಪರಿಸರ ಇಲ್ಲದಿದ್ದರೆ ಅವರ ವಿದ್ಯಾರ್ಜನೆ ಸರಿಯಾದ ದಿಕ್ಕಿನಲ್ಲಿ ಸಾಗಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು. ತಾಲೂಕಿನ ಮಡ್ಲಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳ ಉದ್ಘಾಟನೆ ಮಾತನಾಡಿದ ಅವರು, ನಮಗೆ ಸ್ವಾತಂತ್ರ್ಯ ಬಂದು 75 ವರ್ಷ ಆದರೂ ನಮ್ಮ ಮಕ್ಕಳಿಗೆ ಒಂದು ಸೂರನ್ನು ಕೊಡದೇ ಹೋದರೆ ಸ್ವಾತಂತ್ರ್ಯದ ಸಾರ್ಥಕತೆ ಆಗುತ್ತದೆಯೇ ಎಂಬ ಮೂಲ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಹಾಗಾಗಿ ಕರ್ನಾಟಕ ಉದಯವಾಗಿ 1956ರ ನಂತರ ರಾಜ್ಯದಲ್ಲಿ ಪ್ರತಿವರ್ಷ ಅತಿಹೆಚ್ಚು ಅಂದರೆ 2500 ಶಾಲಾ ಕೊಠಡಿಗಳ ಮಂಜೂರು ಆಗುತ್ತಿದ್ದವು. 

ಆದರೆ ನೀವು ಆರಿಸಿ ಕಳಿಸಿ ಮುಖ್ಯಮಂತ್ರಿಯನ್ನಾಗಿ ಮಾಡಿದ ನಿಮ್ಮ ಬಸವರಾಜ ಬೊಮ್ಮಾಯಿ ಒಂದೇ ಯೋಜನೆಯಲ್ಲಿ 8000 ಶಾಲಾ ಕೊಠಡಿಗಳನ್ನು ಮಂಜೂರಾತಿ ಮಾಡಿದ್ದಾರೆ ಎಂದರು. ವಿವೇಕ ಯೋಜನೆಯಲ್ಲಿ ಪ್ರತಿ ತಾಲೂಕಿನಲ್ಲಿ 30ರಿಂದ 50 ಶಾಲಾ ಕೊಠಡಿಗಳನ್ನು ನಮ್ಮ ಸರ್ಕಾರದಲ್ಲಿ ಮಂಜೂರು ಮಾಡಿದ್ದೇವೆ. ಪ್ರಾಥಮಿಕ ಶಿಕ್ಷಣ ಮತ್ತು ಮಾಧ್ಯಮಿಕ ಶಿಕ್ಷಣ ಬಹಳ ಮಹತ್ವವಾದ ವಿಷಯ ಇಂದು ರೈತನ ಭೂಮಿ ಮೊದಲು ಎಷ್ಟಿತ್ತೋ ಅಷ್ಟೇ ಇದೆ. ಆದರೆ ಅವರ ಮನೆಯಲ್ಲಿ ಅವಲಂಬಿತ ಕುಟುಂಬ ಹೆಚ್ಚಿಗೆ ಆಗಿದೆ. ಇಂದು ಅವರೆಲ್ಲರೂ ಹೊಲ ಮನೆ ಮಾಡಿದರೆ ಕುಟುಂಬ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. 

Latest Videos

undefined

ಮೇಕೆದಾಟು ಯೋಜನೆಯಿಂದ ಹಲವು ಜಿಲ್ಲೆಗೆ ನೀರು: ಡಿ.ಕೆ.ಶಿವಕುಮಾರ್‌

ಹಾಗಾಗಿ ಮನೆಯಲ್ಲಿ ಒಂದಿಬ್ಬರು ವ್ಯವಸಾಯ ಮಾಡಿ ಉಳಿದವರು ಶಿಕ್ಷಣ ಪಡೆದು ಉಧ್ಯೋಗ ಮಾಡಿದರೆ ಅಭಿವೃದ್ಧಿ ಹೊಂದಲು ಸಾಧ್ಯ. ಹಾಗಾಗಿ ಶಿಕ್ಷಣ ಅತಿ ಅವಶ್ಯವಾಗಿದೆ ಎಂದರು. ಹಾಗಾಗಿ ಈ ರಾಜ್ಯ ಸುದೀರ್ಘ ಕಾಲ ಸುಭೀಕ್ಷೆಯಾಗಿರಬೇಕೆಂದರೆ ಶಿಕ್ಷಣ ಮತ್ತು ಆರೋಗ್ಯ ಬಹಳ ಮುಖ್ಯವೆಂಬುದನ್ನು ಅರಿತು ನಮ್ಮ ಸರ್ಕಾರದಲ್ಲಿ ನಮ್ಮ ಬಜೆಟನಲ್ಲಿ ಅತಿಹೆಚ್ಚು ಹಣವನ್ನು ಶಿಕ್ಷಣ ಮತ್ತು ಆರೋಗ್ಯಕ್ಕೆ ಅನುದಾನ ನೀಡಿದ್ದೇನೆ. ಜೊತೆಗೆ ಕೇವಲ ಶಾಲಾ ಕೊಠಡಿಗಳನ್ನು ಶಾಲೆಗಳನ್ನು ನೀರ್ಮಾಣ ಮಾಡಿದರೆ ಸಾಲದು ಅದಕ್ಕೆ ಪೂರಕವಾಗಿ ಶಿಕ್ಷಕರ ಅವಶ್ಯಕತೆ ಇದೆ. ಹಾಗಾಗಿ ನಾವು 15000 ಸಾವಿರ ಶಿಕ್ಷಕರ ನೇಮಕಾತಿ ಮಾಡಿದ್ದೇವೆ ಎಂದರು.

ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾರ್ಯನಿರ್ವಹಿಸಿ: ಅಧಿಕಾರಿಗಳಿಗೆ ಸಚಿವ ಮಹದೇವಪ್ಪ ಸೂಚನೆ

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ರುದ್ರಗೌಡ ಪಾಟೀಲ ತಾಪಂ ಮಾಜಿ ಸದಸ್ಯ ಈಶ್ವರಗೌಡ ಪಾಟೀಲ, ಗ್ರಾಪಂ ಸದಸ್ಯ ಬಸನಗೌಡ ಪಾಟೀಲ, ಶಿವಪ್ಪ ಗಾಜನವರ, ಸೀತವ್ವ ಗಾಜುನವರ, ಬಸವ್ವ ಗುಳೇದ, ಯಲ್ಲಪ್ಪ ತಗಡಿನಮನಿ, ಎಸ್‌ಡಿಎಂಸಿ ಅಧ್ಯಕ್ಷ ಅಶೋಕ ಅಕ್ಕಿ, ಎಸ್‌.ಆರ್‌. ಪಾಟೀಲ, ಶಿವಾನಂದ ಮ್ಯಾಗೇರಿ, ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹನುಮರಡ್ಡಿ ನಡುವಿನಮನಿ, ವಿರೂಪಾಕ್ಷಗೌಡ ಪಾಟೀಲ ಹಾಗೂ ತಾಲೂಕು ತಹಶೀಲ್ದಾರ ಸಂತೋಷ ಹಿರೇಮಠ ತಾ.ಪಂ. ಕಾರ್ಯನಿರ್ವಾಹಕ ಪ್ರಶಾಂತ ತುರ್ಕಾನಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಬಿ. ಅಂಬಿಗೇರ ಸೇರಿದಂತೆ ಹಲವರು ಇದ್ದರು.

click me!