ವಾರಸುದಾರರಿಲ್ಲದ 4 ಶವಗಳ ದಫನ

Kannadaprabha News   | Asianet News
Published : Jun 13, 2020, 09:05 AM IST
ವಾರಸುದಾರರಿಲ್ಲದ 4 ಶವಗಳ ದಫನ

ಸಾರಾಂಶ

ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದ ವಾರಸುದಾರರಿಲ್ಲದ 4 ಶವಗಳನ್ನು ಗುರುವಾರ ನಗರ ಪೊಲೀಸ್‌ ಠಾಣೆಯ ಸಿಬ್ಬಂದಿ ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರು ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಅಂತಿಮ ಗೌರವಗಳೊಂದಿಗೆ ದಫನ ಮಾಡಲಾಯಿತು.

ಉಡುಪಿ(ಜೂ.13): ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದ ವಾರಸುದಾರರಿಲ್ಲದ 4 ಶವಗಳನ್ನು ಗುರುವಾರ ನಗರ ಪೊಲೀಸ್‌ ಠಾಣೆಯ ಸಿಬ್ಬಂದಿ ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರು ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಅಂತಿಮ ಗೌರವಗಳೊಂದಿಗೆ ದಫನ ಮಾಡಲಾಯಿತು.

ಮೃತರಲ್ಲಿ ಮೂವರು ಅಪರಿಚಿತರು, ಸಾರ್ವಜನಿಕ ಸ್ಥಳದಲ್ಲಿ ಅಸಹಾಯಕರಾಗಿದ್ದಾಗ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು, ತಾರಾನಾಥ್‌ ಮೇಸ್ತ ಶಿರೂರು ಅವರು ಮಾನವಿಯತೆ ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಕೆಲವು ದಿನಗಳಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು.

ದೇಶದಲ್ಲಿ ಕುವೆಂಪು ವಿವಿಗೆ 73ನೇ ರ‍್ಯಾಂಕಿಂಗ್; ರಾಜ್ಯದಲ್ಲಿ 3ನೇ ಸ್ಥಾನ..!

ಅಂತ್ಯಸಂಸ್ಕಾರದಲ್ಲಿ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ, ಕಾರ್ಯದಲ್ಲಿ ನಗರ ಭಜನಾ ಮಂಡಳಿಗಳ ಅಧ್ಯಕ್ಷ ಕಿಶೋರ ಕನರ್ಪಾಡಿ, ರಮಾನಂದ ದೇವಾಡಿಗ, ಮಧ್ವರಾಜ್‌, ಸುಶೀಲ ರಾವ್‌, ಸಾಜಿ ಅಜ್ಜರಕಾಡು ಹಾಗೂ ಮತ್ತಿತರರು ಭಾಗಿಗಳಾಗಿ ಸಹಕರಿಸಿದರು.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!