ಸರ್ಕಾರಕ್ಕೆ ನಿಧಿ ನೀಡಿದ್ದ ಲಕ್ಕುಂಡಿ ಪ್ರಜ್ವಲ್‌ಗೆ ಸರ್ಕಾರದಿಂದ ಸಿಕ್ತು ಬಂಪರ್ ಗಿಫ್ಟ್

Kannadaprabha News   | Kannada Prabha
Published : Feb 28, 2026, 09:02 AM IST
lakkundi ritti family

ಸಾರಾಂಶ

ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಜ.10ರಂದು ತನ್ನ ಮನೆ ನಿರ್ಮಾಣದ ಸಂದರ್ಭದಲ್ಲಿ ಚಿನ್ನಾಭರಣಗಳ ನಿಧಿ ಸಿಕ್ಕಿದ್ದನ್ನು ಸರ್ಕಾರಕ್ಕೆ ತಲುಪಿಸಿದ್ದ ಬಾಲಕ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಗುರುವಾರ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ನಿವೇಶನ ಹಸ್ತಾಂತರಿಸಿದರು

ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಜ.10ರಂದು ತನ್ನ ಮನೆ ನಿರ್ಮಾಣದ ಸಂದರ್ಭದಲ್ಲಿ ಚಿನ್ನಾಭರಣಗಳ ನಿಧಿ ಸಿಕ್ಕಿದ್ದನ್ನು ಸರ್ಕಾರಕ್ಕೆ ತಲುಪಿಸಿದ್ದ ಬಾಲಕ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಗುರುವಾರ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ನಿವೇಶನ ಹಸ್ತಾಂತರಿಸಿದರು.

ಪ್ರಜ್ವಲ್‌ನ ತಾಯಿ ಗಂಗವ್ವನನ್ನು ಫಲಾನುಭವಿಯೆಂದು ಆಯ್ಕೆ ಮಾಡಿತ್ತು

ಕಳೆದ ಜ.22ರಂದು ಗ್ರಾಪಂ ವಿಶೇಷ ಗ್ರಾಮಸಭೆ ಪ್ರಜ್ವಲ್‌ನ ತಾಯಿ ಗಂಗವ್ವನನ್ನು ಫಲಾನುಭವಿಯೆಂದು ಆಯ್ಕೆ ಮಾಡಿತ್ತು. ನಂತರ ಗಣರಾಜ್ಯೋತ್ಸವದಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ಸರ್ಕಾರದಿಂದ ₹5 ಲಕ್ಷ ಬಹುಮಾನದೊಂದಿಗೆ ಸೈಟ್‌ ನೀಡುವ ಪತ್ರ ನೀಡಿದ್ದರು. ಅದರಂತೆ ಗುರುವಾರ ರಿತ್ತಿ ಕುಟುಂಬಕ್ಕೆ ನಿವೇಶನ ಸಿಕ್ಕಿದೆ.

ಕುಟುಂಬ ಸಂತಸ

ನಿವೇಶನವನ್ನು ತೋರಿಸಿರುವುದಕ್ಕೆ ಪ್ರಜ್ವಲ್ ರಿತ್ತಿ ಕುಟುಂಬವು ಸಂತಸ ವ್ಯಕ್ತಪಡಿಸಿದೆ.

PREV
Read more Articles on
click me!

Recommended Stories

ನಮ್ಮ ಸರ್ಕಾರ ಇದ್ದಿದ್ರೆ ₹5000 ಕೊಡ್ತಿದ್ವಿ: ಎಚ್‌ಡಿ ಕುಮಾರಸ್ವಾಮಿ
₹593 ಕೋಟಿ GST ವಂಚನೆ: ಸೂತ್ರದಾರಿ ಮೊಹಮ್ಮದ್ ಸೈಫುಲ್ಲಾ ಸೆರೆ!