ಕುಟುಂಬ ಒಂದು ತರಿಕೆರೆ ಶಾಸಕರಿಂದ ತಮ್ಮ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ ನ್ಯಾಯ ಕೊಡಿಸಿ ಎಂದು ಆರೋಪ ಮಾಡಿದೆ. ಸಿಎಂ ಪುತ್ರ ವಿಜಯೇಂದ್ರ ಮುಮದೆ ಆರೋಪ ಮಾಡಿದೆ.
ಚಿಕ್ಕಮಗಳೂರು (ಮಾ.15): ಸಿಎಂ ಪುತ್ರ ವಿಜಯೇಂದ್ರ ಮುಂದೆ ಕುಟುಂಬ ಒಂದು ಕಣ್ಣೀರು ಹಾಕಿದೆ. ಸೂಕ್ತ ನಾಯ್ಯಕ್ಕಾಗಿ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.
ನ್ಯಾಯ ಕೊಡಿ ಇಲ್ಲವೇ ದಯಾಮರಣ ಕೊಡಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಸಿಎಂ ಪುತ್ರ ವಿಜಯೇಂದ್ರ ಕಾರಿಗೆ ಅಡ್ಡಗಟ್ಟಿ ನ್ಯಾಯ ಕೇಳಿದ್ದಾರೆ.
ತರೀಕೆರೆ ಬಿಜೆಪಿ ಶಾಸಕ ಸುರೇಶ್ ತಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಜಮೀನು ವಿವಾದದಲ್ಲಿ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಕಾರ್ಯಕ್ರಮದ ಹಿನ್ನಲೆಯಲ್ಲಿ ಚಿಕ್ಕಮಗಳೂರಿಗೆ ಆಗಮಿಸಿದ ಸಿಎಂ ಪುತ್ರ ವಿಜಯೇಂದ್ರ ಬಳಿ ಅಳಲು ತೊಡಿಕೊಂಡಿದ್ದಾರೆ.
ಸಿಡಿ ಕೇಸ್; ಮಹತ್ವದ ಸಂಗತಿ ಇಟ್ಟುಕೊಂಡು ಸಿಎಂ ಭೇಟಿ ಮಾಡ್ತಾರೆ ಬ್ರದರ್ಸ್ ..
ಪೊಲೀಸ್ ಠಾಣೆಗೆ ದೂರು ನೀಡಿದರೆ ನ್ಯಾಯ ಸಿಗುತ್ತಿಲ್ಲ. ಸೂಕ್ತ ನ್ಯಾಯ ನೀಡುವಂತೆ ಸಿಎಂ ಪುತ್ರನಿಗೆ ಮನವಿ ಸಲ್ಲಿಸಿದ್ದಾರೆ.
ತರೀಕೆರೆ ಲಕ್ಕವಳ್ಳಿ ಸಮೀಪ ಚಿಕ್ಕಮಗಳೂರು ಮೂಲದ ಪ್ರಸನ್ನ ಜಮೀನು ಖರೀದಿ ಮಾಡಿದ್ದರು. 7 ವರ್ಷದ ಹಿಂದೆ ಪ್ರಸನ್ನ ಕುಟುಂಬ ಲಕ್ಕವಳ್ಳಿಯಲ್ಲಿ 50 ಎಕರೆ ಜಮೀನು ಖರೀದಿ ಮಾಡಿತ್ತು. ಕಳೆದ ಒಂದು ವರ್ಷದಿಂದ ತರೀಕೆರೆ ಶಾಸಕ ಸುರೇಶ್ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಪ್ರಸನ್ನ ಕುಟುಂಬ ಆರೋಪ ಮಾಡಿದೆ.
ಪ್ರಕರಣ ನ್ಯಾಯಾಲಯದಲ್ಲಿ ಇದ್ದರೂ ಶಾಸಕರು ಹಿಂಬಾಲಕರ ಮೂಲಕ ಹಲ್ಲೆ ನಡೆಸುತ್ತಿದ್ದಾರೆ ಎಂದು ಸಿಎಂ ಪುತ್ರ ವಿಜಯೇಂದ್ರ ಮುಂದೆ ಕಣ್ಣೀರು ಹಾಕಿದ್ದಾರೆ. ಸೂಕ್ತ ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ.