Chikkaballapura : ಅಕ್ಕನ ಗಂಡನ್ನ ವರಿಸಿ, ಕೊರಿಯರ್‌ ಬಾಯ್‌ ಜೊತೆ ಎಸ್ಕೇಪ್‌ ಆದ MSc ಪದವೀಧರೆ !

By Kannadaprabha News  |  First Published Nov 14, 2022, 12:30 PM IST

ಬೆಕ್ಕಿಗೆ ಚೆಲ್ಲಾಟ. ಇಲಿಗೆ ಪ್ರಾಣ ಸಂಕಟ ಎನ್ನುವಾಗೆ ತಮ್ಮ ಮಗಳ ಪ್ರೇಮ ಪುರಾಣಕ್ಕೆ ಪೋಷಕರೇ ಹೈರಾಣಾಗಿ ತಮ್ಮ ಮಗಳನ್ನು ತಮಗೆ ಒಪ್ಪಿಸುವಂತೆ ಪೊಲೀಸ್‌ ಠಾಣೆ ಎದುರು ಪರಿ ಪರಿಯಾಗಿ ಕೇಳಿದರೂ ಮಗಳು ಮಾತ್ರ ಜಪ್ಪಯ್ಯ ಅಂದರೂ ನಾನು ಬರಲ್ಲ ನಮ್ಮ ಪಾಡಿಗೆ ನಮ್ಮನ್ನು ಬಿಡಿ ಎಂದು ಹೇಳಿ ಪ್ರೀತಿಸಿದಾತನ ಜೊತೆ ಹೊರಟಳು.


  ಚಿಕ್ಕಬಳ್ಳಾಪುರ (ನ.14):  ಬೆಕ್ಕಿಗೆ ಚೆಲ್ಲಾಟ. ಇಲಿಗೆ ಪ್ರಾಣ ಸಂಕಟ ಎನ್ನುವಾಗೆ ತಮ್ಮ ಮಗಳ ಪ್ರೇಮ ಪುರಾಣಕ್ಕೆ ಪೋಷಕರೇ ಹೈರಾಣಾಗಿ ತಮ್ಮ ಮಗಳನ್ನು ತಮಗೆ ಒಪ್ಪಿಸುವಂತೆ ಪೊಲೀಸ್‌ ಠಾಣೆ ಎದುರು ಪರಿ ಪರಿಯಾಗಿ ಕೇಳಿದರೂ ಮಗಳು ಮಾತ್ರ ಜಪ್ಪಯ್ಯ ಅಂದರೂ ನಾನು ಬರಲ್ಲ ನಮ್ಮ ಪಾಡಿಗೆ ನಮ್ಮನ್ನು ಬಿಡಿ ಎಂದು ಹೇಳಿ ಪ್ರೀತಿಸಿದಾತನ ಜೊತೆ ಹೊರಟಳು.

ಹೌದು, ಸ್ವಂತ ತನ್ನ ಅಕ್ಕನ ಗಂಡನನ್ನೇಯ (Love)  ಬಲೆಗೆ ಬಿಳೀಸಿ ಯಾಗಿದ್ದ ಮಹಿಳೆ (Woman)  ಕೆಲ ದಿನಗಳ ಬಳಿಕ ಕೊರಿಯರ್‌ ಬಾಯ್‌ ಜೊತೆ ಪ್ರೇಮದಾಟದಲ್ಲಿ ಮುಳಗಿ ಆತನನ್ನೂ ಮದುವೆಯಾಗಿ ಇಬ್ಬರು ಗಂಡಂದಿರ ಜೊತೆಗೆ ಡಬಲ್‌ ಗೇಮ್‌ ಆಡುತ್ತಿದ್ದ ಪ್ರಸಂಗ ಜಿಲ್ಲಾ ಕೇಂದ್ರದಲ್ಲಿ ನಡೆದಿದೆ.

Tap to resize

Latest Videos

ಪ್ರಕರಣದ ವಿವರ:

ಸದ್ಯ ಇಬ್ಬರ ಗಂಡರ ಮಧ್ಯೆ ಡಬಲ್‌ ಗೇಮ್‌ ಆಡುತ್ತಿರುವ ಮಹಿಳೆ ದಿವ್ಯಾ ಬಿ.ಎಡ್…. ಎಂ.ಎಸ್ಸಿ ಪದವೀಧರೆ, ಕೈ ತುಂಬ ಸಂಬಳ ಬರುತ್ತಿದ್ದು. ಮುಳಬಾಗಿಲಿನ ಡಿ.ಸಿ.ಸಿ ಬ್ಯಾಂಕ್‌ ನಲ್ಲಿ ಉದ್ಯೋಗಿ, ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮಣಿಗಾನಹಳ್ಳಿ ನಿವಾಸಿ ಜಯಮ್ಮ ಹಾಗೂ ವಿ ನಾರಾಯಣಪ್ಪ ದಂಪತಿಗೆ ಮೂರು ಜನ ಹೆಣ್ಣು ಮಕ್ಕಳು. ಅದರಲ್ಲಿ ದೊಡ್ಡ ಮಗಳು ಮಂಜುಳಾಳನ್ನು ಆಂಧ್ರದ ವಿ ಕೋಟೆ ಗ್ರಾಮದ ಸುಬ್ರಮಣ್ಯಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದರು.

ಮಂಜುಳಾರ ಕೊನೆಯ ತಂಗಿಯಾಗಿದ್ದ ದಿವ್ಯಾ ಸ್ವತಃ ತನ್ನ ಅಕ್ಕನ ಗಂಡ ಬಾವ ಸುಬ್ರಮಣ್ಯ ನನ್ನು ಪ್ರೀತಿಸಿದಳು. ಕಾಡಿ ಬೇಡಿ ಅತ್ತು ಕರೆದು ಭಾವನನ್ನೇ ಮದುವೆ ಮಾಡಿಕೊಂಡಿದ್ದಳು. ಆದರೆ ಮದುವೆಯಾಗಿ ಕೇವಲ ಹತ್ತು ತಿಂಗಳಲ್ಲೇಪರಿಚಯಸ್ಥನಾಗಿದ್ದ ಕೊರಿಯರ್‌ ಬಾಯ್‌ ಚಂದ್ರಶೇಖರ್‌ ಎಂಬುವರನ್ನು ಪ್ರೀತಿಸತೊಡಗಿದಳು. ಮನೆಯವರ ವಿರೋಧದ ನಡುವೆ ಮದುವೆಯೂ ಮಾಡಿಕೊಂಡಳು. ಇದನ್ನ ಅತ ಆಕೆಯ ಪೋಷಕರು ದಿವ್ಯಾಳನ್ನು ಕೋಲಾರ ಜಿಲ್ಲೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಡಿ.ಸಿ.ಸಿ ಬ್ಯಾಂಕ್‌ ಗೆ ವರ್ಗಾವಣೆ ಮಾಡಿಸಿದ್ದರು.

ಅಲ್ಲಿಯೂ ದಿವ್ಯ ಕೊರಿಯರ್‌ ಬಾಯ್‌ ಜೊತೆ ತನ್ನ ಪ್ರೇಮ ಪುರಾಣ ಮುಂದುವರೆಸಿದ್ದಾರೆ. ದಿವ್ಯಾ-ಚಂದ್ರಶೇಖರ್‌ ಪ್ರೇಮಕ್ಕೆ, ಮರು ಮದುವೆಗೆ ಮನೆಯಲ್ಲಿ ವಿರೋಧ ವ್ಯಕ್ತವಾದ ಕಾರಣ ಇಬ್ಬರೂ ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋಗಿದ್ದರು ಎನ್ನಲಾಗಿದೆ. ಇದರಿಂದ ಆಕೆಯ ಪೋಷಕರು ಚಿಕ್ಕಬಳ್ಳಾಪುರ ಮಹಿಳಾ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

ಪೊಲೀಸರು ಇಬ್ಬರನ್ನೂ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದಾರೆ. ಇಬ್ಬರೂ ಜೂನ್‌ 10ರಂದೇ ಮದುವೆ ಆಗಿದ್ದು, ಅಗಸ್ಟ… 10ರಂದು ಬಂಗಾರಪೇಟೆಯಲ್ಲಿ ಮದುವೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಇದರಿಂದ ತಮ್ಮನ್ನು ತಮ್ಮ ಪಾಡಿಗೆ ಬದುಕಲು ಬಿಡಿ ಎಂದು ಪೊಲೀಸರು ಹಾಗೂ ತಂದೆ ತಾಯಿಯ ಎದುರು ಗೋಗರೆದಿದ್ದಾರೆ. ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್‌ ಠಾಣೆ ಮುಂದೆ ನಮ್ಮ ಮಗಳನ್ನು ನಮ್ಮ ಜೊತೆ ಕಳುಹಿಸಿ ಕೊಡಿ ಎಂದು ದಿವ್ಯಾಳ ವೃದ್ದ ತಂದೆ ತಾಯಿ, ಅತ್ತು ಕರೆದು ಗೋಳಾಡಿದ್ದಾರೆ.

 ಅಕ್ಕನ ಗಂಡನ್ನ ವರಿಸಿ, ಕೊರಿಯರ್‌ ಬಾಯ್‌ ಜೊತೆ ಎಸ್ಕೇಪ್‌!

ಸ್ವಂತ ತನ್ನ ಅಕ್ಕನ ಗಂಡನನ್ನೇ ಪ್ರೀತಿಯ ಬಲೆಗೆ ಬಿಳೀಸಿ ಮದುವೆಯಾಗಿದ್ದ ಮಹಿಳೆ

ಕಾಡಿ ಬೇಡಿ ಅತ್ತು ಕರೆದು ಭಾವನನ್ನೇ ಮದುವೆ ಮಾಡಿಕೊಂಡಿದ್ದಳು

ಕೆಲ ದಿನಗಳ ಬಳಿಕ ಕೊರಿಯರ್‌ ಬಾಯ್‌ ಜೊತೆ ಪ್ರೇಮದಾಟದಲ್ಲಿ ಮುಳಗಿ ಆತನನ್ನೂ ಮದುವೆಯಾಗಿ ಇಬ್ಬರು ಗಂಡಂದಿರ ಜೊತೆಗೆ ಡಬಲ್‌ ಗೇಮ್‌

ಮಗಳ ಪ್ರೇಮ ಪುರಾಣಕ್ಕೆ ಪೋಷಕರು ಹೈರಾಣ - ಮಗಳನ್ನ ನಮಗೇ ಒಪ್ಪಿಸಿ ಎಂದು ಆಗ್ರಹ

click me!