600 ಅಡಕೆ ಮರ ಮಾರಣಹೋಮ : ರೈತನ ಕಣ್ಣೀರೊರೆಸಿ ಆಸರೆಯಾದ ಪಿಎಸ್‌ಐ

By Sujatha NRFirst Published Aug 30, 2020, 12:59 PM IST
Highlights

600 ಅಡಕೆ ಮರ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದ ರೈತನಿಗೆ ತುಮಕೂರು ಜಿಲ್ಲೆಯ ಪಿಎಸ್‌ಐ ಆಸರೆಯಾಗಿದ್ದಾರೆ.

ಕುಣಿಗಲ್‌ (ಆ.30): ದುಷ್ಕೃತ್ಯದಿಂದ ಅಡಕೆ ಮರಗಳನ್ನು ಕಳೆದುಕೊಂಡು ಕಂಗಲಾಗಿದ್ದ ರೈತನಿಗೆ ಕುಣಿಗಲ್‌ ಪಿಎಸ್‌ಐ ವಿಕಾಸ್‌ ಗೌಡ ಆಸರೆಯಾಗಿದ್ದಾರೆ.

ತಾಲೂಕಿನ ಹೇರೂರು ಗ್ರಾಮದಲ್ಲಿ ದುಷ್ಕರ್ಮಿಗಳು ಕೃತ್ಯದಿಂದಾಗಿ ಫಸಲಿಗೆ ಬಂದಿದ್ದ ಸುಮಾರು 600ಕ್ಕೂ ಅಧಿಕ ಅಡಕೆ ಮರಗಳನ್ನು ಕಡಿದು ಹಾಕಿದ್ದರು. ಬಡವನಿಗೆ ಆಸರೆಯಾಗಿದ್ದ ತೋಟ ರಾತ್ರೋರಾತ್ರಿ ನೆಲಸಮವಾಗಿತ್ತು.

ಇದರಿಂದ ಕಂಗಾಲಾಗಿದ್ದ ರೈತರ ಕಷ್ಟಅರಿತ ಕುಣಿಗಲ್‌ನ ನಿಷ್ಠಾವಂತ ಅಧಿಕಾರಿ ಕುಣಿಗಲ್‌ನ ಸಿಂಗಂ ಎಂದೆನಿಸಿಕೊಂಡಿರುವ ಪಿ.ಎಸ್‌.ಐ ವಿಕಾಸ್‌ ಗೌಡ ರೈತನಿಗೆ ತನ್ನ ಕೈಲಾದ ಸಹಾಯವನ್ನು ಮಾಡಲು ತನ್ನ ಸ್ನೇಹಿತ ಎಚ್‌.ಡಿ ಕೋಟೆಯ ಶ್ರೀರಾಮ್‌ ಜೊತೆಗೂಡಿ 600 ಸಸಿಗಳನ್ನು ಸ್ವಂತ ಖರ್ಚಿನಲ್ಲಿ ಖರೀದಿಸಿ ರೈತನಿಗೆ ಆಸರೆಯಾಗಿದ್ದಾರೆ.

ಮಕ್ಕಳಂತೆ ಬೆಳೆಸಿದ್ದ 2 ಎಕರೆ ಅಡಕೆ ಮರಗಳನ್ನು ಕತ್ತರಿಸಿ ಹಾಕಿದರು...

ಪೊಲೀಸ್‌ ಎಂದರೆ ಜನರ ಮನಸ್ಸಿನಲ್ಲಿ ಇರುವ ಭಾವನೆಯ ಬೇರೆಯದ್ದೇ ಇರುತ್ತೆ. ಆದರೆ ಕುಣಿಗಲ್‌ ಪಿ.ಎಸ್‌.ಐ ವಿಕಾಸ್‌ ಗೌಡ ಎಂದರೆ ರೈತರ ಕಷ್ಟಸ್ಪಂದಿಸಿದ ನಿಷ್ಠಾವಂತ ಅಧಿಕಾರಿ.

click me!