ರಾಜಕೀಯ ನಾಯಕರು, ಗಣ್ಯರು ತಂಗುವ ಕುಮಾರಕೃಪಾ ಸಿಬ್ಬಂದಿಗೆ ಸೋಂಕು

Kannadaprabha News   | Asianet News
Published : Jul 18, 2020, 08:39 AM IST
ರಾಜಕೀಯ ನಾಯಕರು, ಗಣ್ಯರು ತಂಗುವ ಕುಮಾರಕೃಪಾ ಸಿಬ್ಬಂದಿಗೆ ಸೋಂಕು

ಸಾರಾಂಶ

ರಾಜ್ಯದಲ್ಲಿ ಹಿರಿಯ ರಾಜಕೀಯ ನಾಯಕರು, ಗಣ್ಯರು ತಂಗುವ ಕುಮಾರಕೃಪಾ ಅತಿಥಿ ಗೃಹಕ್ಕೂ ಕೊರೋನಾ ಕಾಟ ಶುರುವಾಗಿದ್ದು ಅತಿಥಿಗೃಹದ ಅಡುಗೆ ಸಿಬ್ಬಂದಿ ಸೇರಿದಂತೆ ಬರೋಬ್ಬರಿ 16 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಬೆಂಗಳೂರು(ಜು.18): ರಾಜ್ಯದಲ್ಲಿ ಹಿರಿಯ ರಾಜಕೀಯ ನಾಯಕರು, ಗಣ್ಯರು ತಂಗುವ ಕುಮಾರಕೃಪಾ ಅತಿಥಿ ಗೃಹಕ್ಕೂ ಕೊರೋನಾ ಕಾಟ ಶುರುವಾಗಿದ್ದು ಅತಿಥಿಗೃಹದ ಅಡುಗೆ ಸಿಬ್ಬಂದಿ ಸೇರಿದಂತೆ ಬರೋಬ್ಬರಿ 16 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಪರಿಣಾಮ ಕುಮಾರಕೃಪಾ ಅತಿಥಿಗೃಹದ ಒಂದು ಕಟ್ಟಡವನ್ನು ಮೂರು ದಿನಗಳ ಕಾಲ ಸಂಪೂರ್ಣ ಸೀಲ್‌ಡೌನ್‌ ಮಾಡಲಾಗಿದೆ. ಅತಿಥಿ ಗೃಹದ ಹಳೆಯ ಕಟ್ಟಡದಲ್ಲಿ ಸೇವೆ ಸಲ್ಲಿಸುತ್ತಿರುವ ಒಬ್ಬರು ಅಧಿಕಾರಿ, ಇಬ್ಬರು ಮಹಿಳಾ ಸಿಬ್ಬಂದಿ ಸೇರಿ ಒಟ್ಟು 16 ಮಂದಿಗೆ ಸೋಂಕು ದೃಡಪಟ್ಟಿದೆ. ಎಲ್ಲರನ್ನೂ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.

ಕೊರೋನಾ ಆರ್ಭಟ: 100 ಟಿಟಿ ವಾಹನಗಳು ಆ್ಯಂಬುಲೆನ್ಸಾಗಿ ಪರಿವರ್ತನೆ

ಮುಂದಿನ ಮೂರು ದಿನಗಳವರೆಗೆ ಯಾರಿಗೂ ಹಳೆಯ ಕಟ್ಟಡದ ಕೊಠಡಿಗಳು ಬುಕ್ಕಿಂಗ್‌ ಮಾಡಲು ಅವಕಾಶ ನೀಡಿಲ್ಲ. ಜೊತೆಗೆ ಮೂರು ದಿನಗಳ ಕಾಲ ಸೀಲ್‌ಡೌನ್‌ ಮಾಡಿ ಸಂಪೂರ್ಣ ಸ್ಯಾನಿಟೈಸ್‌ ಮಾಡಲಾಗುವುದು ಎಂದು ಅತಿಥಿಗೃಹದ ಸಿಬ್ಬಂದಿ ಮಾಹಿತಿ ನೀಡಿದರು.

ನಗರದಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಜನಶಕ್ತಿ ಕೇಂದ್ರ ವಿಧಾನಸೌಧ ಹೊರಭಾಗವನ್ನು ಮುಂಜಾಋತಾ ಕ್ರಮವಾಗಿ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಯಾನಿಸೈಟ್ ಮಾಡಿದ್ದಾರೆ.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC