ಬೆಂಗಳೂರು ವಿಮಾನ ನಿಲ್ದಾಣದಿಂದ ದ. ಕೊಡಗಿಗೆ ಫ್ಲೈಬಸ್ ಸೇವೆ; ವೇಳಾಪಟ್ಟಿ ಇಲ್ಲಿದೆ ನೋಡಿ

Published : Aug 09, 2026, 09:13 AM IST
KSRTC Flybus

ಸಾರಾಂಶ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಆಗಸ್ಟ್ 15 ರಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಲ್ಲಿಕೋಟೆಗೆ ಹೊಸ ಫ್ಲೈಬಸ್ ಸೇವೆಯನ್ನು ಆರಂಭಿಸುತ್ತಿದೆ. ಈ ಬಸ್ ದಕ್ಷಿಣ ಕೊಡಗಿನ ಗೋಣಿಕೊಪ್ಪಲು, ಪೊನ್ನಂಪೇಟೆ, ಮತ್ತು ಕುಟ್ಟ ಮಾರ್ಗವಾಗಿ ಸಂಚರಿಸಲಿದ್ದು, ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲಿದೆ.

ಪೊನ್ನಂಪೇಟೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ನೂತನವಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇರಳದ ಕಲ್ಲಿಕೋಟೆಗೆ ಫ್ಲೈ ಬಸ್ ಸೇವೆ ಆರಂಭಿಸಲಿದ್ದು, ಇದು ದಕ್ಷಿಣ ಕೊಡಗಿನ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಆ. 15ರಿಂದ ಈ ನೂತನ ಬಸ್ ಸೇವೆ ಪ್ರಾರಂಭವಾಗಲಿದೆ.

ಬಸ್ ಸಮಯ ಈ ರೀತಿಯಾಗಿದೆ

ರಾತ್ರಿ 10.40 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಈ ಬಸ್ಸು ಮೈಸೂರು, ಹುಣಸೂರು ಮಾರ್ಗವಾಗಿ ಬೆಳಗಿನ ಜಾವ 4:15 ಗಂಟೆಗೆ ಗೋಣಿಕೊಪ್ಪಲು, 4:20 ಗಂಟೆಗೆ ಪೊನ್ನಂಪೇಟೆ ಮತ್ತು 4:50 ಗಂಟೆಗೆ ಕುಟ್ಟ ತಲುಪಲಿದೆ. ನಂತರ ಮಾನಂದವಾಡಿ- ಕಲ್ಪೆಟ್ಟ ಮಾರ್ಗವಾಗಿ ಬೆಳಗ್ಗೆ 7:15 ಗಂಟೆಗೆ ಕಲ್ಲಿಕೋಟೆ ತಲುಪಲಿದೆ.

ಅದೇ ರೀತಿ ರಾತ್ರಿ 7:30 ಗಂಟೆಗೆ ಕಲ್ಲಿಕೋಟೆಯಿಂದ ಹೊರಡುವ ಈ ಬಸ್ಸು, ಕಲ್ಪೆಟ್ಟ-ಮಾನದವಾಡಿ ಮಾರ್ಗವಾಗಿ ರಾತ್ರಿ 10:15 ಗಂಟೆಗೆ ಕುಟ್ಟ ತಲುಪಲಿದೆ. ಅಲ್ಲಿಂದ ರಾತ್ರಿ 10:45ಕ್ಕೆ ಪೊನ್ನಂಪೇಟೆಯಿಂದ, 10:50ಕ್ಕೆ ಗೋಣಿಕೊಪ್ಪದಿಂದ ಹೊರಡುವ ಬಸ್ಸು ಹುಣಸೂರು-ಮೈಸೂರು ಮಾರ್ಗದಲ್ಲಿ ಸಂಚರಿಸಿ ಬೆಳಗಿನ ಜಾವ 4:15 ಗಂಟೆಗೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ.

ದಕ್ಷಿಣ ಕೊಡಗಿನ ಜನರ ಬಹುದಿನಗಳ ಬೇಡಿಕೆ

ದಕ್ಷಿಣ ಕೊಡಗಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಸ್ ಸೌಲಭ್ಯ ಒದಗಿಸಲು ಸಾಕಷ್ಟು ಬಾರಿ ಸಂಬಂಧಿಸಿದವರಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಇದೀಗ ನೂತನ ಈ ಫ್ಲೈ ಬಸ್ ಸೇವೆಯಿಂದಾಗಿ ದಕ್ಷಿಣ ಕೊಡಗಿನ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಇನ್ನು ದ. ಕೊಡಗಿನ ವಿಮಾನ ಯಾತ್ರಿಗಳು ಗೋಣಿಕೊಪ್ಪಲು, ಪೊನ್ನಂಪೇಟೆ, ಕುಟ್ಟ ಭಾಗಗಳಿಂದ ನೇರವಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಬಹುದಾಗಿದೆ.

PREV
Read more Articles on
click me!

Recommended Stories

ಬೆಂಗಳೂರಲ್ಲಿ ಪಾಪಿ ಪತಿಯಿಂದ ಪೈಶಾಚಿಕ ಕೃತ್ಯ.. ಪತ್ನಿಯ ಜೀವ ತೆಗೆದು ಮೋರಿಗೆ ಎಸೆದ! ಕಾರಣ?
ಕೆಐಒಸಿಎಲ್‌-ಎನ್‌ಎಂಡಿಸಿ ವಿಲೀನಕ್ಕೆ ಕಾರ್ಮಿಕ ನಿಯೋಗ ಕೇಂದ್ರಕ್ಕೆ ಮನವಿ