ನಾನು ಭಿಕ್ಷೆ ಎತ್ತಲೂ ಸಿದ್ಧವಾಗಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡರನ್ನು ಉದ್ದೇಶಿಸಿ ಡಿಕೆಶಿ ಈ ಮಾತು ಹೇಳಿದ್ದಾರೆ
ಹೊಸಪೇಟೆ (ನ.23): ಬಳ್ಳಾರಿ ಸೇರಿದಂತೆ ಪ್ರತಿ ತಾಲೂಕಿನಲ್ಲಿ ಪಕ್ಷದ ಕಚೇರಿ ಸ್ಥಾಪನೆಗೆ ಭಿಕ್ಷೆ ಎತ್ತಲು ಕೂಡ ಸಿದ್ಧನಾಗಿರುವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದರು.
ನಗರದ ಸಾಯಿಲೀಲಾ ಕಲ್ಯಾಣ ಮಂಟಪದಲ್ಲಿ ನಡೆದ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸ್ವಂತ ಕಚೇರಿ ಹೊಂದಬೇಕು. ಇದಕ್ಕಾಗಿ ದೇಣಿಗೆ ಸಂಗ್ರಹಿಸೋಣ. ಪಕ್ಷಕ್ಕಾಗಿ ಕಾರ್ಯಕರ್ತರಿಂದ ಇಟ್ಟಿಗೆ, ಸಿಮೆಂಟ್, ಐವತ್ತು, ನೂರು ರು. ಸಂಗ್ರಹಿಸೋಣ ಎಂದರು.
ಈ ವೇಳೆ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಇಮಾಮ್ ನಿಯಾಜಿ ಅವರು, ಹೊಸಪೇಟೆಯಲ್ಲಿ 60/40 ಸೈಟ್ ದಾನವಾಗಿ ನೀಡುವೆ ಎಂದು ಅಧ್ಯಕ್ಷರಿಗೆ ತಿಳಿಸಿದರು. ಕೂಡಲೇ ಡಿ.ಕೆ. ಶಿವಕುಮಾರ ಅವರು ತಮ್ಮ ಹೆಗಲ ಮೇಲಿದ್ದ ಶಾಲು ಇಮಾಮ್ ಅವರಿಗೆ ಹೊದಿಸಿ ಶಹಬ್ಬಾಸ್‌ಗಿರಿ ನೀಡಿದರು.
ಹೊಸ ಬಾಂಬ್ ಸಿಡಿಸಿದ ಡಿಕೆಶಿ, ಅನಿಲ್ ಲಾಡ್: ರಾಜ್ಯ ರಾಜಕಾರಣದಲ್ಲಿ ಸಂಚಲನ
ಶಾಸಕರಾದ ಪಿ.ಟಿ. ಪರಮೇಶ್ವರ ನಾಯ್ಕ, ಈ. ತುಕಾರಾಂ, ಬಿ. ನಾಗೇಂದ್ರ, ಭೀಮಾನಾಯ್ಕ, ಜೆ.ಎನ್. ಗಣೇಶ್, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಮಾಜಿ ಸಚಿವ ಸಂತೋಷ್ ಲಾಡ್, ಮಾಜಿ ಶಾಸಕರಾದ ಅನಿಲ್ ಲಾಡ್, ಸಿರಾಜ್ ಶೇಕ್, ರಾಜ್ಯಸಭೆ ಸದಸ್ಯ ಸೈಯದ್ ನಾಸೀರ್ ಹುಸೇನ್, ಬಳ್ಳಾರಿ ಜಿಲ್ಲಾಧ್ಯಕ್ಷ ಮಹಮ್ಮದ್ ರಫೀಕ್, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶಿವಯೋಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಮಾಮ್ ನಿಯಾಜಿ, ವಿ. ಸೋಮು, ಮುಖಂಡರಾದ ವೆಂಕಟರಾವ್ ಘೋರ್ಪಡೆ, ದೀಪಕ್ ಸಿಂಗ್, ಭರತ್ ರೆಡ್ಡಿ, ಗುಜ್ಜಲ ನಾಗರಾಜ್, ಗುಜ್ಜಲ ರಘು ಮತ್ತಿತರರಿದ್ದರು.