ಕೊರಟಗೆರೆ : ತಾಲೂಕಿನಾದ್ಯಂತ ಮನೆ ಮನೆಗೆ ಮಂತ್ರಾಕ್ಷತೆ ವಿತರಣೆ

By Kannadaprabha News  |  First Published Jan 19, 2024, 9:46 AM IST

ಇದೇ ತಿಂಗಳು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ವಿಶ್ವ ಹಿಂದೂ ಪರಿಷತ್ ನಿಂದ ತಾಲೂಕಿನ 24 ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಮನೆ ಮನೆಗೆ ಭೇಟಿ ನೀಡಿ ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯನ್ನು ಮತ್ತು ಕರಪತ್ರ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.


  ಕೊರಟಗೆರೆ :  ಇದೇ ತಿಂಗಳು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ವಿಶ್ವ ಹಿಂದೂ ಪರಿಷತ್ ನಿಂದ ತಾಲೂಕಿನ 24 ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಮನೆ ಮನೆಗೆ ಭೇಟಿ ನೀಡಿ ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯನ್ನು ಮತ್ತು ಕರಪತ್ರ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ರಾಜ್ಯ ಕಾರ್ಯದರ್ಶಿ ರುದ್ರೇಶ್ ಮಾತನಾಡಿ, ಭಾರತೀಯ ಗಳು ಜ. 22 ರಂದು ವಿಶೇಷ ದಿನವನ್ನಾಗಿ ಆಚರಣೆ ಮಾಡಲು ಮುಂದಾಗಿದ್ದಾರೆ. ಪ್ರಧಾನಿಯವರು ರಾಮನ ಜನ್ಮಸ್ಥಳದ ಅಯೋಧ್ಯೆಯಲ್ಲಿ ಶ್ರೀರಾಮನ ದೇವಾಲಯ ನಿರ್ಮಸಿದ್ದಾರೆ, ಆದ್ದರಿಂದ ಆ ದಿನದಂದು ನ ಸ್ಮರಣೆಯಲ್ಲಿ ನಿರತರಾಗಿ, ರಾಮನ ಮೂರ್ತಿಯ ಪ್ರತಿಷ್ಠಾಪನೆಯ ವೇಳೆ ಎಲ್ಲರೂ ವಿಶೇಷ ಪೂಜೆ ಸಲ್ಲಿಸಿ ತಮ್ಮ ಕಷ್ಟಗಳನ್ನು ಹಿಡೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿ ಎಂದು ಹೇಳಿದರು.

Latest Videos

undefined

ಮಂತ್ರಾಕ್ಷತೆ ಅಭಿಯಾನದ ತಾ. ಸಂಯೋಜಕ ಪ್ರದೀಪ್‌ ಕುಮಾರ್ ಮಾತನಾಡಿ, ಅಯೋಧ್ಯೆಯ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಬರುವಂತೆ ತಾಲೂಕಿನ ಗ್ರಾ.ಪಂ ವ್ಯಾಪ್ತಿಯ ಗ್ರಾಮದ ಮನೆ ಮನೆಗೆ ಭೇಟಿ ನೀಡಿ ವಿಶ್ವ ಹಿಂದೂ ಪರಿಷತ್‌ನ ಸರ್ವ ಸದಸ್ಯರು ಆಮಂತ್ರಣ ಮತ್ತು ಮಂತ್ರಾಕ್ಷತೆಯನ್ನು ನೀಡಲಾಯಿತು ಎಂದರು.

ಮಂತ್ರಾಕ್ಷತೆ ರೂಪದಲ್ಲಿ ದೇವರೇ ಮನೆಗೆ ಬರಲಿದ್ದಾರೆ. ಅದನ್ನು ಜಾಗರೂಕವಾಗಿರಿಸಿ ಪೂಜೆ ಮಾಡುವ ಪ್ರತಿಜ್ಞೆ ಮಾಡಬೇಕು. ಜ. 22ರಂದು ಪ್ರತೀ ಗ್ರಾಮದಲ್ಲಿ ಹರೇರಾಮ್, ಭಜನೆ ಹಾಡುಗಳನ್ನು ಹಾಡಬೇಕು. ಸಂಜೆ 5 ಗಂಟೆಗೆ ಜ್ಯೋತಿ ಬೆಳಗಿ ಉತ್ತರ ದಿಕ್ಕಿಗೆ ಆರತಿ ಬೆಳಗುವ ಮೂಲಕ ಇದನ್ನು ಅವಿಸ್ಮರಣೀಯ ದಿನವನ್ನಾಗಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ರುದ್ರೇಶ್, ಕೃಷ್ಣಮೂರ್ತಿ, ಪೂರ್ಣಿಮಾ, ಶಿವಪ್ರಸಾದ್, ಅನಿಲ್ ಸಿರ್ವಿ, ದಿಲೀಪ್ ಸಿರ್ವಿ, ಜಗದೀಶ್ ಸಿರ್ವಿ, ಮೋಹನ್ ಕೋಳಾಲ ಸೇರಿದಂತೆ ಪರಿಷತ್ ಸರ್ವ ಸದಸ್ಯರು ಭಾಗಿಯಾಗಿದ್ದರು.

click me!