ಕೊಪ್ಪಳ: ಕೊರೋನಾ ಸೋಂಕಿತನ ಸಂಪರ್ಕದ ವ್ಯಕ್ತಿಯ ಹುಡುಕಲು ಹರಸಾಹಸ

By Kannadaprabha News  |  First Published May 24, 2020, 7:26 AM IST

1173 ಪ್ರಾಥಮಿಕ ಸಂಪರ್ಕದ ವ್ಯಕ್ತಿ ಹುಡುಕಾಟಕ್ಕಾಗಿ ಜಿಲ್ಲಾಡಳಿತ ಹರಸಾಹಸ|ಪಾಸಿಟಿವ್‌ ವ್ಯಕ್ತಿಯ ಪ್ರಾಥಮಿಕ ಸಂಪರ್ಕದ ವ್ಯಕ್ತಿಯನ್ನು ಹುಡುಕಾಟ ನಡೆಸಲು ಜಿಲ್ಲಾಡಳಿತವೇ ಪ್ರಕಟಣೆಯನ್ನು ನೀಡಿ, ಯಾರಿಗಾದ​ರೂ ಆ ವ್ಯಕ್ತಿಯ ಮಾಹಿತಿ ಇದ್ದರೆ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ಕೋರಿದೆ| ಅಷ್ಟರ ಮಟ್ಟಿಗೆ ಪ್ರಾಥಮಿಕ ಸಂಪರ್ಕದ ವ್ಯಕ್ತಿ ತಲೆನೋವಾಗಿದ್ದಾನೆ|


ಕೊಪ್ಪಳ(ಮೇ.24): ಪಿ. 1173 ವ್ಯಕ್ತಿಯ ಪ್ರಯಾಣದ ಇತಿಹಾಸ ಮತ್ತು ಪ್ರಾಥಮಿಕ ಸಂಪರ್ಕದವರನ್ನು ಹುಡುಕುವುದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗುತ್ತಿದೆ. ಇದಕ್ಕಾಗಿ ಭಾರಿ ಹರಸಾಹಸ ಮಾಡುತ್ತಿರುವ ಜಿಲ್ಲಾಡಳಿತ ಈಗ ಸಾರ್ವಜನಿಕವಾಗಿ ಬಹಿರಂಗ ಪ್ರಕಟಣೆಯನ್ನು ನೀಡಿದೆ.

ಪಾಸಿಟಿವ್‌ ವ್ಯಕ್ತಿಯ ಪ್ರಾಥಮಿಕ ಸಂಪರ್ಕದ ವ್ಯಕ್ತಿಯನ್ನು ಹುಡುಕಾಟ ನಡೆಸಲು ಜಿಲ್ಲಾಡಳಿತವೇ ಪ್ರಕಟಣೆಯನ್ನು ನೀಡಿ, ಯಾರಿಗಾದ​ರೂ ಆ ವ್ಯಕ್ತಿಯ ಮಾಹಿತಿ ಇದ್ದರೆ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ಕೋರಿದೆ. ಅಷ್ಟರ ಮಟ್ಟಿಗೆ ಪ್ರಾಥಮಿಕ ಸಂಪರ್ಕದ ವ್ಯಕ್ತಿ ತಲೆನೋವಾಗಿದ್ದಾನೆ.

Latest Videos

undefined

ಲಾಕ್‌ಡೌನ್‌: ಹಸಿದರ ಹೊಟ್ಟೆ ತುಂಬಿಸಿದ ಮುನಿರಾಬಾದ್‌ ಪೊಲೀಸ್‌ ಠಾಣೆ, ನಿತ್ಯ ದಾಸೋಹ

ಆಗಿದ್ದೇನು?

1173 ಪಾಸಿಟಿವ್‌ ವ್ಯಕ್ತಿ ಪ್ರಯಾಣ ಬೆಳಸಿದ ಬಸ್ಸಿನಲ್ಲಿ 26 ಪ್ರಯಾಣಿಕರು ಸಂಚಾರ ಮಾಡಿದ್ದು, 25 ಜನರ ಮಾಹಿತಿ ಸಿಕ್ಕಿದೆ. ಇದರಲ್ಲಿ ಓರ್ವನ ಮಾಹಿತಿ ಲಭ್ಯವಾಗುತ್ತಲೇ ಇಲ್ಲ. ಈತನ ಹೆಸರು ಶೇಖರಪ್ಪ ಎಂದಿದ್ದು, ಸುಮಾರು 58 ವರ್ಷ ಇರಬಹುದು ಎಂದು ಆತನೇ ಪ್ರಯಾಣದ ವೇಳೆಯಲ್ಲಿ ನೀಡಿದ ದಾಖಲೆಗಳು ಹೇಳುತ್ತವೆ. ಆದರೀಗ ಪತ್ತೆಯಾಗುತ್ತಲೇ ಇಲ್ಲ.

ಈಗಾಗಲೇ ಪಾಸಿಟಿವ್‌ ವ್ಯಕ್ತಿಗಳೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ ಅಷ್ಟುವ್ಯಕ್ತಿಗಳ ಸ್ವಾಬ್‌ ಮಾದರಿಯ ವರದಿ ಬಂದಿದ್ದು, ನೆಗಟಿವ್‌ ಬಂದಿದೆ. ಆದರೆ, ಇಂಥ ವ್ಯಕ್ತಿ ತಪ್ಪಿಸಿಕೊಂಡಿರುವುದರಿಂದ ಜಿಲ್ಲಾಡಳಿತಕ್ಕೆ ಇನ್ನೂ ಟೆನ್ಶನ್‌ ತಪ್ಪಿಲ್ಲ.
ಭಿಕ್ಷುಕರ ಟೆನ್ಶನ್‌ನಿಂದ ಜಿಲ್ಲಾಡಳಿತ ಪಾರಾದರೂ ಪಾಸಿಟಿವ್‌ ವ್ಯಕ್ತಿಯೊಂದಿಗೆ ಸಹ ಪ್ರಯಾಣ ಮಾಡಿದ ವ್ಯಕ್ತಿಯ ಪತ್ತೆಗಾಗಿ ಜಿಲ್ಲಾಡಳಿತ ಶತಾಯ ಶ್ರಮಿಸುತ್ತಿದೆ. ಇವನು ತಪ್ಪಿಸಿಕೊಂಡಿರುವುದರಿಂದ ಎಲ್ಲೆಲ್ಲಿ ತಿರುಗಾಡುತ್ತಾನೋ ಎನ್ನುವುದೇ ಆತಂಕ. ಆತನನ್ನು ಕ್ವಾರಂಟೈನ್‌ ಮಾಡಿ ಸ್ವಾಬ್‌ ಪರೀಕ್ಷೆ ಕಳುಹಿಸಿದರೇ ಜಿಲ್ಲಾಡಳಿತಕ್ಕೆ ಅರ್ಧ ತಲೆನೋವು ತಪ್ಪುತ್ತದೆ.

ಬಹಿರಂಗ ಪ್ರಕಟಣೆ:

ಈಗ ಜಿಲ್ಲಾಡಳಿತ ಈ ಕುರಿತು ಬಹಿರಂಗ ಪ್ರಕಟಣೆಯನ್ನೇ ನೀಡಿದೆ. ಕೊಪ್ಪಳದಿಂದ ಕುಷ್ಟಗಿಗೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪಿ-1173 ಪ್ರಯಾಣಿಸಿದ ಬಸ್ಸಿನಲ್ಲಿಯೇ ಪ್ರಯಾಣಿಸಿದ ಶೇಖರಪ್ಪ ಎನ್ನುವ ವ್ಯಕ್ತಿ ಇದುವರೆಗೂ ಪತ್ತೆಯಾಗಿಲ್ಲ. ಮಾಹಿತಿ ಗೊತ್ತಾದವರು ಜಿಲ್ಲಾಡಳಿತಕ್ಕೆ ತಿಳಿಸಿ ಎಂದು ಕೋರಿ, ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಅವರು ಪ್ರಕಟಣೆ ನೀಡಿದ್ದಾರೆ. 8277498513, 9449843056 ಸಂಖ್ಯೆಗೆ ಮಾಹಿತಿ ನೀಡಬಹುದಾಗಿದೆ ಎಂದಿ​ದ್ದಾ​ರೆ.

ನೆಗಟಿವ್‌:

ಪ್ರಾಥಮಿಕ ಸಂಪರ್ಕ 183 ಹಾಗೂ ಸೆಕಂಡರಿ ಸಂಪರ್ಕದ 130 ವರ​ದಿ ನೆಗೆಟಿವ್‌ ಬಂದಿದ್ದು, ಕೊಪ್ಪಳ ಜಿಲ್ಲೆ ನಿರಾಳವಾಗಿದೆ. ಉಳಿದಂತೆ ಕಳುಹಿಸಿದ ಸ್ಯಾಂಪಲ್‌ಗಳ ಪೈಕಿ ಕೇವಲ 6 ಮಾತ್ರ ಬರಬೇಕಾಗಿದ್ದು, ಉಳಿದಿದ್ದು, ನೆಗೆಟಿವ್‌ ಇದೆ.
 

click me!