ಸಾವಿನಲ್ಲೂ ಸಾರ್ಥಕತೆ ಮೆರೆದ ನೊಂದ ಕುಟುಂಬ; ಗಂಡನ ಸಾವಿನ ನೋವಲ್ಲೂ ಅಂಗಾಂಗ ದಾನಕ್ಕೆ ಮುಂದಾದ ಪತ್ನಿ

Published : Feb 05, 2026, 02:48 PM IST
Manjunath Koppa

ಸಾರಾಂಶ

ಕೊಪ್ಪ ತಾಲೂಕಿನ ಪ್ರಶುಮನಿ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಪ್ರಕ್ರಿಯೆ ನಡೆದಿದ್ದು, ಇಂದು ಮಧ್ಯಾಹ್ನ ಮುಂಜುನಾಥ್ ಅವರ ಹೃದಯ, ಕಿಡ್ನಿ, ಲಿವರ್ ಸೇರಿ ಅಂಗಾಂಗ ದಾನ ಮಾಡುವ ಕಾರ್ಯ ನಡೆದಿದೆ. ಈ ಬಡ ಕುಟುಂಬಕ್ಕೆ ಸಂಘ ಸಂಸ್ಥೆಗಳ ಸಹಾಯದ ಅಗತ್ಯವಿದೆ ಎನ್ನಲಾಗಿದೆ. 

ಸಾವಿನಲ್ಲೂ ಸಾರ್ಥಕತೆ

ಸಾವಿನಲ್ಲೂ ಸಾರ್ಥಕತೆ ಮೆರೆದ ನೊಂದ ಕುಟುಂಬದ ಕರುಳು ಹಿಂಡುವ ಸುದ್ದಿ ಇದು. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಮಂಜುನಾಥ್ (35) (Manjunath) ಅವರು ಸಾವನ್ನಪ್ಪಿರುವ ದುರ್ದೈವಿ. ಆಟೋ ಅಪಘಾತದಲ್ಲಿ ಮಂಜುನಾಥ್ ಅವರ ಮೆದುಳು ನಿಷ್ಕ್ರಿಯ ಗೊಂಡಿತ್ತು. ಕೊಪ್ಪ, ಮಣಿಪಾಲ್ ನಲ್ಲಿ ಚಿಕಿತ್ಸೆ ಬಳಿಕವೂ ಮಂಜುನಾಥ್ ಸಾವು ಕಂಡರು. ಇಂದು ಮಧ್ಯಾಹ್ನ ಮುಂಜುನಾಥ್ ಅವರ ಹೃದಯ, ಕಿಡ್ನಿ, ಲಿವರ್ ಸೇರಿ ಅಂಗಾಂಗ ದಾನಕ್ಕೆ ಅವರ ಪತ್ನಿ ಮುಂದಾಗಿದ್ದಾರೆ.

ಈ ಮೊದಲು ಮಣಿಪಾಲ್ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಮಾಡಿ ಫೀಸ್ ಫ್ರೀ ಮಾಡಿಕೊಡ್ತೀವಿ ಎಂದಿದ್ರು. ಆದರೆ, ಪತಿ ತೀರಿಕೊಂಡ ದುಃಖದಲ್ಲಿದ್ದ ಪತ್ನಿಗೆ ಅದಕ್ಕೆ ಮನಸ್ಸು ಒಪ್ಪಿರಲಿಲ್ಲ. ಆಗ ಹಣ ನೀಡಿ ಪತಿಯ ಶವವನ್ನು ಪಡೆದುಕೊಂಡು ಬಂದಿದ್ದರು. ಆದರೆ, ಆ ಬಳಿಕ ಮನಸ್ಸು ಕರಗಿದ ಮಂಜುನಾಥ್ ಪತ್ನಿ ಅಪೂರ್ವ ಶೆಟ್ಟಿಯವರು ಗಂಡನ ಸಾವಿನ ನೋವಿನಲ್ಲೇ ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ.

ಕೊಪ್ಪ ತಾಲೂಕಿನ ಪ್ರಶುಮನಿ ಆಸ್ಪತ್ರೆ

ಕೊಪ್ಪ ತಾಲೂಕಿನ ಪ್ರಶುಮನಿ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಪ್ರಕ್ರಿಯೆ ನಡೆದಿದೆ ಎನ್ನಲಾಗಿದೆ. ಸರ್ಕಾರದ ಮೂಲಕ ಅಂಗಾಂಗ ದಾನಕ್ಕೆ ಮಂಜುನಾಥ್ ಅವರ ಪತ್ನಿ ಅಪೂರ್ವ ಮುಂದಾಗಿದ್ದು, ಪತಿ ಮತ್ತೊಬ್ಬರಲ್ಲಿ ಜೀವಂತವಾಗಿರಲಿ ಎಂದು ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. 4 ವರ್ಷ ಹಾಗೂ 1 ವರ್ಷದ 2 ಗಂಡು ಮಕ್ಕಳಿರೋ ಈ ಕುಟುಂಬಕ್ಕೆ ಇದ್ದ ಏಕೈಕ ಆಸರೆ ಮಂಜುನಾಥ್ ಅವರು ಇನ್ನಿಲ್ಲವಾಗಿದ್ದಾರೆ. ಹೀಗಾಗಿ, ಈ ಬಡ ಕುಟುಂಬ ಮಕ್ಕಳ ವಿದ್ಯಾಬ್ಯಾಸದ ಬಗ್ಗೆ ಸಂಘ ಸಂಸ್ಥೆಗಳ ಸಹಾಯ ಬಯಸಿದೆ ಎಂಬ ಮಾಹಿತಿ ದೊರಕಿದೆ.

ಕೊಪ್ಪ ತಾಲೂಕಿನ ಪ್ರಶುಮನಿ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಪ್ರಕ್ರಿಯೆ ನಡೆದಿದ್ದು, ಇಂದು ಮಧ್ಯಾಹ್ನ ಮುಂಜುನಾಥ್ ಅವರ ಹೃದಯ, ಕಿಡ್ನಿ, ಲಿವರ್ ಸೇರಿ ಅಂಗಾಂಗ ದಾನ ಮಾಡುವ ಕಾರ್ಯ ನಡೆದಿದೆ. ನೊಂದ ಈ ಕುಟುಂಬದ ಕರುಳು ಹಿಂಡುವ ಈ ಸುದ್ದಿ ಇದೀಗ ಇಡೀ ಜಿಲ್ಲೆ ಸೇರಿದಂತೆ ಎಲ್ಲರ ನೋವಿಗೆ ಕಾರಣವಾಗಿದೆ.

PREV
Read more Articles on
click me!

Recommended Stories

Photos: ಕಟ್ಟಿದ ಒಂದು ತಿಂಗಳಿಗೆ ಮನೆ ಹಾಳು; ಮತ್ತೆ ರಾಯಲ್ ಮನೆ ಕಟ್ಟಿದ ಮಂಗಳೂರಿನ‌ Madhyama Kutumba
ಮಗಳು ತಂದ ಕೋಟ್ಯಾಧಿಪತಿ ಸೌಭಾಗ್ಯ; ಹೆಣ್ಣುಮಗು ಹುಟ್ಟಿದ ತಿಂಗಳಿಗೆ ಅಪ್ಪನಿಗೆ ₹49 ಕೋಟಿ ಲಾಟರಿ!