Dharmasthala Case: ಸತ್ಯ ಹೊರಕ್ಕೆ ಬಂದ್ರೆ ಆತ... ಧರ್ಮಸ್ಥಳದ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯವೇನು?

Published : Aug 12, 2025, 09:12 PM IST
Kodishree about Dharmasthala

ಸಾರಾಂಶ

ಧರ್ಮಸ್ಥಳದಲ್ಲಿ ನಡೆಯುತ್ತಿರುವ ವಿವಾದದ ಬಗ್ಗೆ ಕೋಡಿಮಠದ ಸ್ವಾಮೀಜಿ ಹೇಳಿದ್ದೇನು? ಇವರು ಹೇಳಿರುವ ಹಿಂದಿನ ನಿಗೂಢ ಅರ್ಥವೇನು? ಇಲ್ಲಿದೆ ಡಿಟೇಲ್ಸ್​... 

ಧರ್ಮದ ಕ್ಷೇತ್ರ ಎಂದೇ ಹೆಸರುವಾಸಿಯಾಗಿರುವ ಧರ್ಮಸ್ಥಳ ಈಗ ವಿವಾದದ ಸ್ಥಳವಾಗಿ ಪರಿಣಮಿಸಿದೆ. ಧರ್ಮಸ್ಥಳದ ನೇತ್ರಾವತಿ ನದಿ ತೀರದಲ್ಲಿ ಶವಗಳಿಗಾಗಿ ಕಳೆದ ಕೆಲವು ದಿನಗಳಿಂದ ಶೋಧ ಕಾರ್ಯ ಆರಂಭವಾಗಿದ್ದು, ಇಂದು ಕೂಡ ಅದು ಮುಂದುವರೆದಿದೆ. ಇದೀಗ ಡ್ರೋನ್ ಮೌಂಟೆಡ್ GPR ತಂತ್ರಜ್ಞಾನ ಬಳಸಿ ತನಿಖಾ ತಂಡ ವಿಸ್ತೃತ ಪ್ರದೇಶದಲ್ಲಿ ಶೋಧ ನಡೆಸುತ್ತಿದೆ. ಆದರೆ, ಅನಾಮಿಕ ತೋರಿಸಿದ 13ನೇ ಪಾಯಿಂಟ್ ವ್ಯಾಪ್ತಿಯನ್ನು 3 ಪಟ್ಟು ವಿಸ್ತರಣೆ ಮಾಡಿಕೊಂಡು, ಶೋಧಿಸಲಾಗುತ್ತಿದೆ. ಧರ್ಮಸ್ಥಳ ಸ್ನಾನಘಟ್ಟ ನೇತ್ರಾವತಿ ನದಿ ತೀರದಲ್ಲಿ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಕಳೇಬರ ಶೋಧ ಕಾರ್ಯವನ್ನು ತೀವ್ರಗೊಳಿಸಿದೆ. ಈ ಹಿಂದೆ ಅನಾಮಿಕ ತೋರಿಸಿದ್ದ ಜಾಗಕ್ಕೆ ಅಪರಾಧ ಕೃತ್ಯ ನಡೆದ ಸ್ಥಳವೆಂದು ಸಾರ್ವಜನಕ ನಿಷೇಧಿತ ಪ್ರದೇಶವಾಗಿ ಎಸ್‌ಐಟಿ ಗುರುತು ಮಾಡಿತ್ತು. ಆದರೆ, ಇದೀಗ ಡ್ರೋನ್ ಮೌಂಟೆಡ್ ಜಿಪಿಆರ್ ಯಂತ್ರದಂದ ಶೋಧ ಕಾರ್ಯವನ್ನು ಆರಂಭಿಸಿುವ ಹಿನ್ನೆಲೆಯಲ್ಲಿ ಅನಾಮಿಕನಿದ ಗುರುತಿಸಲಾಗಿದ್ದ ಪ್ರದೇಶದ ವ್ಯಾಪ್ತಿಯನ್ನು 3 ಪಟ್ಟು ಹೆಚ್ಚಿಸಿದೆ. ಈಗಾಗಲೇ ಅಲ್ಲಿ ಬೆಳೆದಿದ್ದ ಎತ್ತರದ ಕಳೆ ಗಿಡಗಳು, ಗಿಡ ಗಂಟಿಗಳನ್ನು ಕಾರ್ಮಿಕರಿದ ಕತ್ತರಿಸಲಾಗಿದೆ. ಇದೀಗ ಡ್ರೋನ್ ಮೌಂಟೆಡ್ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (Drone GPR) ತಂತ್ರಜ್ಞಾನವನ್ನು ಬಳಸಿ ಶೋಧ ನಡೆಸಲಾಗುತ್ತಿದೆ.

ಇದರ ನಡುವೆಯೇ, ಈ ಘಟನೆಗೆ ಸಂಬಂಧಿಸಿದಂತೆ ಪರ-ವಿರೋಧಗಳ ನಿಲುವು ವ್ಯಕ್ತವಾಗುತ್ತಲೇ ಇದೆ. ಆದರೆ, ಇದೀಗ ಕೋಡಿಮಠದ ಶ್ರೀಗಳು ಸ್ಫೋಟಕ ಭವಿಷ್ಯವನ್ನು ನುಡಿದಿದ್ದಾರೆ. 'ವಿಚಾರಗಳಲ್ಲಿ ಹಲವು ವಿಧಗಳು ಇವೆ. ಕ್ರಮಬದ್ಧವಾಗಿ ಹೇಳಬೇಕು ಎಂದರೆ, ಸಮಾಚಾರ, ವಿಚಾರ, ಸವಿಚಾರ ಇದಾದ ಬಳಿಕ ಅಪಪ್ರಚಾರ. ಆದರೆ ಇಲ್ಲಿ ವಿಷಾದದ ಸಂಗತಿ ಏನೆಂದರೆ ಅಪಪ್ರಚಾರವೇ ಮೊದಲು ಆಗಿದೆ. ಆದ್ದರಿಂದ ಸತ್ಯ ಹೊರಕ್ಕೆ ಬರಬೇಕಿದೆ. ಒಂದು ವೇಳೆ ಸತ್ಯ ಹೊರಕ್ಕೆ ಬಂದರೆ ಅವನು ಸತ್ತೇ ಹೋಗುತ್ತಾನೆ ಎಂದು ನುಡಿದಿದ್ದಾರೆ. ಅಳುಕು ಹೃದಯದವನಿಗೆ ಅಪಪ್ರಚಾರವೇ ಆಯುಧ. ಸತ್ಯ ಹೊರ ಬಂದರೆ ಸಾಯುತ್ತಾನೆ. ಆದ್ದರಿಂದ ಸತ್ಯ ಬರುವವರೆಗೆ ಕಾಯ್ದು ನೋಡಬೇಕು' ಎಂದು ಕೋಡಿಶ್ರೀ ಹೇಳಿದ್ದಾರೆ.

ಹಾಗಿದ್ದರೆ ಇಲ್ಲಿ ಅಪಪ್ರಚಾರ ಮಾಡಲಾಗುತ್ತಿದೆಯೇ ಎನ್ನುವ ಪ್ರಶ್ನೆಗೆ ಕೋಡಿಶ್ರೀ, ಅದು ಆಮೇಲಿನ ಮಾತು. ಆದರೆ, ಒಳ್ಳೊಳ್ಳೆ ಗುಡಿಗಳ ದೇವರ ಪೂಜೆ ನಿಲ್ಲುತ್ತಾ ಬರುತ್ತಾವೆ ನೋಡಿ. ವಿಭೂತಿ ಇಟ್ಟ ಹಣೆ ಕೆತ್ತಿಸಿಯಾರು, ನಾಮ ಅಳಿಸಿಯಾರು ಎಂದು ನುಡಿದಿದ್ದಾರೆ. ಈಗ ಅಲ್ಲಿ ನಡೆಯುತ್ತಿರುವ ವಿದ್ಯಮಾನವನ್ನು ಬಹುಶಃ ಮಂಜುನಾಥಸ್ವಾಮಿಯೇ ಮಾಡಿಸುತ್ತಿರಬೇಕು. ಈಗ ನಡೆಯುತ್ತಿರುವುದೆಲ್ಲವೂ ಸತ್ಯವೋ ಸುಳ್ಳೋ ಎಂದು ಇಂದಲ್ಲಾ ನಾಳೆ ಹೊರಕ್ಕೆ ಬಂದೇ ಬರುತ್ತದೆ. ರಾಜಾಜ್ಞೆ ಆಗಿಬಿಟ್ಟಿದೆ, ಸತ್ಯ ಹೊರಬರಲು ಸಮಯಾವಕಾಶ ಬೇಕಿದೆ ಎಂದಿದ್ದಾರೆ.

ಅಪಪ್ರಚಾರದ ಬಗ್ಗೆ ಮಾತನಾಡಿರುವ ಕೋಡಿಶ್ರೀಗಳು, ಸೀತೆಗೆ ರಾಮಾಯಣದಲ್ಲಿ ಆದಂತೆ, ಇಲ್ಲಿ ಅಪಪ್ರಚಾರ ಮೊದಲು ಬಂದಿದೆ, ಇದೇ ಸದ್ಯ ಪ್ರಬಲವಾಗಿದೆ. ಸತ್ಯ ಹೊರಬರುತ್ತದೆ, ಬೆಳಕು ಇದ್ದಲ್ಲಿ ಕತ್ತಲು ಇರುತ್ತದೆ ಎಂದಿದ್ದಾರೆ. ಊರಲ್ಲಿ ಇರುವ ಸಣ್ಣ ದೇವಸ್ಥಾನಕ್ಕೆ ಯಾರೂ ಹೋಗುವುದಿಲ್ಲ, ಪೂಜಾರಿಗೆ ಸಂಬಳ ಕೊಡಲೇ ದುಡ್ಡು ಇರುವುದಿಲ್ಲ. ದುಡ್ಡು ಬೆಳೆಯುತ್ತಿದ್ದಂತೆಯೇ, ವಿಧಿಯು ಕಾಡಿಕೊಂಡು ಬರುತ್ತದೆ. ಅಭಿಮನ್ಯುವಿನ ಬಿಲ್ಲಿನ ದಾರವನ್ನು ಕರ್ಣ ಕಟ್ ಮಾಡುತ್ತಾನೆ ಎಂದು ಕುತೂಹಲವಾಗಿ ನುಡಿದಿದ್ದಾರೆ ಅವರು.

PREV
Read more Articles on
click me!

Recommended Stories

Farmer wins battle: ರೈತನಿಗೆ ಪರಿಹಾರ ನೀಡದ ಶಿವಮೊಗ್ಗ ಡಿಸಿ ಕಚೇರಿ, ಕಾರು ಜಪ್ತಿಗೆ ಕೋರ್ಟ್ ಆದೇಶ!
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!