ಹುಡುಗಿ ಮೇಲೆ ಬಣ್ಣ ಹಾಕಿದ್ದಕ್ಕೆ ಕಿಡ್ನಾಪ್‌ ಮಾಡಿ ಥಳಿತ: ಹೋಳಿ ಆಚರಿಸಿದ್ದೇ ತಪ್ಪಾ.?

By Sathish Kumar KH  |  First Published Mar 22, 2023, 1:30 PM IST

ಇತ್ತೀಚೆಗೆ ನಡೆದ ಹೋಳಿ ಹಬ್ಬದಂದು ಹುಡುಗಿಯ ಮೇಲೆ ಬಣ್ಣ ಹಾಕಿದ ಯುವಕನನ್ನು ಕಿಡ್ನಾಪ್‌ ಮಾಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ದುರ್ಘಟನೆ ಕೋಲಾರದಲ್ಲಿ ನಡೆದಿದೆ. 


ಕೋಲಾರ (ಮಾ.22): ರಾಜ್ಯದಲ್ಲಿ ಇತ್ತೀಚೆಗೆ ನಡೆದ ಹೋಳಿ ಹಬ್ಬದಂದು ಹುಡುಗಿಯ ಮೇಲೆ ಬಣ್ಣವನ್ನು ಹಾಕಿದನೆಂದು ಯುವಕನನ್ನು ಕಿಡ್ನಾಪ್‌ ಮಾಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿ ಬಿಟ್ಟು ಕಳುಹಿಸಿರುವ ದುರ್ಘಟನೆ ಕೋಲಾರದಲ್ಲಿ ನಡೆದಿದೆ. 

ಹಬ್ಬದಲ್ಲಿ ಹೋಳಿ ಆಡುವಾಗ ಪರಿಚಯಸ್ಥರ ಮೇಲೆ ಬಣ್ಣವನ್ನು ಹಾಕುವುದು ಒಂದು ವಾಡಿಕೆಯಿದೆ. ಇನ್ನು ಪರಿಚಯ ಇದ್ದರಿದ್ದರೆ ಅವರ ಒಪ್ಪಿಗೆಯನ್ನು ಪಡೆದು ಬಣ್ಣವನ್ನು ಹಾಕಬೇಕು. ಆದರೆ, ಕೋಲಾರ ತಾಲೂಕಿನ ಬೆಳಮಾರನಹಳ್ಳಿ ಗ್ರಾಮದ ಕಾಲೇಜು ಓದುತ್ತಿದ್ದ ಯುವಕನೊಬ್ಬ, ಕಾಲೇಜು ಮುಗಿಸಿ ಬಸ್‌ನಲ್ಲಿ ಬರುವಾಗ ತಮ್ಮದೇ ಗ್ರಾಮದ ಯುವತಿಯ ಮೇಲೆ ಬಣ್ಣವನ್ನು ಹಾಕಿದ್ದಾನೆ. ಇದರಿಂದ ತೀವರ ಕೋಪಗೊಂಡ ಹುಡುಗಿಯ ಸಂಬಂಧಿಕರು ಬಣ್ಣ ಹಾಕಿದ ಯುವಕನ್ನು ಕರೆಸಿ ಶೆಡ್‌ನಲ್ಲಿ, ಗ್ರಾಮದ ಹೊರಗಿರುವ ಕೂಡಿಹಾಕಿ ಮನಸ್ಸೋ ಇಚ್ಛೆ ಥಳಿಸಿದ್ದಾರೆ. 

Latest Videos

undefined

ನಟ ಚೇತನ್ 14 ದಿನ ನ್ಯಾಯಾಂಗ ಬಂಧನ: ಹಿಂದುತ್ವ ವಿರೋಧಿ ಪೋಸ್ಟ್‌ಗೆ ಜೈಲೂಟ ಫಿಕ್ಸ್‌

ಕಾನೂನು ಪದವಿ ವಿದ್ಯಾರ್ಥಿಗೆ ಹಲ್ಲೆ: ಇನ್ನು ತೀವ್ರ ಹಲ್ಲೆಗೊಳಗಾದ ಯುವಕನನ್ನು ಬಿ.ಸಿ. ಮಧು ಎಂದು ಗುರುತಿಸಲಾಗಿದೆ. ಈತ ಕಾನೂನು ಪದವಿ ಓದುತ್ತಿದ್ದನು. ಈತ ಯುವತಿಗೆ ಹೋಳಿ ಬಣ್ಣ ಹಾಕಿದಕ್ಕೆ, ಆತನನ್ನು ಕಿಡ್ನಾಪ್ ಮಾಡಿ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡುವ ಮುನ್ನ ಎಲ್ಲ ಬಟ್ಟೆಯನ್ನು ಬಿಚ್ಚಿ ಬೆತ್ತಲೆಗೊಳಿಸಿ ಕಟ್ಟಿಗೆ ಮತ್ತು ಹಗ್ಗದಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ದೇಹದ ಬಹುತೇಕ ಭಾಗಗಳಲ್ಲಿ ತೀವ್ರ ಪ್ರಮಾಣದ ಗಾಯಗಳಾಗಿವೆ. ಇನ್ನು ಬಣ್ಣ ಹಾಕಿದ್ದಕ್ಕೆ ಕ್ಷಮೆ ಕೇಳಿದರೂ ಬಿಡದೇ ಥಳಿಸಿದ್ದು, ಯುವಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಗುಂಪು ಕಟ್ಟಿಕೊಂಡು ಹಲ್ಲೆ ಮಾಡಿದ ಯುವಕರು: ಯುವತಿಗೆ ಬಣ್ಣ ಹಾಕಿರುವುದಕ್ಕೆ ಬೆಳಮಾರನಹಳ್ಳಿ ಗ್ರಾಮದ ಮತ್ತೊಬ್ಬ ಯುವಕ ಡಿ.ಎನ್. ಮಧು ಹಾಗೂ ಆತನ ಸ್ನೇಹಿತರು ಹಲ್ಲೆ ಮಾಡಿರುವುದು ತಿಳಿದುಬಂದಿದೆ. ಇನ್ನು ನೀನು ಯಾಕೆ ಹುಡುಗಿಯ ಮೇಲೆ ಬಣ್ಣವನ್ನು ಹಾಕಿದ್ದೀಯ ಎಂದು ಗಲಾಟೆಯನ್ನು ಮಾಡಿದ್ದಾರೆ. ಈ ವೇಳೆ ಗುಂಪು ಕಟ್ಟಿಕೊಂಡು ಬಣ್ಣ ಹಾಕಿದ ಯುವಕನಿಗೆ ಪ್ರಶ್ನೆ ಮಾಡಿದ್ದು, ಹಲ್ಲೆಗೆ ಮುಂದಾಗಿದ್ದಾರೆ. ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ್ದು, ತಿರುಗಿ ಹಲ್ಲೆ ಮಾಡಲು ಮುಂದಾಗಿದ್ದಾನೆ. ಆದರೆ, ಒಬ್ಬನೇ ಇದ್ದುದರಿಂದ ವಿಫಲವಾಗಿದ್ದು, ನಾಲ್ಕೈದು ಜನರ ಕೈಯಲ್ಲಿ ಸಿಕ್ಕಿಕೊಂಡಿದ್ದಾನೆ. ನಂತರ ಶೆಡ್‌ನಲ್ಲಿ 2 ದಿನ ಗ್ರಾಮದ ಹೊರಭಾಗದ ಶೆಡ್‌ನಲ್ಲಿ ಕೂಡಿ ಹಾಕಿ ಥಳಿಸಿದ್ದಾರೆ ಎಂದು ತಿಳಿದುಬಂದಿದೆ.

ಕೋಲಾರದಲ್ಲಿ ಸ್ಪರ್ಧಿಸದಂತೆ ಹೈಕಮಾಂಡ್‌ ಹೇಳಿಲ್ಲ: ಸಿದ್ದರಾಮಯ್ಯ

ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಕೆ: ಇನ್ನು ಯುವಕನಿಗೆ ಥಳಿಸಿದ ಘಟನೆ ಮಾ.17ನೇ ತಾರೀಖಿನಂದು ನಡೆದಿದ್ದು, ಹಲ್ಲೆಗೊಳಗಾದ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿ ಬಂದ ನಂತರ ಆರೋಪಿಗಳ ಮೇಲೆ ದೂರು ಕೊಟ್ಟಿರುವ ಹಿನ್ನೆಲೆಯಲ್ಲಿ ಘಟನೆಯು ಇಂದು ಬೆಳಕಿಗೆ ಬಂದಿದೆ. ಇನ್ನು ಹಲ್ಲೆ ಮಾಡಿದ್ದ ವೇಳೆ ದೇಹದ ಮೇಲೆ ಆಗಿದ್ದ ಎಲ್ಲ ಗಾಯಗಳನ್ನು ವೀಡಿಯೋ ಮಾಡಿ ಸಂಗ್ರಹಿಸಿ ಇಟ್ಟುಕೊಳ್ಳಲಾಗಿದೆ. ಈ ಸಾಕ್ಷಿಗಳನ್ನು ಕೊಟ್ಟು ವೇಮಗಲ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಜೊತೆಗೆ, ಗಾಯಾಳು ಮಧು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

click me!