
ಬೆಂಗಳೂರು(ಆ.29): ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿವರೆಗಿನ 7.5 ಕಿಮೀ ಉದ್ದದ ‘ನಮ್ಮ ಮೆಟ್ರೋ’ ರೈಲು ಸೇವೆಗೆ ಭಾನುವಾರ ವಿಧ್ಯುಕ್ತ ಚಾಲನೆ ದೊರೆಯಲಿದೆ. ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ನಗರ ವ್ಯವಹಾರಗಳ ಸಚಿವ ಹರ್‌ದೀಪ್ ಸಿಂಗ್ ಪುರಿ ಅವರು ನೂತನ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಇದರೊಂದಿಗೆ ನಗರದ ಪೂರ್ವ-ಪಶ್ಚಿಮ ಭಾಗಕ್ಕೆ ಸಂಚಾರ ಮತ್ತಷ್ಟುಸುಗಮವಾಗಲಿದ್ದು, ಕೇಂದ್ರ ಭಾಗದಲ್ಲಿ ವಾಹನದಟ್ಟಣೆ ಕಡಿಮೆ ಆಗುವ ನಿರೀಕ್ಷೆ ಇದೆ.
"
* 7.53 ಕಿಮೀ: ಕೆಂಗೇರಿಯಿಂದ ನಾಯಂಡಹಳ್ಳಿ ಮೆಟ್ರೋ ವರೆಗಿನ ಮಾರ್ಗ ಇಂದು ಉದ್ಘಾಟನೆ
* 15 ನಿಮಿಷ: ಕೇಂಗೇರಿಯಿಂದ ನಾಯಂಡಹಳ್ಳಿಗೆ ಕೇವಲ 15 ನಿಮಿಷಗಳಲ್ಲಿ ತಲುಪಲು ಸಾಧ್ಯ
* 25 ಕಿಮೀ: ಇದರೊಂದಿಗೆ ಕೆಂಗೇರಿಯಿಂದ ಬೈಯಪ್ಪನಹಳ್ಳಿಯವರೆಗೆ ನೇರ ಮೆಟ್ರೋ ಸಂಪರ್ಕ
* 56 ರು.: ಕೆಂಗೇರಿಯಿಂದ ಬೈಯಪ್ಪನಹಳ್ಳಿಯ ವರೆಗೆ ನಮ್ಮ ಮೆಟ್ರೋದಲ್ಲಿ ಸಂಚರಿಸಲು ಶುಲ್ಕ
* 60 ನಿಮಿಷ: ಕೇವಲ 1 ಗಂಟೆಯಲ್ಲಿ ಕೆಂಗೇರಿಯಿಂದ ಬೈಯಪ್ಪನಹಳ್ಳಿಗೆ ಪ್ರಯಾಣಿಸಲು ಸಾಧ್ಯ