kavalesad point tragedy: ಮಹಾರಾಷ್ಟ್ರದ ಕವಲೇಸಾದ್‌ ಪಾಯಿಂಟ್‌ ವೀಕ್ಷಣೆಗೆ ಹೋದ ಬೆಳಗಾವಿಯ ವ್ಯಕ್ತಿ ಕಣ್ಮರೆ!

Published : Aug 05, 2026, 12:10 PM IST
kavalesad point tragedy Belagavi tourist missing wile sightseeing

ಸಾರಾಂಶ

ಮಹಾರಾಷ್ಟ್ರದ ಅಂಬೋಲಿ ಬಳಿಯ ಕವಲೇಸಾದ್ ಪಾಯಿಂಟ್ ವೀಕ್ಷಣೆಗೆ ತೆರಳಿದ್ದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಿವಾಸಿ ಅಯೂಬ್ ಸಯ್ಯದ್ ಎಂಬುವವರು ಕಣ್ಮರೆಯಾಗಿದ್ದಾರೆ. ರಭಸದ ಗಾಳಿಗೆ ಕಂದಕಕ್ಕೆ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ಪ್ರತಿಕೂಲ ಹವಾಮಾನದ ನಡುವೆಯೂ ಅಂಬೋಲಿ ಪೊಲೀಸರು ಶೋಧ ಕಾರ್ಯ ಮುಂದುವರಿದಿದೆ.

ಚಿಕ್ಕೋಡಿ (ಆ.5): ಮಹಾರಾಷ್ಟ್ರದಲ್ಲಿ ಭೀಕರ ಮಳೆಯಾಗುತ್ತಿದೆ. ಈ ನಡುವೆ ಸಿಂಧುದುರ್ಗ ಜಿಲ್ಲೆಯ ಅಂಬೋಲಿ ಬಳಿ ಇರುವ ಕವಲೇಸಾದ್ ಪಾಯಿಂಟ್, ಕವಲೇದುರ್ಗ ವೀಕ್ಷಣೆ ಹೋಗಿದ್ದ ಕರ್ನಾಟಕ ಮೂಲದ ವ್ಯಕ್ತಿ ಕಣ್ಮರೆಯಾದ ಘಟನೆ ನಡೆದಿದೆ.

ಗೆಳೆಯರ ಜೊತೆ ವೀಕ್ಷಣೆಗೆ ತೆರಳಿದ್ದ ಅಯೂಬ್ ಸಯ್ಯದ್

ಅಯೂಬ್ ಸಯ್ಯದ್(50) ಕಂದಕಕ್ಕೆ ಬಿದ್ದು ಕಣ್ಮರೆಯಾಗಿರುವ ವ್ಯಕ್ತಿ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ನಿವಾಸಿಯಾಗಿರುವ ಅಯೂಬ್, ಗೆಳೆಯರೊಂದಿಗೆ ಕವಲೇಸಾದ್ ಪಾಯಿಂಟ್ ವೀಕ್ಷಣೆಗೆ ತೆರಳಿದ್ದರು. ವೀಕ್ಷಣೆ ವೇಳೆ ರಭಸವಾದ ಗಾಳಿಗೆ ಕಂದಕಕ್ಕೆ ಬಿದ್ದಿರುವ ಶಂಕೆಯಿದೆ. ಸದ್ಯ ದುರಂತದ ಮಾಹಿತಿ ತಿಳಿಯುತ್ತಿದ್ದಂತೆ ಅಂಬೋಲಿ ಪೊಲೀಸರು

ಪೊಲೀಸರ ಕಾರ್ಯಾಚರಣೆಗೆ ಮಳೆ ಅಡ್ಡಿ

ಘಟನಾ ಸ್ಥಳಕ್ಕೆ ಹೋಗಿ ಕಾರ್ಯಾಚರಣೆ ನಡೆಸಿರುವ ಅಂಬೋಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ದಟ್ಟವಾದ ಮಂಜು, ಗಾಳಿ, ಈ ನಡುವೆ ಭಾರೀ ಮಳೆ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ನಿನ್ನೆ ಕಣ್ಮರೆಯಾಗಿರುವ ಅಯೂಬ್‌ಗಾಗಿ ಇಂದು ಸಹ ಪೊಲೀಸರು ಶೋಧ ಕಾರ್ಯ ಮುಂದುರಿಸಿದ್ದಾರೆ. ಘಟನೆ ಸಂಬಂಧ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

PREV
Read more Articles on
click me!

Recommended Stories

ಹೂಗುಚ್ಛ, ಶಾಲು, ಪೇಟಗಳಿಗೆ ಸಚಿವರಿಂದ ಬ್ರೇಕ್, ಸರಳತೆಯ ಹಾದಿ ಹಿಡಿದ ವಿಜಯಾನಂದ ಕಾಶಪ್ಪನವರ್
ಯಾದಗಿರಿ ಕೆಮಿಕಲ್ ಫ್ಯಾಕ್ಟರಿ ದುರಂತ: ಮೂವರು ಕಾರ್ಮಿಕರು ದುರ್ಮರಣ ! 'ಇನ್ನೊಂದು ಶಿಪ್ಟ್ ಮುಗಿಸಿ ಬರ್ತಿನಮ್ಮ... ಅಂದ ಮಗ ಬರಲೇ ಇಲ್ಲ.. ತಾಯಿ ಕಣ್ಣೀರು