ಕರ್ನಾಟಕ ರಾಜ್ಯೋತ್ಸವ ಪಕ್ಷಿ ಗಣತಿ 2026: ರಾಜ್ಯದಲ್ಲಿ ಮೊದಲ ಸಲ ಪಕ್ಷಿ ಗಣತಿ' ನೀವೂ ಪಾಲ್ಗೊಳ್ಳಿ! ಇಲ್ಲಿದೆ ಸಂಪೂರ್ಣ ವಿವರ

Kannadaprabha News   | Kannada Prabha
Published : Oct 29, 2026, 05:29 AM IST
Karnataka Rajyotsava Bird Census 2026

ಸಾರಾಂಶ

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಇದೇ ಮೊದಲ ಬಾರಿಗೆ ಅಕ್ಟೋಬರ್ 30 ರಿಂದ ನವೆಂಬರ್ 2 ರವರೆಗೆ 'ಕರ್ನಾಟಕ ರಾಜ್ಯೋತ್ಸವ ಪಕ್ಷಿ ಗಣತಿ 2026' ಅಭಿಯಾನವನ್ನು ಆಯೋಜಿಸಲಾಗಿದೆ. ಈ ಅಭಿಯಾನದಲ್ಲಿ ಯಾರು ಪಾಲ್ಗೊಳ್ಳಬಹುದು. ಪಕ್ಷಿಗಣತಿ ಹೇಗೆ ನಡೆಯುತ್ತದೆ ಎಂಬ ಸಂಪೂರ್ಣ ಮಾಹಿತಿ, ಲಿಂಕ್ ಇಲ್ಲಿದೆ.

Karnataka Rajyotsava Bird Census 2026: ಕನ್ನಡ ರಾಜ್ಯೋತ್ಸವ(Kannada Rajyotsav)ದ ಸಂಭ್ರಮಕ್ಕೆ ಪ್ರಕೃತಿಯ ಸೊಬಗನ್ನು ಬೆಸೆಯುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ‘ಕರ್ನಾಟಕ ರಾಜ್ಯೋತ್ಸವ ಪಕ್ಷಿ ಗಣತಿ 2026’ ಅಭಿಯಾನವನ್ನು ಅ.30ರಿಂದ ನ.2ರವರೆಗೆ ರಾಜ್ಯಾದ್ಯಂತ ಆಯೋಜಿಸಲಾಗಿದೆ.

ಕರ್ನಾಟಕ ಪಕ್ಷಿ ಮೇಲ್ವಿಚಾರಣಾ ಜಾಲ ಸೇರಿದಂತೆ ಪಕ್ಷಿವೀಕ್ಷಕ ಸಮುದಾಯದ ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪಕ್ಷಿ ಪ್ರೇಮಿಗಳು, ಪ್ರಕೃತಿ ಆಸಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಬಹುದು. ಪಕ್ಷಿಗಳ ಪ್ರಭೇದಗಳು, ಅವುಗಳ ವಾಸಸ್ಥಾನ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಅವುಗಳ ಇರುವಿಕೆಯ ಕುರಿತು ವೈಜ್ಞಾನಿಕ ದತ್ತಾಂಶ ಸಂಗ್ರಹಿಸಲು ಈ ಕಾರ್ಯಕ್ರಮ ನೆರವಾಗಲಿದೆ.

ಪಕ್ಷಿಗಣತಿಯಲ್ಲಿ ಯಾರು ಪಾಲ್ಗೊಳ್ಳಬಹುದು?

ಪಕ್ಷಿವೀಕ್ಷಣೆಯಲ್ಲಿ ಪರಿಣತಿ ಹೊಂದಿರಬೇಕೆಂಬ ಕಡ್ಡಾಯವಿಲ್ಲ. ಆರಂಭಿಕ ಪಕ್ಷಿವೀಕ್ಷಕರಿಂದ ಹಿಡಿದು ಅನುಭವಿ ಪಕ್ಷಿಪ್ರೇಮಿಗಳವರೆಗೆ ಕರ್ನಾಟಕದ ಯಾವುದೇ ಭಾಗದ ಸಾರ್ವಜನಿಕರು ಈ ಗಣತಿಯಲ್ಲಿ ಪಾಲ್ಗೊಳ್ಳಬಹುದು.

ಪಕ್ಷಿ ಗಣತಿ ಹೇಗೆ ನಡೆಯುತ್ತದೆ?

ಭಾಗವಹಿಸುವವರು ಕನಿಷ್ಠ 15 ನಿಮಿಷಗಳ ಕಾಲ ಪಕ್ಷಿಗಳನ್ನು ವೀಕ್ಷಿಸಿ, ದೃಷ್ಟಿ ಅಥವಾ ಧ್ವನಿಯ ಮೂಲಕ ಗುರುತಿಸಿದ ಪಕ್ಷಿಗಳ ಹೆಸರು ಮತ್ತು ಸಂಖ್ಯೆಯನ್ನು ದಾಖಲಿಸಬೇಕು. ಈ ಪಟ್ಟಿಯನ್ನು ಇ-ಬರ್ಡ್‌ ಮೊಬೈಲ್ ಆ್ಯಪ್ ಮೂಲಕ ಸಿದ್ಧಪಡಿಸಿ ಅಪ್‌ಲೋಡ್ ಮಾಡಬೇಕು. ಅ.30 ರಿಂದ ನ.2ರ ಅವಧಿಯಲ್ಲಿ ಯಾವುದೇ ಒಂದು ದಿನ ಅಥವಾ 4 ದಿನ ಪಕ್ಷಿವೀಕ್ಷಣೆ ನಡೆಸಲು ಅವಕಾಶವಿದೆ. ಬೆಳಗ್ಗೆ, ಸಂಜೆ ಹಾಗೂ ರಾತ್ರಿ ವೇಳೆಯಲ್ಲಿಯೂ ಪಕ್ಷಿಗಳನ್ನು ದಾಖಲಿಸಬಹುದು.

ನ.10ರೊಳಗೆ ಪಟ್ಟಿಗಳ ಅಪ್‌ಲೋಡ್ ಕಡ್ಡಾಯ

ಅ.30ರಿಂದ ನ. 2ರ ಅವಧಿಯಲ್ಲಿ ನಡೆಸಿದ ಪಕ್ಷಿವೀಕ್ಷಣೆಯ ಪಟ್ಟಿಗಳನ್ನು ನ.10ರೊಳಗೆ ಅಪ್‌ಲೋಡ್ ಮಾಡಬೇಕು. ಕರ್ನಾಟಕದ ಹೊರಗೆ ಪಕ್ಷಿವೀಕ್ಷಣೆ ನಡೆಸುವವರು ತಮ್ಮ ಪಟ್ಟಿಗಳನ್ನು ಇ-ಬರ್ಡ್‌ ಬಳಕೆದಾರ ಐಡಿ \B‘karnatakabirdcount’ \Bಜತೆ ಹಂಚಿಕೊಳ್ಳಬಹುದು.

ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿ ಹಾಗೂ ಮಾರ್ಗದರ್ಶನದ ವಿಡಿಯೋಗಳಿಗಾಗಿ https://birdcount. in/event/krbc/ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ವಿಘ್ನೇಶ ಭಟ್ ಅವರ ಮೊ.9035237091 ಅಥವಾ \Bkarnatakabirdcount@gmail.com ಮೂಲಕ ಸಂಪರ್ಕಿಸಬಹುದು ಪ್ರಕಟಣೆ ತಿಳಿಸಿದೆ.

PREV
click me!

Recommended Stories

ವಿಧಾನ ಪರಿಷತ್‌ ಚುನಾವಣಾ ಫಲಿತಾಂಶದ ಬೆನ್ನಲ್ಲೇ ವಿಜಯೇಂದ್ರ ಬೆನ್ನುತಟ್ಟಿ ಮೆಚ್ಚುಗೆ ಸೂಚಿಸಿದ ಸಿದ್ದು!
ಮೈಸೂರು ಅರಮನೆ ಬಗ್ಗೆ ನನ್ನ ಹೇಳಿಕೆಗೆ ನಾನು ಬದ್ಧ, ಕ್ಷಮೆ ಕೇಳಲ್ಲ: ಯತೀಂದ್ರ ಸಿದ್ದರಾಮಯ್ಯ