Breaking : ಅಂಕೋಲಾ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ; 9 ಜನರು ಸಾವಿನ ಶಂಕೆ

By Sathish Kumar KH  |  First Published Jul 16, 2024, 11:35 AM IST

ಉತ್ತರ ಕನ್ನಡದ ಜಿಲ್ಲೆಯಲ್ಲಿ ಸುರಿಯುತ್ತಿರುವ ರಣಭೀಕರ ಮಳೆಯಿಂದಾಗಿ ಅಂಕೋಲಾ‌ ಬಳಿ ರಾಷ್ಟ್ರೀಯ ಹೆದ್ದಾರಿ ಕುಸಿತವಾಗಿದ್ದು, ಒಂದು ಕಾರಿನಲ್ಲಿದ್ದ 5 ಮಂದಿ ಹಾಗೂ ಟ್ಯಾಂಕರ್‌ನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.


ಉತ್ತರ ಕನ್ನಡ (ಜು.16): ಉತ್ತರ ಕನ್ನಡದ ಜಿಲ್ಲೆಯಲ್ಲಿ ಸುರಿಯುತ್ತಿರುವ ರಣಭೀಕರ ಮಳೆಯಿಂದಾಗಿ ಅಂಕೋಲಾ‌ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ ಕುಸಿತವಾಗಿದೆ. ಇದರಿಂದ ಹೆದ್ದಾರಿಯಲ್ಲಿ ಹೋಗುತ್ತಿದ್ದ ಕಾರು ಮಣ್ಣಿನಡಿಗೆ ಸಿಲಕಿದ್ದು, ಒಂದೇ ಕುಟುಂಬದ ಐವರು ಸಾವ್ನಪ್ಪಿದ ಶಂಕೆಯಿದೆ. ಇನ್ನು ಇದೇ ಹೆದ್ದಾರಿಯಲ್ಲಿ ಸಾಗುತ್ತಿದ್ದ ಎಲ್‌ಪಿಜಿ ಗ್ಯಾಸ್ ಟ್ಯಾಂಕರ್ ಗುಡ್ಡ ಕುಸಿತದ ರಭಸಕ್ಕೆ ಪ್ರಪಾತಕ್ಕೆ ಬಿದ್ದು, ಪಕ್ಕದಲ್ಲಿ ಹರಿಯುತ್ತಿದ್ದ ನದಿಗೆ ಉರುಳಿ ಬಿದ್ದಿದೆ. ಇದರಲ್ಲಿದ್ದ ಡ್ರೈವರ್ ಮತ್ತು ಕ್ಲೀನರ್ ಕೂಡ ನಾಪತ್ತೆ ಆಗಿದ್ದಾರೆ. ಒಟ್ಟಾರೆ 9 ಮಂದಿ ಸಾವನ್ನಪ್ಪಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಇನ್ನು ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿತದಡಿ 5ಕ್ಕಿಂತ ಹೆಚ್ಚು ಜನರು ಮಣ್ಣಿನಡಿ ಸಿಲುಕಿರುವ ಶಂಕೆಯಿದೆ. ಕಾರಿನಲ್ಲಿ ಹೋಗುತ್ತಿದ್ದ ಒಂದೇ ಕುಟುಂಬದ ಲಕ್ಷ್ಮಣ ನಾಯ್ಕ (47), ಶಾಂತಿ ನಾಯ್ಕ (36), ರೋಶನ್ (11),  ಅವಾಂತಿಕಾ (6), ಜಗನ್ನಾಥ (55) ಮಣ್ಣಿನಡಿ ಸಿಲುಕಿ ಸಾವಿಗೀಡಾಗಿರುವ ಶಂಕೆಯಿದೆ. ಮಣ್ಣು ತೆರವು ಕಾರ್ಯಾಚರಣೆ ಇನ್ನುಮೇಲೆ ಪ್ರಾರಂಭವಾಗಬೇಕಿದೆ. ಇನ್ನು ಈ ಗುಡ್ಡ ಕುಸಿತದಿಂದ ಒಟ್ಟು 9 ಜನ ಸಾವನ್ನಪ್ಪಿರುವ ಶಂಕೆಯಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಕಾರಿನಲ್ಲಿದ್ದ 5 ಜನರು ಸೇರಿ, ಗುಡ್ಡ ಕುಸಿತಕ್ಕೆ ಸಿಲುಕಿ ಪಕ್ಕದಲ್ಲಿ ಉಕ್ಕಿ ಹರಿಯುತ್ತಿದ್ದ ನದಿಗೆ ಎಲ್‌ಪಿಜಿ ಗ್ಯಾಸ್ ಟ್ಯಾಂಕರ್ ಬಿದ್ದಿದೆ. ಅದರಲ್ಲಿದ್ದ ಡ್ರೈವರ್, ಕ್ಲೀನರ್ ಹಾಗೂ ಇಬ್ಬರು ಇತರೆ ಪ್ರಯಾಣಿಕರು ನದಿಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.

Tap to resize

Latest Videos

undefined

ಬೆಂಗಳೂರು - ಹೊನ್ನಾವರ ಹೆದ್ದಾರಿಯಲ್ಲಿ ಗುಡ್ಡ ಕುಸಿತ; ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರ ಪರದಾಟ

ಅಂಕೋಲಾ ಬಳಿಯ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಟ್ಯಾಂಕರ್ ಚಾಲಕ ಹಾಗೂ ಕ್ಲೀನರ್ ಟೀ ಕುಡಿಯುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಗುಡ್ಡ ಕುಸಿತದ ರಭಸಕ್ಕೆ ಗ್ಯಾಸ್ ಟ್ಯಾಂಕರ್  ನದಿಗೆ ಬಿದ್ದಿದೆ.ಟ್ಯಾಂಕರ್ ಚಾಲಕ, ಕ್ಲೀನರ್ ಸೇರಿ ನಾಲ್ವರು ನಾಪತ್ತೆ ಆಗಿದ್ದಾರೆ. ಶಿರೂರು ಬಳಿ ಸಣ್ಣ ಕ್ಯಾಂಟೀನ್‌ನಲ್ಲಿ ಟೀ ಕುಡಿಯುತ್ತಿದ್ದ ವೇಳೆ ಘಟನೆ ಸಂಭವಿದಿದೆ. ಇನ್ನು ನಾಲ್ವರು ಮಣ್ಣಿನ ಅಡಿಯಲ್ಲಿ ಸಿಲುಕಿ‌ ಸಾವನ್ನಪ್ಪಿದ ಶಂಕೆಯಿದೆ. ಜಿಲ್ಲಾಡಳಿತದಿಂದ ಹೆದ್ದಾರಿ‌ ಮೇಲಿನ ಮಣ್ಣಿನ ತೆರವು ಕಾರ್ಯಾಚರಣೆ ಪ್ರಾರಂಭ ಆಗಲಿದೆ.

ಮಂದ್ರಾಳ್ಳಿ ಮನೆಯ ಮೇಲೆ ಕುಸಿದ ಗುಡ್ಡ:
ಮತ್ತೊಂದೆಡೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೈಗಾ ಕಾರವಾರ ರಸ್ತೆಯಲ್ಲಿ ಗುಡ್ಡ ಕುಸಿತವಾಗಿದೆ. ರಸ್ತೆ ಪಕ್ಕದಲ್ಲಿನ ಮನೆ ಮೇಲೆ ಗುಡ್ದ ಕುಸಿದು ಮನೆ ಸಂಪೂರ್ಣವಾಗಿ ಜಖಂ ಆಗಿದೆ. ಈ ಘಟನೆ ಮಂದ್ರಾಳ್ಳಿ ಗ್ರಾಮದಲ್ಲಿ ನಡೆದಿದೆ. ಇನ್ನು ಗುಡ್ಡ ಕುಸಿದತ ಶಬ್ದ ಬರುತ್ತಿದ್ದಂತೆಯೇ ಮನೆಉಲ್ಲಿದ್ದ ಎಲ್ಲ ಜನರು ಮನೆಯಿಂದ ಹೊರಗೆ ಓಡಿಬಂದು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಇದರಿಂದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಭಾರೀ ಅನಾಹುತ ಸಂಭವಿಸುವುದು ಸ್ವಲ್ಪದರಲ್ಲಿಯೇ ತಪ್ಪಿದೆ. ಇನ್ನು ಮನೆಯ ಒಳಗೆ ಸಂಪೂರ್ಣವಾಗಿ ಗುಡ್ಡ ಕುಸಿತದಿಂದ ಉಂಟಾದ ಕಲ್ಲುಬಂಡೆಗಳು ಹಾಗೂ ಮಣ್ಣು ತುಂಬಿಕೊಂಡಿದ್ದು, ಮನೆಯಲ್ಲಿನ ಎಲ್ಲ ವಸ್ತುಗಳು ಕೂಡ ಹಾನಿಗೀಡಾಗಿವೆ. ನ್ನು ಮನೆಯ ಕೆಲವು ಗೋಡೆಗಳು ಕೂಡ ಬಿರುಬಿಟ್ಟು ಬಿದ್ದು ಹೋಗಿವೆ. ಮನೆಯ ಹಿಂಬಾಗಿಲಿನ ಮೂಲಕ ಹೊರಬಂದ ಮನೆಯ ಸದಸ್ಯರು ಪ್ರಾಣಾಪಾಯದಿಂದ ಪಾರಗಿದ್ದಾರೆ. 

Breaking: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೈದ ಆರೋಪಿಗಳಿಗೆ 6 ವರ್ಷಗಳ ಬಳಿಕ ಜಾಮೀನು

ಶಿರಸಿ ಕುಮಟಾ ರಸ್ತೆ ಸಂಚಾರ ಬಂದ್:
ಮಳೆ ನೀರು ಹರಿದು ಶಿರಸಿ- ಕುಮಟಾ ರಸ್ತೆ ಸಂಚಾರ ಬಂದ್ ಆಗಿದೆ. ಕತಗಾಲ್ ಬಳಿ ರಸ್ತೆ ಮೇಲೆ ಹರಿಯುತ್ತಿರುವ ಹಳ್ಳದ ನೀರಿನಿಂದ ಜಲಾವೃತವಾಗಿದೆ. ಒಟ್ಟು ಒಂದು ಕಿಲೋ ಮೀಟರ್ ವರೆಗೂ ವಾಹನಗಳು ನಿಂತುಕೊಮಡಿವೆ. ಶಿರಸಿ ಭಾಗದ ರಾಗಿ ಹೊಸಳ್ಳಿ ಭಾಗದಲ್ಲಿ ಗುಡ್ಡ ಕುಸಿತದಿಂದ ಶಿರಸಿ ಭಾಗದ ಸಂಚಾರವೂ ಬಂದ್ ಆಗಿದೆ. ಮತ್ತೊಂದೆಡೆ, ಕುಮಟಾದ ಐಗಳಕೂರ್ವೆ ಪ್ರದೇಶ ಜಲಾವೃತವಾಗಿದೆ. ಅಘನಾಶಿನಿ ನದಿ ಉಕ್ಕಿ ಹರಿದು ನೆರೆಯಿಂದಾಗಿ ತೀರ‌ ಪ್ರದೇಶಗಳು ಜಲಾವೃತವಾಗಿದ್ದು, ಹಲವು ಮನೆಗಳೊಳಗೆ ನೀರು ಹೊಕ್ಕಿದ್ದರಿಂದ ಜೀವ ರಕ್ಷಣೆಗಾಗಿ ಜನರು ಸ್ಥಳಾಂತರಗೊಂಡಿದ್ದಾರೆ. ಅಗತ್ಯ ಸಾಮಾನುಗಳೊಂದಿಗೆ ಜನರು ಕಾಳಜಿ ಕೇಂದ್ರ ಹಾಗೂ ಕುಟುಂಬಸ್ಥರ ಮನೆಗೆ ಹೋಗಿದ್ದಾರೆ. ಪ್ರತೀ ವರ್ಷ ಇದೇ ಸಮಸ್ಯೆ ಕಾಣುತ್ತಿದ್ದು, ಶಾಶ್ವತ ಪರಿಹಾರಕ್ಕೆ ಒತ್ತಾಯ ಮಾಡಿದ್ದಾರೆ.

click me!