ಸಚಿವ ಸ್ಥಾನ ಸಿಕ್ಕರೂ ಶಶಿಕಲಾಗೆ ದುಃಖ, ನೋವು

Published : Aug 21, 2019, 03:03 PM ISTUpdated : Aug 21, 2019, 04:03 PM IST
ಸಚಿವ ಸ್ಥಾನ ಸಿಕ್ಕರೂ ಶಶಿಕಲಾಗೆ  ದುಃಖ, ನೋವು

ಸಾರಾಂಶ

ಸಚಿವ ಸ್ಥಾನ ಸಿಕ್ಕರೂ ನನಗೆ ಒಂದು ನೋವಿದೆ. ಒಂದು ಕಡೆ ಖುಷಿಯಿದ್ದರೆ ಇನ್ನೊಂದು ಕಡೆ ನಮ್ಮ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂಬ ನೋವಿದೆ ಎಂದು ನೂತನ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ಬೆಳಗಾವಿ(ಆ. 21) ಪಕ್ಷದ ವರಿಷ್ಠರು ನನಗೆ ಹೊಸ ಜವಾಬ್ದಾರಿ ಕೊಟ್ಟಿದ್ದಾರೆ.  ಒಂದು ಕಡೆ ಖುಷಿ ಇನ್ನೊಂದು ಕಡೆ ದುಃಖವಿದೆ.  ಪ್ರವಾಹದ ಸಂದರ್ಭದಲ್ಲಿ ನಮ್ಮೆಲ್ಲಾ ಜನರು ನೋವಿನಲ್ಲಿದ್ದಾರೆ ಎಂದು ನೂತನ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಮೇಲೆ ತವರು ಬೆಳಗಾವಿಗೆ ಆಗಮಿಸಿದ ಜೊಲ್ಲೆ ಸುದ್ದಿಗಾರರೊಂದಿಗೆ ಮಾತನಾಡಿದರು. ಕೊಟ್ಟಂತ ಜವಾಬ್ದಾರಿಯನ್ನ ವ್ಯವಸ್ಥಿತವಾಗಿ ನಿರ್ವಹಿಸಿ ಕೆಲಸ ಮಾಡುತ್ತೇನೆ ಎಂದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ನಾನು ಸಚಿವ ಸ್ಥಾನದ ನಿರೀಕ್ಷೆ ಮಾಡಿರಲಿಲ್ಲ. ಶಾಸಕಾಂಗ ಸಭೆ ಇದೆ ಎಂದು ಕರೆದಿದ್ದರು,ನಂತರ ಯಡಿಯೂರಪ್ಪ ಅವರು ಸಚಿವ ಸ್ಥಾನ ಸಿಕ್ಕಿರುವ ಬಗ್ಗೆ ತಿಳಿಸಿದರು ಎಂದು ಸಚಿವರಾದ ಬಗೆ ವಿವರಿಸಿದರು.

ಮಹಿಳೆಯರ ಸಮಸ್ಯೆ ಬಹಳಷ್ಟಿವೆ ಅವರಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ಬೆಳಗಾವಿ ಜಿಲ್ಲೆಯ ಎಲ್ಲ ಶಾಸಕರ ಮಾರ್ಗದರ್ಶನದಲ್ಲಿ ಈ ಭಾಗದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.

 


 

PREV
click me!

Recommended Stories

ಡಿ.16ರಂದು ಮಂಡ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ, ಜಿಲ್ಲಾಡಳಿತದಿಂದ ಭರದ ಸಿದ್ದತೆ, ಕಟ್ಟುನಿಟ್ಟಿನ ಭದ್ರತೆ
ತಂತ್ರಜ್ಞಾನದ ನೆರವಿನಿಂದ ಜೈಲುಗಳಲ್ಲಿ ಸುಧಾರಣೆ ತರಲು ಅಲೋಕ್ ಕುಮಾರ್ ನೇತೃತ್ವ