'ಕಾಂಗ್ರೆಸ್ ತೊರೆದು ಮತ್ತೊಂದು ಪಕ್ಷಕ್ಕೆ ಹೋಗುತ್ತಾರೆ ಸಿದ್ದರಾಮಯ್ಯ'

By Suvarna NewsFirst Published Dec 19, 2020, 12:15 PM IST
Highlights

ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಯುತ್ತಿರುವ ಬೆನ್ನಲ್ಲೇ ಇದೀಗ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿದೆ. ಸಿದ್ಧರಾಮಯ್ಯ ಬಗ್ಗೆ ಇದೀಗ ಸ್ಫೋಟಕ ಹೇಳಿಕೆ ನೀಡಲಾಗಿದೆ. 

ಶಿವಮೊಗ್ಗ (ಡಿ.19): ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಮ್ಮ ಪಕ್ಷದ ಒಳ ಸಂಚಿನಿಂದ ಸೋತಿದ್ದಾಗಿ ಹೇಳುತ್ತಾರೆ.  ಅವರ ಪಕ್ಷದ ಹಲವು ಅಭ್ಯರ್ಥಿಗಳು ಸೋತಿದ್ದು ಯಾರ ಸಂಚಿನಿಂದ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. 

ಶಿವಮೊಗ್ಗದಲ್ಲಿ ಮಾತನಾಡಿದ ಸಚಿವ ಕೆ ಎಸ್ ಈಶ್ವರಪ್ಪ, ಕಾಂಗ್ರೆಸ್ ನಾಯಕರಾದ ಪರಮೇಶ್ವರ, ಖರ್ಗೆ ಸೋತರು. ಅವರನ್ನು ಮನಸ್ಸಲ್ಲಿ ಇಟ್ಟು ಕೊಂಡು ಈ ಮಾತನ್ನು ಹೇಳಿದರೋ...  ನನ್ನ ಸೋಲಿಗೆ ಒಂದು ಜಾತಿಯವರು ಕಾರಣ ಎಂದು ಸಿದ್ದರಾಮಯ್ಯ ಹೇಳುತ್ತಾರೆ.  ಪಕ್ಷ ತಾಯಿಯಿದ್ದಂತೆ ಎನ್ನುವ ಸಿದ್ದರಾಮಯ್ಯ ಖರ್ಗೆ, ಪರಮೇಶ್ವರ್ ಸೋತಾಗ ತಾಯಿ ನೆನಪಾಗಲಿಲ್ಲ ಎಂದರು.

ಆ ಗಿರಾಕಿ ಹೋಟೆಲ್‌ನಲ್ಲಿ ಇದ್ರು : ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ..

ನಿಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೇ ಒಂದೇ ಒಂದು ಎಂಪಿ ಸೀಟ್ ಗೆದ್ದಿತು. ನೀವು ಅಧಿಕಾರದಲ್ಲಿದ್ದಾಗಲೇ ಕಾಂಗ್ರೆಸ್ ಪಕ್ಷದ ನಿರ್ನಾಮ ಶುರುವಾಯಿತು.  ಸಿದ್ದರಾಮಯ್ಯ ನವರನ್ನು ಕಾಂಗ್ರೆಸ್ ಪಕ್ಷದಿಂದ ಕಿತ್ತು ಹಾಕಿ ಎಂದು ಕೈ ಮುಖಂಡ ರಿಗೆ ಈಶ್ವರಪ್ಪ ಹೇಳಿದರು.

ಸಿದ್ದರಾಮಯ್ಯ ಪ್ರಬುದ್ಧ ರಾಜಕಾರಣಿ ತರಹ ವರ್ತಿಸುತ್ತಿಲ್ಲ. ಸಿದ್ದರಾಮಯ್ಯ ನಾನೇನು ಜೈಲಿಗೆ ಹೋಗಿದ್ದೇನಾ ಅಂತಾರೆ. ಸಿದ್ದರಾಮಯ್ಯನವರೇ
ಜೈಲಿಗೆ ಹೋಗಿದ್ದವರು ತಪ್ಪಿತಸ್ಥರೆಂದು ಆಗುತ್ತದೆ.  ಆದರೆ ಜೈಲಿಗೆ ಹೋಗದೆ ಹೊರಗಡೆ ಬಹಳ ಜನ ಇದ್ದಾರೆ ಎಂದರು.  

ಗೋವುಗಳ ಹತ್ಯೆ ಮಾಡಿದವರನ್ನು ರಕ್ಷಣೆ ಮಾಡಿದ್ದೀರಾ ನಿಮ್ಮನ್ನು ಜಾತಿವಾದಿ ಎಂದು ಕರೆಯಬೇಕೋ..ಧರ್ಮ ದ್ರೋಹಿ ಎಂದು ಕರೆಯಬೇಕೋ...  ಯಾರೋ ಕಟ್ಟಿದ್ದ ಹುತ್ತದಲ್ಲಿ ಹಾವು ಸೇರಿಕೊಂಡಂತೆ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಕೊಂಡಿದ್ದಾರೆ. ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್ ಬಗ್ಗೆ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡಿದ್ದು ತಪ್ಪು ಎನಿಸಿದರೇ ಕ್ಷಮೆ ಕೇಳಿ. ಇಲ್ಲದಿದ್ದರೆ ನಿಮ್ಮ ಪಕ್ಷದ ಸಂಸ್ಕೃತಿ ಎನ್ನ ಬೇಕಾಗುತ್ತದೆ ಎಂದರು.

ಜಾತಿವಾರು ಸಮೀಕ್ಷೆ ಬಿಡುಗಡೆ ಮಾಡಲು ಜೆಡಿಎಸ್ ಬಿಜೆಪಿ ಷಡ್ಯಂತ್ರ ಹೂಡಿದೆ ಎನ್ನುವ ಸಿದ್ದರಾಮಯ್ಯನವರೇ ತಾವೇ ಮುಖ್ಯಮಂತ್ರಿಯಾಗಿ ದ್ದಾಗ ಯಾಕೆ ಬಿಡುಗಡೆ ಮಾಡಲಿಲ್ಲ? ಸಿದ್ದರಾಮಯ್ಯ ಸಿಎಂ ಆಗಿದ್ದಾಗಲು ಬಿಡುಗಡೆ ಮಾಡಲಿಲ್ಲ, ಸಮ್ಮಿಶ್ರ ಸರ್ಕಾರ ಇದ್ದಾಗ್ಯೂ ಬಿಡುಗಡೆ ಮಾಡಲಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದರು.

ಕಾಂಗ್ರೆಸ್ ಪಕ್ಷದಲ್ಲಿ ಎಲ್ಲ ರೀತಿಯ ಅಧಿಕಾರ ಪಡೆದು ಪಕ್ಷದ ನಾಯಕರಿಗೆ , ಕಾರ್ಯಕರ್ತರಿಗೆ ಅವಮಾನ ಮಾಡುತ್ತಾ ಇದ್ದೀರಿ. ಇದು ಒಳ್ಳೆಯ ರಾಜಕಾರಣಿಯ ಲಕ್ಷಣ ಅಲ್ಲ. ಸಿದ್ದರಾಮಯ್ಯ ಬೇರೆ ಪಕ್ಷ ಕಟ್ಟುತ್ತಾರೆ, ಇಲ್ಲವೇ ಯಾವುದಾದರೂ ಪಕ್ಷ ದ ಜೊತೆಗೆ ಹೋಗ್ತಾರೆ.  ಸಿದ್ದರಾಮಯ್ಯ ನಂತಹ ಕುತಂತ್ರಿ ರಾಜಕಾರಣಿ ಕರ್ನಾಟಕದಲ್ಲಿ ಮತ್ತೊಬ್ಬರಿಲ್ಲ ಎಂದರು.  

ರಾಷ್ಟ್ರದಲ್ಲಿ ಬಿಜೆಪಿ ಪಕ್ಷದ ಒಂದೇ ಗಟ್ಟಿಯಾಗಿ ಉಳಿಯುತ್ತದೆ. ನಾಯಕರನ್ನು ನಿರ್ಮಾಣ ಮಾಡುವ ಪಕ್ಷ ಬಿಜೆಪಿ. ಸ್ವಾರ್ಥಿಗಳ ಕೈಗೆ ಕಾಂಗ್ರೆಸ್ ಪಕ್ಷ ಸಿಲುಕಿದೆ.

click me!