ಡೀಸಿ ಶರತ್‌ ವರ್ಗಾಯಿಸಿ ಜಾಗಕ್ಕೆ ರೋಹಿಣಿ ನೇಮಕ : ರಾಜ್ಯ ಸರ್ಕಾರ ಆಕ್ಷೇಪಣೆ

By Kannadaprabha NewsFirst Published Nov 4, 2020, 7:06 AM IST
Highlights

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಶರತ್ ವರ್ಗಾಯಿಸಿ ರೋಹಿಣಿ ಸಿಂಧೂರಿ ಆ ಜಾಕ್ಕೆ ವರ್ಗಾಯಿಸಿದ್ದ ವಿಚಾರವೀಗ ಮತ್ತೊಂದು ತಿರುವು ಪಡೆದಿದೆ. 

ಬೆಂಗಳೂರು (ನ.04): ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ಬಿ. ಶರತ್‌ ಅವರನ್ನು ನಿಯಮಗಳ ಪ್ರಕಾರ ವರ್ಗಾವಣೆ ಮಾಡಲಾಗಿದ್ದು, ಈ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಗೆ (ಸಿಎಟಿ)ಗೆ ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಿದೆ. 

ಅವಧಿ ಪೂರ್ವ ವರ್ಗಾವಣೆ ಮಾಡಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ (ಸಿಎಟಿ) ಸಲ್ಲಿಸಿರುವ ಅರ್ಜಿಯ ಸಂಬಂಧ ಸರ್ಕಾರದ ಪರ ವಕೀಲರ ಆಕ್ಷೇಪಣೆ ಸಲ್ಲಿಸಿದರು. 

ಸರ್ಕಾರ ತನ್ನ ವಿವೇಚನಾಧಿಕಾರ ಬಳಸಿ ವರ್ಗಾವಣೆ ಆದೇಶ ಮಾಡಿದೆ. ಅಲ್ಲದೆ, ಸರ್ಕಾರ ವಿವೇಚನೆ ಬಳಸಿ ವರ್ಗಾವಣೆ ಮಾಡುವ ಹಲವು ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್‌ ಎತ್ತಿಹಿಡಿದಿದೆ. ಆದ್ದರಿಂದ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಸರ್ಕಾರಿ ವಕೀಲರು ನ್ಯಾಯಪೀಠಕ್ಕೆ ಮನವಿ ಮಾಡಿದರು. ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು 10ಕ್ಕೆ ಮುಂದೂಡಿತು.
 
ಅಲ್ಲದೆ, ಇದು ಸರ್ಕಾರದ ಆಡಳಿತಾತ್ಮಕ ವಿಚಾರವಾಗಿದ್ದು, ನ್ಯಾಯಾಲಯ ಮಧ್ಯಪ್ರವೇಶ ಮಾಡಬಾರದು.

click me!