ಪ್ರವಾಹ  ಪೀಡಿತ ಜನರಿಗೆ BSNLನಿಂದ ಉಚಿತ ಕರೆ, ಡೇಟಾ

By Web DeskFirst Published Aug 12, 2019, 11:13 PM IST
Highlights

ಲಕ್ಷಾಂತರ ಜನ ಕರ್ನಾಟಕದ ಪ್ರವಾಹದಲ್ಲಿ ಮನೆ ಕಳೆದುಕೊಂಡಿದ್ದಾರೆ. ಅದೆಷ್ಟೋ ಸಾವಿರ ಜನ ನಾಪತ್ತೆಯಾಗಿದ್ದಾರೆ. ಸ್ವಯಂ ಸೇವಾ ಸಂಸ್ಥೆಗಳು, ಮಾಧ್ಯಮಗಳು ಪರಿಹಾರ ಕಾರ್ಯಕ್ಕೆ ಸರಕಾರದೊಂದಿಗೆ ಕೈ ಜೋಡಿಸಿವೆ. ಇದೀಗ ಬಿಎಸ್ ಎನ್ ಎಲ್ ಸಹ ತನ್ನ ಸಹಕಾರ ನೀಡುತ್ತಿದೆ.

ಬೆಂಗಳೂರು[ಆ. 12] ಪ್ರವಾಹಕ್ಕೆ ಸಿಲುಕಿ ನಾಪತ್ತೆಯಾದವರ ಪತ್ತೆಗೆ ಮುಂದಾಗಿದ್ದ ಏರ್‌ ಟೆಲ್ ನೆರವು ಮುಂದಾಗಿದೆ 1948 ಟೋಲ್ ಫ್ರೀ ಸಂಖ್ಯೆಗೆ  ಕರೆ ಮಾಡುವಂತೆ ತಿಳಿಸಿತ್ತು. ಇದೀಗ ಬಿಎಸ್ ಎನ್ ಎಲ್ ಉಚಿತ ಕರೆ ಸೇವೆ ನೀಡಿದೆ.

ಬಿಎಸ್ ಎನ್ ಎಲ್ ನಿಂದ ಬಿಎಸ್ ಎನ್ ಎಲ್ ಗೆ ಅನ್ ಲಿಮಿಟೆಡ್ ಉಚಿತ ಕರೆ ಮತ್ತು ಇತರೆ ಸಂಸ್ಥೆಯ ದೂರವಾಣಿಗಳಿಗೆ 20 ನಿಮಿಷ ಉಚಿತ ಕರೆ ಸೇವೆಯನ್ನು ಬಿಎಸ್ ಎನ್ ಎಲ್ ನೀಡಿದೆ. ಇದೊಂದಿಗೆ 100 ಎಸ್ ಎಂ ಎಸ್ ಮತ್ತು 1 ಜಿಬಿ ಡೇಟಾ ಪ್ರತಿದಿನ ನೀಡಲಿದೆ. ಈ ಸೇವೆ ಪ್ರವಾಹ ಪೀಡಿತ 17 ಜಿಲ್ಲೆಗಳ 82 ತಾಲೂಕಿಗೆ ನೀಡಲಾಗಿದ್ದು 7 ದಿನಗಳ ಅವಧಿ ಇರಲಿದೆ. ಹೆಚ್ಚಿನ ಮಾಹಿತಿಗೆ 1503 ಸಂಖ್ಯೆಗೆ ಕರೆ ಮಾಡುವಂತೆ ಸಂಸ್ಥೆ ತಿಳಿಸಿದೆ. ಈ ಸಂದೇಶವನ್ನು ಪ್ರತಿ ಗ್ರಾಹಕನಿಗೂ ಬಿಎಸ್ ಎಲ್ ಎಲ್ ರವಾನಿಸಿದೆ.

ನಾಪತ್ತೆಯಾದವರ ಪತ್ತೆಗೆ ಏರ್ ಟೆಲ್ ಮುಂದಾಗಿದ್ದರೆ ಸಂಪರ್ಕ ಸಾಧಿಸಿಕೊಳ್ಳಲು ಬಿಎಸ್ ಎಲ್ ಎಲ್ ನೆರವು ನೀಡುತ್ತಿದೆ. ಪ್ರವಾಹ ಪರಿಸ್ಥಿತಿ ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿದ್ದು  ಮಲೆನಾಡು ಭಾಗದಲ್ಲಿ ಇನ್ನು ಮೂರು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

click me!