ರಾಜ್ಯದಲ್ಲಿನ ಮಳೆ ಆಘಾತ ಮನೆ -ಮಂದಿರಗಳನ್ನು ತನ್ನ ಜತೆ ತೆಗೆದುಕೊಂಡು ಹೋಗಿದೆ. ಹೆದ್ದಾರಿ, ರಾಜ್ಯ ಹೆದ್ದಾರಿ ಎಂಬ ತಾರತಮ್ಯವಿಲ್ಲದೆ ಗುಡ್ಡ ಕುಸಿತವಾಗಿದೆ. ಪರಿಣಾಮ ಚಿಕ್ಕಮಗಳೂರಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ಮಾರ್ಗವನ್ನು ಒಂದು ತಿಂಗಳ ಕಾಲ ಬಂದ್ ಮಾಡಲಾಗಿದೆ.
ಚಿಕ್ಕಮಗಳೂರು[ಆ. 14] ಚಿಕ್ಕಮಗಳೂರಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ಮಾರ್ಗದಲ್ಲಿ ಸುಮಾರು 20ಕ್ಕೂ ಅಧಿಕ ಕಡೆ ಭೂ ಕುಸಿತ ಉಂಟಾಗಿದ್ದು ರಸ್ತೆ ಸಂಚಾರವನ್ನು 1 ತಿಂಗಳು ಕಾಲ ಬಂದ್ ಮಾಡಲಾಗಿದೆ.
ಇವುಗಳ ದುರಸ್ಥಿಗೆ 1 ತಿಂಗಳ ಸಮಯಾವಕಾಶದ ಅಗತ್ಯವಿದೆ ಎಂದು ಲೋಕೋಪಯೋಗಿ ಇಲಾಖೆ ಹೇಳಿದ್ದು ಮಳೆ ಯಾವ ಪ್ರಮಾಣದಲ್ಲಿ ಇನ್ನು ಮುಂದೆ ಸುರಿಯಲಿದೆ ಎಂಬುದನ್ನು ಅಂದಾಜಿಸಬೇಕಾಗಿದೆ.
ಕಳೆದ ವರ್ಷದ ಸುರಿದ ಭಾರೀ ಮಳೆಗೆ ಅಲ್ಲಲ್ಲಿ ಗುಡ್ಡ ಕುಸಿದು ಹಲವು ಬಾರಿ ಸಂಚಾರವನ್ನು ಬಂದ್ ಮಾಡಲಾಗಿತ್ತು. ಈ ಬಾರಿಯೂ ಇದೇ ಪರಿಸ್ಥಿತಿ ಮುಂದುವರಿದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಸೆಲ್ಫಿ ಆಸೆಗೆ 100 ಅಡಿ ಕೆಳೆಕ್ಕೆ ಬಿದ್ದ ಚಿತ್ರದುರ್ಗ ಯುವಕ...ಮೈ ಜುಂ ಎನ್ನಿಸುವ ವಿಡಿಯೋ
undefined
ಭಾರೀ ಗಾತ್ರದ ಮರಗಳು ರಸ್ತೆಗೆ ಉರುಳಿವೆ. ಎಲ್ಲವೂ ಸರಿ ಹೋಗಲು ಇನ್ನು 2 ತಿಂಗಳಿಗೂ ಅಧಿಕ ಕಾಲ ಹಿಡಿಯಬಹುದು. ಈ ಮಾರ್ಗ ತೆರದುಕೊಳ್ಳುವವರೆಗೆ ಪರ್ಯಾಯ ಮಾರ್ಗ ಬಳಸುವುದು ಒಳಿತು.
ಪರ್ಯಾಯ ಮಾರ್ಗ ಯಾವುದು?: ಹಾಗಾದರೆ ಮಂಗಳೂರಿಗೆ ತೆರಳುವ ಪರ್ಯಾಯ ಮಾರ್ಗ ಯಾವುದು.. ಇದನ್ನು ಯೋಚಿಸಬೇಕಾಗಿದೆ. ಚಿಕ್ಕಮಗಳೂರು-ಆಲ್ದೂರು-ಬಾಳೆಹೊನ್ನೂರು-ಶೃಂಗೇರಿ-ಬಜಗೋಳಿ-ಕಾರ್ಕಳ-ಮೂಡಬಿದ್ರಿ ಮಾರ್ಗ ಬಳಸಿ ಮಂಗಳೂರಿಗೆ ತೆರಳಬೇಕಾಗುತ್ತದೆ. ತೆರಳುವ ಮುನ್ನ ಒಮ್ಮೆ ಸ್ಥಳೀಯ ಪರಿಸರದ ಮಾಹಿತಿ ಪಡೆದುಕೊಳ್ಳುವುದು ಒಳಿತು. ಇದಕ್ಕೆ ಸಮಾನಂತರವಾದ ಶಿರಾಢಿ ಘಾಟ್ ಸಂಚಾರಕ್ಕೆ ಮುಕ್ತವಾಗಿದೆ.
ಬೆಂಗಳೂರು ಟು ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ತೆರಳುವವರು ನೆಲಮಂಗಲ-ಕುಣಿಕಲ್-ಹಿರೀಸಾವೆ-ಚನ್ನರಾಯಪಟ್ಟಣ-ಆಲೂರು-ಸಕಲೇಶಪುರ-ಶಿರಾಢಿ ಘಾಟ್-ನೆಲ್ಯಾಡಿ-ಉಪ್ಪಿನಂಗಡಿ-ಕಲ್ಲಡ್ಕ-ಬಂಟ್ವಾಳ ಮಾರ್ಗವಾಗಿ ಮಂಗಳೂರು ಸೇರಬಹುದು. ಮಾರ್ಗದಲ್ಲಿ ಸದ್ಯಕ್ಕೆ ಯಾವ ತೊಂದರೆ ಇಲ್ಲ.