ಸ್ವ ರಕ್ಷಣೆಗಾಗಿ ಬಿಎಂಟಿಸಿ ಮಹಿಳಾ ಸಿಬ್ಬಂದಿಗೆ ಕರಾಟೆ ತರಬೇತಿ..!

Kannadaprabha News   | Asianet News
Published : Nov 22, 2020, 08:08 AM IST
ಸ್ವ ರಕ್ಷಣೆಗಾಗಿ ಬಿಎಂಟಿಸಿ ಮಹಿಳಾ ಸಿಬ್ಬಂದಿಗೆ ಕರಾಟೆ ತರಬೇತಿ..!

ಸಾರಾಂಶ

ಮಹಿಳಾ ಸಿಬ್ಬಂದಿಯ ಸ್ವಯಂ ರಕ್ಷಣೆಗೆ ಬಿಎಂಟಿಸಿ ಒತ್ತು| ನಿರ್ಭಯಾ ನಿಧಿಯಡಿ ಸಮರ ಕಲೆ ಅಭ್ಯಾಸ| 21 ದಿನ ದಿನಕ್ಕೆ 2 ತಾಸಿನಂತೆ ಕರಾಟೆ, ಜೂಡೋ ತರಬೇತಿ| ಕಾನೂನು ಹೋರಾಟದ ಕುರಿತು ಅರಿವು| ನಿಗಮದ ತರಬೇತಿ ಕೇಂದ್ರದಲ್ಲಿ ಒಟ್ಟು 21 ದಿನಗಳ ಕಾಲ ದಿನಕ್ಕೆ 2 ತಾಸಿನಂತೆ 42 ಗಂಟೆಗಳ ಕಾಲ ತರಬೇತಿ| 

ಬೆಂಗಳೂರು(ನ.22): ಮಹಿಳಾ ಸಿಬ್ಬಂದಿಯ ಸುರಕ್ಷತೆಗೆ ಹಲವು ಯೋಜನೆ ರೂಪಿಸಿರುವ ಬಿಎಂಟಿಸಿ ಇದೀಗ ಮಹಿಳಾ ಸಿಬ್ಬಂದಿಗೆ ಸ್ವ ರಕ್ಷಣೆಗಾಗಿ ಸಮರ ಕಲೆಯ ತರಬೇತಿ ನೀಡಲು ತೀರ್ಮಾನಿಸಿದೆ.

ಇತ್ತೀಚಿನ ದಿನಗಳಲ್ಲಿ ಪ್ರತಿ ನಿತ್ಯ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ಹಾಗೂ ಲಿಂಗಾಧಾರಿತ ಹಿಂಸಾಚಾರಗಳು ನಡೆಯುತ್ತಿವೆ. ಬಿಎಂಟಿಸಿಯಲ್ಲಿಯೂ ಸಹ ನಿರ್ವಾಹಕ ಹಾಗೂ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿ, ಕರ್ತವ್ಯ ನಿರ್ವಹಣೆ ವೇಳೆ ಪುರುಷ ಪ್ರಯಾಣಿಕರು ಹಾಗೂ ಪುರುಷ ಸಹೋದ್ಯೋಗಿಗಳಿಂದ ಕಿರುಕುಳ ಅನುಭವಿಸಿರುವ ಸಾಕಷ್ಟು ನಿರ್ದಶನಗಳಿವೆ. ಈ ಹಿನ್ನೆಲೆಯಲ್ಲಿ ಮಹಿಳೆಯರ ಸುರಕ್ಷತೆ ಹಾಗೂ ಸ್ವ ರಕ್ಷಣೆಯ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ‘ನಿರ್ಭಯಾ ನಿಧಿ’ಯ ಅನುದಾನ ಬಳಸಿಕೊಂಡು ಕರಾಟೆ, ಜೂಡೋದಂತಹ ಸಮರ ಕಲೆಗಳು ಮತ್ತು ಲಿಂಗ ಸಂವೇದನೆ, ಕಾನೂನು ಜ್ಞಾನ, ಸಮಾಲೋಚನಾ ಕೌಶಲ್ಯ ಹಾಗೂ ಸಾರ್ವಜನಿಕ ಭಾಷಣ ಕುರಿತು ಪ್ರಾಯೋಗಿಕ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ‘ನಿರ್ಭಯಾ ಆ್ಯಪ್‌’...!

ಬಿಎಂಟಿಸಿ ನಿಗಮದಲ್ಲಿ ಒಟ್ಟು 2,952 ಮಂದಿ ಮಹಿಳಾ ಸಿಬ್ಬಂದಿ ಇದ್ದಾರೆ. ನಿಗಮದ ತರಬೇತಿ ಕೇಂದ್ರದಲ್ಲಿ ಒಟ್ಟು 21 ದಿನಗಳ ಕಾಲ ದಿನಕ್ಕೆ 2 ತಾಸಿನಂತೆ 42 ಗಂಟೆಗಳ ಕಾಲ ಈ ಎಲ್ಲ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ. ತರಬೇತಿಯಲ್ಲಿ ಮುಖ್ಯವಾಗಿ ಮಹಿಳಾ ಸಿಬ್ಬಂದಿ ದೈನಂದಿನ ಜೀವನದಲ್ಲಿ ಎದುರಿಸಬಹುದಾದ ಬೆದರಿಕೆ ಸನ್ನಿವೇಶನಗಳಲ್ಲಿ ಸರಳ ರಕ್ಷಣಾತ್ಮಕ ಹಾಗೂ ಆಕ್ರಮಣಕಾರಿ ಚಲನೆಗಳ ಮೂಲಕ ತಮ್ಮನ್ನು ತಾವೇ ರಕ್ಷಸಿಕೊಳ್ಳುವುದರ ಬಗ್ಗೆ ಕಲಿಸಿಕೊಡಲಾಗುತ್ತದೆ. ಸಂಬಂಧಪಟ್ಟ ವಿಷಯ ತಜ್ಞರು ಹಾಗೂ ಸಮರ ಕಲೆಗಳ ಪರಿಣತರು ಮಹಿಳಾ ಸಿಬ್ಬಂದಿಗೆ ತರಬೇತಿ ನೀಡಲಿದ್ದಾರೆ. ಶೀಘ್ರದಲ್ಲೇ ತರಬೇತಿಯ ವೇಳಾ ಪಟ್ಟಿಯನ್ನು ಪ್ರಕಟಿಸುವುದಾಗಿ ಅವರು ಹೇಳಿದರು.
 

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ