ಶಾಮನೂರು ಶಿವಶಂಕರಪ್ಪನವರ ಮನೆಯಲ್ಲಿ ಕನಕಾಭಿಷೇಕ ಮತ್ತು ತುಲಾಭಾರ

By Gowthami KFirst Published Aug 21, 2022, 9:50 PM IST
Highlights

ಡಾ.ಶಾಮನೂರು ಶಿವಶಂಕರಪ್ಪನವರ ನಿವಾಸದಲ್ಲಿ ಭಾನುವಾರ ಕನಕಾಭಿಷೇಕ ಮತ್ತು ತುಲಾಭಾರ ನೆರವೇರಿಸಲಾಯಿತು. ಶಾಮನೂರು ಶಿವಶಂಕರಪ್ಪನವರ ಪುತ್ರ ಎಸ್.ಎಸ್.ಗಣೇಶ್ ಮತ್ತವರ ಪುತ್ರ ಎಸ್. ಬಿ. ಅಭಿಷೇಕ್ ಅವರು ಕುಟುಂಬ ಸದಸ್ಯರೊಂದಿಗೆ ತುಲಾಭಾರ ಮತ್ತು ಕನಕ ಅಭಿಷೇಕ ನಡೆಸಿಕೊಟ್ಟರು.

ವರದಿ: ವರದರಾಜ್ ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ (ಆ.21): ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರು, ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪನವರ ನಿವಾಸದಲ್ಲಿ ಭಾನುವಾರ ಕನಕಾಭಿಷೇಕ ಮತ್ತು ತುಲಾಭಾರ ನೆರವೇರಿಸಲಾಯಿತು. ಶಾಮನೂರು ಶಿವಶಂಕರಪ್ಪನವರ ಪುತ್ರ ಎಸ್.ಎಸ್.ಗಣೇಶ್ ಮತ್ತವರ ಪುತ್ರ ಎಸ್. ಬಿ. ಅಭಿಷೇಕ್ ಅವರು ಕುಟುಂಬ ಸದಸ್ಯರೊಂದಿಗೆ ತುಲಾಭಾರ ಮತ್ತು ಕನಕ ಅಭಿಷೇಕ ನಡೆಸಿಕೊಟ್ಟರು. ಶಾಮನೂರು ಶಿವಶಂಕರಪ್ಪನವರು ನಾಲ್ಕನೇ ತಲೆಮಾರು ಕಂಡ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಂದು ಬೆಳಿಗ್ಗೆ ಎಸ್‌. ಎಸ್. ಗಣೇಶ್ ಅವರ ಮನೆಯಲ್ಲಿ ಇಂದು ಡಾ ಎಸ್ ಆರ್ ನರಸಿಂಹಮೂರ್ತಿ ಖ್ಯಾತ ಜ್ಯೋತಿಷಿಗಳು ಇವರ ನೇತೃತ್ವದಲ್ಲಿ ಕನಕಾಭಿಷೇಕ ಮತ್ತು ತುಲಾಭಾರ ಕಾರ್ಯಕ್ರಮ ನಡೆಯಿತು‌. ಕನಕಾಭಿಷೇಕಕ್ಕು ಮುನ್ನ ಎಸ್ ಎಸ್ ಮನೆಯಲ್ಲಿ ಹೋಮ ಹವನ ಕಾರ್ಯಕ್ರಮಗಳು ನಡೆದವು. ನಾಲ್ಕನೇ ತಲೆಮಾರನ್ನು ಕಾಣುವುದೇ ಅಪರೂಪಗಳಲ್ಲಿ ಅಪರೂಪ ಈ ಹಿನ್ನಲೆಯಲ್ಲಿ ಮೃತ್ಯಂಜಯ, ಪವನ, ನವಗ್ರಹ, ಆಯುಷ್ಯ ಲಕ್ಷ್ಮಿ‌ನಾರಾಯಣ ಹೋಮ‌ ಮಾಡಲಾಯಿತು. ದೇಶದ 21ದು ನದಿಗಳಿಂದ ತಂದಿದ್ದ ನೀರಿನಲ್ಲಿ ಶಾಮನೂರು ಶಿವಶಂಕರಪ್ಪನವರಿಗೆ ಅಭಿಷೇಕ  ಮಾಡಲಾಯಿತು.

ಶಾಮನೂರು ನಾಲ್ಕನೇ ತಲೆಮಾರು ಕಂಡ ಹಿನ್ನಲೆಯಲ್ಲಿ ಅವರ ಮೊಮ್ಮಗನ ಮಗ ಸುವೀರ ರವರ ತಲೆಮೇಲೆ  ಚಿನ್ನದ ಹೂವಿನ ಮಳೆಗರಿದಿದ್ದಾರೆ. ಶಾಮನೂರು ಅವರ ಮರಿಮೊಮ್ಮಗನ ಮೇಲೆ ಚಿನ್ನ ಬೆಳ್ಳಿ ಹೂ ಮಳೆ ಸುರಿಸಿದ್ದು ಕನಕಾಭಿಷೇಕದ ವಿಶೇಷ‌.ಇಂತಹ ಅವಕಾಶ ಎಲ್ಲರಿಗು ಬರೋದಿಲ್ಲ. ಶಾಮನೂರು ಶಿವಶಂಕರಪ್ಪನವರಿಗೆ ಇಂತಹದೊಂದು ಅದೃಷ್ಟ ಬಂದಿದೆ.  ಈ ಸಂದರ್ಭದಲ್ಲಿ ಬೀಗರಾದ ಜಗದೀಶ್ ಶೆಟ್ಟರ್, ಕಾಂಗ್ರೆಸ್ ಮುಖಂಡ ಎಂಬಿಪಾಟೀಲ್ ಕುಟುಂಬ ಸೇರಿದಂತೆ ಶಾಮನೂರು ಆಪ್ತರು ಇದ್ದರು.

ಕಾರಿಡಾರ್‌ ಯೋಜನೆ ಕೈಬಿಡಲು ಒತ್ತಡ ಹೇರುವೆ: ಶಾಸಕ ಶಾಮನೂರು ಶಿವಶಂಕರಪ್ಪ

ಎಸ್ ಎಸ್ ಮಾಲ್ ನಲ್ಲಿ ಧಾನ್ಯಗಳ  ತುಲಾಭಾರ: 
ನಂತರ ಎಸ್.ಎಸ್.ಮಹಲ್ ನಲ್ಲಿ ಶಾಮನೂರು ಶಿವಶಂಕರಪ್ಪನವರಿಗೆ ತುಲಾಭಾರ ನಡೆಸಲಾಯಿತು. ಶಾಮನೂರು ಅವರ ನಾಲ್ಕನೆ ತಲೆ ಮಾರಿನ ಮೊಮ್ಮಗ ಚೀ ಸುವೀರ್  ರನ್ನು ಕೂರಿಸಿ ಧವಸ ದಾನ್ಯಗಳ ತುಲಾಭಾರ ಮಾಡಲಾಯಿತು.ಧಾನ್ಯಗಳ ತುಲಾಭಾರದ ನಂತರ ಆ ದಾನ್ಯಗಳನ್ನು ಐದು ದೇವಾಲಯಗಳಿಗೆ ನೀಡಲು‌ ನಿರ್ಧರಿಸಲಾಗಿದೆ.  ಈ ಸಂದರ್ಭದಲ್ಲಿ ಎಸ್ ಎಸ್  ಗಣೇಶ್ ಮತ್ತು ಅಭಿಷೇಕ್ ಕುಟುಂಬದವರೊಂದಿಗೆ ಶಾಮನೂರು ಶಿವಶಂಕರಪ್ಪನವರ ಪುತ್ರರಾದ ಎಸ್.ಎಸ್.ಬಕ್ಕೇಶ್, ಎಸ್.ಎಸ್.ಮಲ್ಲಿಕಾರ್ಜುನ, ಪುತ್ರಿಯರಾದ ಮಂಜುಳಾ ಶಿವಶಂಕರ್, ಅಪರ್ಣಾ ಭಟ್ಟಾಚಾರ್ಯ, ಸುಧಾ ರಾಜೇಂದ್ರ ಪಾಟೀಲ್, ಮೀನಾ ಶರಣ ಪ್ರಕಾಶ್ ಪಾಟೀಲ್ ಇದ್ದರು.

ಸಿದ್ದುಗೆ ತಪ್ಪಿನ ಅರಿವಾಗಿದೆ, ಒಳ್ಳೇ ಬುದ್ಧಿ ಬಂದಿದೆ: ಶಾಮನೂರು ಶಿವಶಂಕರಪ್ಪ

ಶಾಮನೂರು ಶಿವಶಂಕರಪ್ಪ ಅವರ ಸಂಬಂಧಿಕರಾದ ಜಗದೀಶ್ ಶೆಟ್ಟರ್, ಎಂ.ಬಿ.ಪಾಟೀಲ್ ಕುಟುಂಬ ಸಮೇತರಾಗಿ ಆಗಮಿಸಿ ಶುಭ ಹಾರಿಸಿದರು. ಶಾಮನೂರುಗೆ 92 ವರ್ಷವಾಗಿದ್ದು ಅವರು ನೂರು ವರ್ಷ ಬದುಕಲಿ ಎಂದು ಶುಭ ಹಾರೈಸಿದರು‌. ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಸಂಬಂಧಿಕರು, ದಾವಣಗೆರೆ ನಗರದ ಗಣ್ಯ ವ್ಯಕ್ತಿಗಳು ಆಗಮಿಸಿ ಡಾ.ಶಾಮನೂರು ಶಿವಶಂಕರಪ್ಪನವರಿಗೆ ಹಾಗೂ ಅವರ ನಾಲ್ಕನೇ ತಲೆಮಾರಿನ ಸದಸ್ಯ ಚಿ.ಸುವೀರ್ ಶಾಮನೂರು ಅವರನ್ನು ಹಾರಿಸಿದರು.

click me!