ಕಳಸಾ-ಬಂಡೂರಿ ಜೋಡಣೆ: ಶೀಘ್ರ ಕಾಮಗಾರಿಗೆ ಚಾಲನೆ : ಸಿ.ಸಿ.ಪಾಟೀಲ್

By Kannadaprabha News  |  First Published Jan 12, 2023, 11:34 AM IST

 ಶೀಘ್ರದಲ್ಲಿಯೇ ಮಹದಾಯಿ, ಕಳಸಾ-ಬಂಡೂರಿ ನಾಲಾ ಜೋಡನೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ಹೇಳಿದರು. ಅಧಿಕಾರವಿಲ್ಲದ ಸಂದರ್ಭದಲ್ಲಿ ಬಿಜೆಪಿ ಮುಖಂಡರು ನಾವೆಲ್ಲ ರೈತರೊಂದಿಗೆ ಸೇರಿಕೊಂಡು ಕಳಸಾ-ಬಂಡೂರಿ ನಾಲಾ ಜೋಡನೆಗೆ ಅನೇಕ ರೀತಿಯ ಹೋರಾಟಗಳನ್ನು ಮಾಡಿದ್ದೆವು ಎಂದು ಹೋರಾಟದ ದಿನಗಳನ್ನು ಸ್ಮರಿಸಿದರು.


ರೋಣ (ಜ.12) : ಶೀಘ್ರದಲ್ಲಿಯೇ ಮಹದಾಯಿ, ಕಳಸಾ-ಬಂಡೂರಿ ನಾಲಾ ಜೋಡನೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ಹೇಳಿದರು. ತಾಲೂಕಿನ ಯಾ.ಸ. ಹಡಗಲಿ ಗ್ರಾಮದಲ್ಲಿ ಬುಧ​ವಾ​ರ .9.25 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ ಯಾವಗಲ್ಲ ಗ್ರಾಮದಲ್ಲಿ .1.68 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ, ಬಳಿಕ ಜರುಗಿದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಧಿಕಾರವಿಲ್ಲದ ಸಂದರ್ಭದಲ್ಲಿ ಬಿಜೆಪಿ ಮುಖಂಡರು(BJP Leaders) ನಾವೆಲ್ಲ ರೈತರೊಂದಿಗೆ ಸೇರಿಕೊಂಡು ಕಳಸಾ-ಬಂಡೂರಿ ನಾಲಾ ಜೋಡನೆ(Kalasa Banduri Nala project )ಗೆ ಅನೇಕ ರೀತಿಯ ಹೋರಾಟಗಳನ್ನು ಮಾಡಿದ್ದೆವು. ಧರ್ಮಸಿಂಗ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ನಾವು ರಕ್ತದಲ್ಲಿ ಪತ್ರ ಬರದು ಮಹದಾಯಿ(Mahadayi)ಗಾಗಿ ಆಗ್ರಹಿಸಿದ್ದವು. ಈಗ ನಮ್ಮದೇ ಸರ್ಕಾರ ಅಧಿಕಾರದಲ್ಲಿರುವ ಕಾರಣ ಶೀಘ್ರದಲ್ಲಿಯೇ ಕಳಸಾ-ಬಂಡೂರಿ ನಾಲಾ ಜೋಡನೆ ಕಾಮಗಾರಿಗೆ ಚಾಲನೆ ನೀಡಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನೀರಾವರಿ ಸಚಿವ ಗೋವಿಂದ ಕಾರಜೋಳ ಅವರ ಜೊತೆ ಚರ್ಚಿಸಲಾಗಿದೆ. ಅತೀ ಶೀಘ್ರದಲ್ಲಿಯೇ ಕಾಮಗಾರಿಗ ಚಾಲನೆ ನೀಡುತ್ತೇವೆ ಎಂದರು.

Tap to resize

Latest Videos

undefined

Mahadayi Dispute: 1 ವರ್ಷದಲ್ಲಿ ಮಹದಾಯಿ ಜಾರಿ: ಕಾರಜೋಳ ಶಪಥ

ಯಾ.ಸ.-ಹಡಗಲಿ ಗ್ರಾಮದಲ್ಲಿ .4.5 ಕೋಟಿ ವೆಚ್ಚದ ಅನುದಾನದಲ್ಲಿ ಯಾ.ಸ. ಹಡಗಲಿ​​-ಕೌಜಗೇರಿ ಯಾ.ಸ. ಹಡಗಲಿ-ಯಾವಗಲ್ಲ ಗ್ರಾಮದ ಆಯ್ದ ಭಾಗಗಳಲ್ಲಿ ರಸ್ತೆ ಸುಧಾರಣೆ, .2 ಕೋಟಿ ಅನುದಾನದಲ್ಲಿ ಯಾ.ಸ. ಹಡಗಲಿಯಿಂದ-ಮಾಳವಾಡ ಗ್ರಾಮದ ರಸ್ತೆ ಸುಧಾರಣೆ ಕಾಮಗಾರಿ, .2 ಕೋಟಿ ಅನುದಾನದಲ್ಲಿ ಯಾ.ಸ. ಹಡಗಲಿ -ಕೌಜಗೇರಿ-ಯಾವಗಲ್ಲ ರಸ್ತೆಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ, ವಿವೇಕ ಯೋಜನೆಯಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎರಡು ಕೊಠಡಿಗಳ ನಿರ್ಮಾಣ ಕಾಮಗಾರಿಗೆ, ಯಾ.ಸ. ಹಡಗಲಿ ಗ್ರಾಮದಲ್ಲಿ .20 ಲಕ್ಷ ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ, .15 ಲಕ್ಷ ಅನುದಾನದಲ್ಲಿ ಡಾ. ಬಾಬು ಜಗಜೀವನರಾಂ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ, ಪಾಂಡುರಂಗ ದೇವಸ್ಥಾನದ ಜೀರ್ಣೋದ್ದಾರ ಕಾಮಗಾರಿಗೆ, ಶ್ರೀ ಬಸವೇಶ್ವರ ಸಮುದಾಯ ಭವನ ಕಾಮಗಾರಿಗೆ, ಒಟ್ಟು ಅಂದಾಜು .9.25 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.

ಯಾವಗಲ್ಲ ಗ್ರಾಮದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಡಾ. ಬಾಬು ಜಗಜೀವನರಾಂ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ . 90 ಲಕ್ಷ, ಯಾವಗಲ್ಲದಿಂದ ಶಲವಡಿ ಗ್ರಾಮದವರೆಗಿನ ರಸ್ತೆ ಸುಧಾರಣೆ ಕಾಮಗಾರಿಗೆ .30 ಲಕ್ಷ, ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಿಂದ ಬಸ್‌ ನಿಲ್ದಾಣದ ವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ .7.75 ಲಕ್ಷ, ದಾಟನಾಳ ಕೂಡುವ ರಸ್ತೆ ಸುಧಾರಣೆ ಕಾಮಗಾರಿಗೆ .5 ಲಕ್ಷ, ಎಸ್‌ಸಿ ಕಾಲೋನಿಯಲ್ಲಿ ಡಾ. ಬಾಬು ಜಗಜೀಬನರಾಂ ಸಮುದಾಯ ಭವನ ನಿರ್ಮಾಣ ಕಾಮಗಾರಿ, ದುರ್ಗಾದೇವಿ ಸಮುದಾಯಭವನ ಕಾಮಗಾರಿ, ಬೀರಲಿಂಗೇಶ್ವರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ನನಗೆ ಲಂಚ ಕೊಡಲು ವಿಧಾನಸೌಧಕ್ಕೆ ಬರಬೇಕಿತ್ತೇ: ಸಿದ್ದು ಆರೋಪಕ್ಕೆ ತಿರುಗೇಟು ನೀಡಿದ ಸಿ.ಸಿ.ಪಾಟೀಲ್

ಈ ಸಂದರ್ಭದಲ್ಲಿ ಬಿಜೆಪಿ ಹೊಳೆಆಲೂರ ಮಂಡಳ ಅಧ್ಯಕ್ಷ ಮುತ್ತಣ್ಣ ಜಂಗಣ್ಣವರ, ಗ್ರಾಪಂ ಅಧ್ಯಕ್ಷೆ ರೇಣುಕಾ ಕುರಿ, ರುದ್ರಗೌಡ ಮುಲ್ಕಿಪಾಟೀಲ, ಈರಪ್ಪ ಗಾಣಗೇರ, ಗ್ರಾಪಂ ಸದಸ್ಯ ಶಂಕರಗೌಡ ಪಾಟೀಲ, ಕಲ್ಲನಗೌಡ ಪಾಟೀಲ, ಶಿವಾನಂದಪ್ಪ ಕಮತಿ, ಶಿವಾನಂದಪ್ಪ ಮೀಸಿ, ಲಲಿತಾ ರೋಣದ,ಪರಸಪ್ಪ ಪೂಜಾರ, ಈರಪ್ಪ ತಾಳಿ, ಅಶೋಕ ಹೆಬ್ಬಳ್ಳಿ, ನಿಂಗಪ್ಪ ರೋಣದ, ಶಂಕರು ಬ್ಯಾಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಮಲ್ಲಯ್ಯ ಕಾಡದೇವರಮಠ ನಿರೂಪಿಸಿದರು. ಶಂಕ್ರಪ್ಪ ಬ್ಯಾಟಿ ಸ್ವಾಗತಿಸಿದರು.

click me!