ನಾನು 5 ಬಾರಿ ಶಾಸಕನಾಗಿದ್ದೇನೆ. ಎಲ್ಲ ಇಲಾಖೆಗಳ ಆಳ, ಅಗಲ ನನಗೆ ಗೊತ್ತು. ನಾನು ಮೊದಲಿನ ರಾಜು ಕಾಗೆ ಅಲ್ಲ ಸರಿಯಾಗಿ ಕೆಲಸ ಮಾಡುವುದಾದರೆ ಇರಿ, ಇಲ್ಲವಾದರೇ ಹೋಗಿ ಎನ್ನುವ ಮೂಲಕ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ರಾಜು ಕಾಗೆ
ಕಾಗವಾಡ(ಜೂ.20): ಅಧಿಕಾರಿಗಳು ಹೇಳಿದ ಹಾಗೆ ಗುತ್ತಿಗೆದಾರ ಕೇಳುತ್ತಾನೋ, ಇಲ್ಲ ಗುತ್ತಿಗೆದಾರ ಹೇಳಿದ ಹಾಗೇ ಅಧಿಕಾರಿಗಳು ಕೇಳುತ್ತಿರೋ ಎಂಬುವುದನ್ನು ಮೊದಲು ಸ್ಪಷ್ಟಪಡಿಸಿ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
ಐನಾಪುರ ಪಟ್ಟಣದ ನೀರಾವರಿ ಇಲಾಖೆಯ ಕಚೇರಿಯಲ್ಲಿ ರಾಜ್ಯ ನೀರಾವರಿ ಎಂಡಿ ಮಲ್ಲಿಕಾರ್ಜುನ ಗುಂಗೆಯವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಸವೇಶ್ವರ ಏತ ನೀರಾವರಿ ಯೋಜನೆಯ ಸ್ಥಿತಿಗತಿ ಬಗ್ಗೆ ಕೇಳಿದರೆ, ಅಧಿಕಾರಿಗಳು ಒಂದು ಥರಾ ಹೇಳ್ತಿರಾ, ಗುತ್ತಿಗೆದಾರರು ಒಂದ ಥರಾ ಹೇಳ್ತಾರೆ. ಇದಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ಕೇಳುವ ಮೂಲಕ ನೀರಾವರಿ ಇಲಾಖೆಯ ಅಧಿಕಾರಿಗಳ ಬೆವರಿಳಿಸಿದರು.
ನಾನು 5 ಬಾರಿ ಶಾಸಕನಾಗಿದ್ದೇನೆ. ಎಲ್ಲ ಇಲಾಖೆಗಳ ಆಳ, ಅಗಲ ನನಗೆ ಗೊತ್ತು. ನಾನು ಮೊದಲಿನ ರಾಜು ಕಾಗೆ ಅಲ್ಲ ಸರಿಯಾಗಿ ಕೆಲಸ ಮಾಡುವುದಾದರೆ ಇರಿ, ಇಲ್ಲವಾದರೇ ಹೋಗಿ ಎನ್ನುವ ಮೂಲಕ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿ ಬದಲಾವಣೆ ವಿಚಾರ: ಸಚಿವೆ ಹೆಬ್ಬಾಳಕರ ಹೇಳಿದ್ದಿಷ್ಟು
ಕಾಮಗಾರಿ ಸಂಪೂರ್ಣ ಕಳಪೆ:
ಯಾರದೋ ಮಾತು ಕೇಳಿ ಸಾವಿರಾರು ಕೋಟಿ ರುಪಾಯಿ ವೆಚ್ಚದ ನೀರಾವರಿ ಯೋಜನೆಯನ್ನು ಕಳಪೆ ಮಟ್ಟದಲ್ಲಿ ಮಾಡಿದ್ದೀರಿ. ಇದಕ್ಕೆ ಯಾರು ಹೊಣೆ? ಕಳಪೆ ಕಾಮಗಾರಿಯ ಬಗಗೆ ಸಂಪೂರ್ಣ ತನಿಖೆ ಮಾಡಿಸಿ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಕ್ರಮ ಜರುಗಿಸುವಂತೆ ಮುಖ್ಯಮಂತ್ರಿಗಳಿಗೆ ಹಾಗೂ ನೀರಾವರಿ ಸಚಿವರಾದ ಡಿ.ಕೆ. ಶಿವಕುಮಾರ ಅವರಿಗೆ ಗಮನಕ್ಕೆ ತರುವುದಾಗಿ ತಿಳಿಸಿದರು.
ಹಾರಿಹೋದ ಜಾಕವೆಲ್ ಶಡ್:
ಐನಾಪುರ ಪಟ್ಟಣದ ಹೊರವಲಯಲ್ಲಿ ನಿರ್ಮಾಣವಾಗುತ್ತಿರುವ ಜಾಕವೆಲ್ ಶಡ್ ಸಂಪೂರ್ಣ ಕಳಪೆ ದರ್ಜೆಯದ್ದಾಗಿದ್ದು, ಮೇಲ್ಗಡೆ ಹಾಕಲಾದ ಪತ್ರಾಸ ಶಡ್ಡ ಸಂರ್ಪೂಣ ಕಿತ್ತು ಹೋಗಿವೆ. ಯಾರ ಮೇಲಾದರು ಬಿದ್ದಿದ್ದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ನನಗೆ ಗೊತ್ತೇ ಇಲ್ಲೆಂದ ಎಂಡಿ:
ಕಳೆದ ತಿಂಗಳು ಬೀಸಿದ ಗಾಳಿಗೆ ಜಾಕವೆಲ್ ಪತ್ರಾಸ್ ಹಾಗೂ ಎಂಗಲಗಳು ಕಿತ್ತುಹೋಗಿ ದೂದಲ್ಲಿ ಬಿದ್ದಿವೆ. ಎಂಬುವುದು ನನಗೆ ಗೊತ್ತಿಲ್ಲ. ಈ ಬಗ್ಗೆ ಇಲ್ಲಿಯವರೆಗೆ ನನಗೇಕೆ ಮಾಹಿತಿ ನೀಡಿಲ್ಲ ಎಂದು ಸುಪರಿಡೆಂಟ್ ಇಂಜನಿಯರನ್ನು ತರಾಟೆಗೆ ತೆಗೆದುಕೊಂಡ ಎಂಡಿ, ಮಾಹಿತಿ ಪಡೆದು ಕ್ರಮ ಜರುಗಿಸುವುದಾಗಿ ತಿಳಿಸಿದರು.
ಕಳೆದ 5 ವರ್ಷಗಳಿಂದ ಬಸವೇಶ್ವರ ಏತ ನೀರಾವರಿ ಕಾಮಗಾರಿ ಪ್ರಾರಂಭವಾಗಿದ್ದರೂ ಕೂಡ ಇನ್ನುವರೆಗೆ ಯಾವೊಬ್ಬ ರೈತರಿಗೂ ಪರಿಹಾರ ಸಿಕ್ಕಿಲ್ಲ. ಕೇಳಲು ಹೋದರೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಅದಕ್ಕಾಗಿ ಎಲ್ಲ ಅಧಿಕಾರಿಗಳನ್ನು ವರ್ಗಾವಣೆಗೊಳಿಸುವಂತೆ ಶಾಸಕ ರಾಜು ಕಾಗೆಯವರಿಗೆ ರೈತರು ಮನವಿ ಮಾಡಿದರು.
ಕೆಲಸ ಮಾಡಿ ಪೆಮೆಂಟ್ ಕೊಡಿಸುತ್ತೇವೆ:
ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಅಥಣಿಯ ಶಾಸಕರಾದ ಲಕ್ಷ್ಮಣ ಸವದಿಯವರು ಗುತ್ತಿಗೆದಾರರಿಗೆ ನಾವು ಕೊಟ್ಟಂತಾ ನಿಗದಿತ ಅವಧಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸದಿದ್ದರೆ ಹಳೆ ಟೆಂಡರ ರದ್ದು ಪಡಿಸಿ ಹೊಸ ಟೆಂಡರ್ ಕರೆಯುವುದಾಗಿ ಗುತ್ತಿಗೇದಾರರಿಗೆ ಎಚ್ಚರಿಕೆ ನೀಡಿದರು.
ಬೆಳಗಾವಿ ಕ್ಷೇತ್ರದ ಜನರ ಉಪಕಾರ ಮರೆಯಲು ಸಾಧ್ಯವಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ
ಈ ಯೋಜನೆ 2017ರಲ್ಲಿ ಪ್ರಾರಂಭವಾಗಿ 2020ಕ್ಕೆ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ನಿಮ್ಮ ನಿರ್ಲಲಕ್ಷತನದಿಂದ ಮೂರು ವರ್ಷ ಮುಂದೆ ಬಂದಿದೆ. ನಿಮಗೆ ಕೊಟ್ಟಂತಾ ಗಡುವಿನೊಳಗೆ ಯೋಜನೆಯನ್ನು ಪೂರ್ಣಗೊಳಿಸದಿದ್ದರೆ, ಎಜನ್ಸಿಯ ಟೆಂಡರ್ ರದ್ದು ಪಡಿಸಿ ಹೊಸ ಟೆಂಡರ್ ಕರೆಯುತ್ತೇವೆ ಎಂದು ಲಕ್ಷ್ಮಣ ಸವದಿ ಎಚ್ಚರಿಕೆ ನೀಡಿದರು.
ನಾನು ಜನರಿಗೆ ಎಷ್ಟಂತ ಹೇಳುವುದು, ನಿಮ್ಮ ನಿರ್ಲಕ್ಷತನದಿಂದ ಮೂರು ವರ್ಷ ಮುಂದೆ ಬಂದಿದೆ. ಬೇಗ, ಬೇಗ ಕೆಲಸ ಮಾಡಿ ನಾವಿಬ್ಬರು ಕೋಡಿಕೊಂಡು ಮುಖ್ಯಮಂತ್ರಿಗಳಿಗೆ ಹಾಗೂ ಉಪಮುಖ್ಯಮಂತ್ರಿಗಳಿಗೆ ಹೇಳಿಸಿ ನಿಮ್ಮ ಬಿಲ್ ಕ್ಲಿಯರ್ ಮಾಡಸ್ತಿವಿ ಎಂದರು.