ಕೊನೆಗೂ ರಾಜ್ಯ ಸರ್ಕಾರ ಕಲಬುರಗಿ ಜಿಲ್ಲಾಧಿಕಾರಿ ವರ್ಗಾವಣೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಜಿಲ್ಲೆಗೆ ಹೊಸ ಡಿಸಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಬೆಂಗಳೂರು, (ಆ.28): ಕಲಬುರಗಿ ಜಿಲ್ಲಾಧಿಕಾರಿ ಶರತ್. ಬಿ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇಂದು (ಶುಕ್ರವಾರ) ಆದೇಶ ಹೊರಡಿಸಿದೆ.
ಶರತ್ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದ್ದು, ಇವರ ಸ್ಥಾನಕ್ಕೆ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿಯಾಗಿರುವ ವಿ.ವಿ. ಜೋಸ್ಸ್ನಾ ಅವರನ್ನು ನೇಮಕ ಮಾಡಲಾಗಿದೆ.
ಕಲಬುರಗಿ ಜಿಲ್ಲಾಧಿಕಾರಿ ವರ್ಗಾವಣೆ: 2 ಗಂಟೆಯಲ್ಲೇ ಆದೇಶ ವಾಪಸ್..!
2001ರ ಐಎಎಸ್ ಬ್ಯಾಂಚ್ ನ ಶರತ್ ಬಿ. ಕಳೆದ ಆಗಸ್ಟ್ 31ರಂದು ಕಲಬುರಗಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇವರ ಅಧಿಕಾರವಧಿ ಒಂದು ವರ್ಷ ಪೂರ್ಣಗೊಳ್ಳಲು ಇನ್ನೂ 3 ದಿನಗಳು ಬಾಕಿ ಇರುವಂತೆಯೇ ಅವರನ್ನು ವರ್ಗಾವಣೆ ಮಾಡಲಾಗಿದೆ.
ಕೋವಿಡ್ ಸಂಬಂಧ ಮೊದಲ ಸಾವು ದಾಖಲಾದ ಸಮಯದಲ್ಲೂ ಸೋಂಕು ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದ್ದರು. ಇದರ ನಡುವೆ ಇವರನ್ನು ಏಪ್ರಿಲ್ ನಲ್ಲಿ ದಿಡೀರ್ ವರ್ಗಾವಣೆ ಮಾಡಿ ಆದೇಶಿಸಲಾಗಿತ್ತು. ಆದರೆ, ಸಾರ್ವಜನಿಕರ ಆಕ್ಷೇಪ ಹಿನ್ನೆಲೆಯಲ್ಲಿ ಎರಡು ಗಂಟೆಯ ಅವಧಿಯಲ್ಲಿ ವರ್ಗಾವಣೆಗೆ ಸಿಎಂ ತಡೆ ನೀಡದ್ದರು.