ಸಂಕಷ್ಟಕ್ಕೆ ಸಿಲುಕಿದ್ದ ವೃದ್ಧೆಗೆ ಸಹಾಯ ಮಾಡಿದ ಮೀಡಿಯಾ ಕ್ಲಬ್| ಕೊರೋನಾ ವೈರಸ್‌ನಿಂದಾಗಿ ಕಳೆದೆರಡು ತಿಂಗಳಿನಿಂದ ಮಾಶಾಸನ ಬಾರದೇ ಸಂಕಷ್ಟಕ್ಕೆ ಸಿಲುಕಿದ್ದ ವೃದ್ಧೆ| ಔಷಧ ಸೇರಿದಂತೆ ದಿನ ನಿತ್ಯದ ಜೀವನ ನಿರ್ವಹಣೆ ತೊಂದರೆಯಾಗಿತ್ತು|
ಗಂಗಾವತಿ(ಮೇ.08): ಲಾಕ್‌ಡೌನ್‌ನಿಂದಾಗಿ ಕಳೆದೆರಡು ತಿಂಗಳಿನಿಂದ ಮಾಶಾಸನ ಬಾರದೇ ಸಂಕಷ್ಟಕ್ಕೆ ಸಿಲುಕಿದ್ದ ವೃದ್ಧೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ಮೀಡಿಯಾ ಕ್ಲಬ್ ಪದಾಧಿಕಾರಿಗಳು ಧನ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನ ಸಮೀಪದ ಬಂಡಿ ಬಸಪ್ಪ ಕ್ಯಾಂಪ್‌ನ ವೃದ್ದೆ ನರಸಮ್ಮ ಎಂಬುವರ ಕುಟಂಬಕ್ಕೆ ಮೀಡಿಯಾ ಕ್ಲಬ್ ಧನ ಸಹಾಯ ಮಾಡಿದೆ. ಕೊರೋನಾ ವೈರಸ್‌ನಿಂದಾಗಿ ಕಳೆದೆರಡು ತಿಂಗಳಿನಿಂದ ವೃದ್ಧೆಗೆ ಮಾಶಾಸನ ಬಾರದೇ ಸಂಕಷ್ಟಕ್ಕೆ ಸಿಲುಕಿದ್ದರು. ಔಷಧ ಸೇರಿದಂತೆ ದಿನ ನಿತ್ಯದ ಜೀವನ ನಿರ್ವಹಣೆ ತೊಂದರೆಯಾಗಿತ್ತು.
undefined
ಗಂಗಾವತಿ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿ ಪ್ರತ್ಯಕ್ಷ: ಕಕ್ಕಾಬಿಕ್ಕಿಯಾದ ಜನತೆ..!
ಈ ವಿಷಯದ ತಿಳಿದ ಮೀಡಿಯಾ ಕ್ಲಬ್ ಪದಾಧಿಕಾರಿಗಳು ವೃದ್ಧೆ ನರಸಮ್ಮ ಅವರ ಮನೆಗೆ ಭೇಟಿ ನೀಡಿ ಸ್ಪಂದಿಸಿದ್ದಾರೆ. ಅಲ್ಲದೇ ಸಂಬಂಧ ಪಟ್ಟ ಅಧಿಕಾರಿಗಳು ವೃದ್ಧೆಗೆ ಮನೆ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮೀಡಿಯಾ ಕ್ಲಬ್ ಅಧ್ಯಕ್ಷ ರಾಮಮೂರ್ತಿ ನವಲಿ, ಪ್ರಧಾನ ಕಾರ್ಯದರ್ಶಿ ಕೆ.ನಿಂಗಜ್ಜ, ಉಪಾಧ್ಯಕ್ಷರಾದ ಸಿ.ಮಹಾಲಕ್ಮೀ ಕೇಸರಹಟ್ಟಿ, ಎಸ್.ಎಂ.ಪಟೇಲ್, ಗಂಗಲ ತಿರುಪಾಲಯ್ಯ, ಜಾಕಿರ್ ಹುಸೇನ್, ದೇವಾನಂದ್, ಸಂಜೀವ ನೇಕಾರ, ಎಚ್.ಮಲ್ಲಿಕಾರ್ಜುನ, ಚಂದ್ರಶೇಖರ ಸೇರಿದಂತೆ ಮೀಡಿಯಾ ಕ್ಲಬ್ ಪದಾಧಿಕಾರಿಗಳು ಭಾಗವಹಿಸಿದ್ದರು.