'ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಕಾಡುತ್ತಿದೆ ಅಸ್ಥಿರತೆ'

By Kannadaprabha NewsFirst Published Aug 26, 2020, 1:00 PM IST
Highlights

ರಾಜ್ಯ ಸರ್ಕಾರದಿಂದ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಸರ್ಕಾರದಲ್ಲಿಯೇ ಅಸ್ಥಿರತೆ ಕಾಡುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿದೆ.

 ಕೋಲಾರ (ಆ.26): ರಾಜ್ಯದ ಆಡಳಿತರೂಢ ಬಿಜೆಪಿ ಸರ್ಕಾರದಲ್ಲಿ ಸ್ಥಿರತೆ ಇಲ್ಲವಾಗಿದೆ. ಕೋವಿಡ್‌ ನೆಪದಲ್ಲಿ ಅಭಿವೃದ್ಧಿ ಕಾರ್ಯಗಳು ಕಳೆದ 4 ತಿಂಗಳಿಂದ ಸ್ಥಗಿತಗೊಂಡಿವೆ. ಅಧಿ​ಕಾರ ವಹಿಸಿಕೊಂಡು ವರ್ಷವೇ ಕಳೆದರೂ ಸಹ ಇನ್ನು ಸಾರ್ವಜನಿಕರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಕಾರ್ಯಗಳಲ್ಲಿ ವಿಫಲವಾಗಿದೆ. ಈ ಕುರಿತು ವಿಧಾನಸಭೆಯ ಮುಂದಿನ ಸದನದಲ್ಲಿ ಪ್ರಸ್ತಾಪಿಸುವುದಾಗಿ ಶಾಸಕ ಕೆ.ಶ್ರೀನಿವಾಸಗೌಡ ಗುಡುಗಿದರು.

ನಗರ ಹೊರವಲಯದ ಮಹಾಲಕ್ಷ್ಮೇ ಲೇ ಔಟ್‌ ಬಡಾವಣೆಯಲ್ಲಿನ ತಮ್ಮ ಗೃಹ ಕಚೇರಿಯಲ್ಲಿ ಇಪ್ಕೋ ಸೇವಾ ಸಂಸ್ಥೆಯಿಂದ ಅನಾರೋಗ್ಯಕ್ಕೆ ಬಡ ಫಲಾನುಭವಿಗಳಿಗೆ ಚೆಕ್‌ಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.

ಸಿಸಿಬಿ ಮುಂದೆ ಪಿಎ ಬಾಯ್ಬಿಟ್ಟ ಸ್ಫೋಟಕ ಮಾಹಿತಿ; ಸಂಪತ್‌ ರಾಜ್‌ ವಿರುದ್ಧ ಸಿಕ್ತು ಸಾಕ್ಷಿ!.

ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸಲು ಸರ್ಕಾರ ಮಟ್ಟದಲ್ಲಿ ಬಹಳಷ್ಟುಪ್ರಯತ್ನಗಳು ಮಾಡಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟಅಧಿ​ಕಾರಿಗಳಿಗೂ ಅ​ಧಿಕಾರಿಗಳಿಗೂ ಸೂಚಿಸಲಾಗಿದೆ. ಸರ್ಕಾರವು ಕೊರೋನಾ ಜೊತೆಗೆ ಅಭಿವೃದ್ಧಿಯತ್ತಲೂ ಅದ್ಯತೆ ನೀಡಿ ಗಮನಹರಿಸ ಬೇಕಾಗಿರುವುದು ಜವಾಬ್ದಾರಿಯಾಗಿದೆ ಎಂದು ಹೇಳಿದರು.

ನಾನು ಕಳೆದ ವಿಧಾನಸಭೆ ಚುನಾವಣೆಗಳನ್ನು ಕಂಡಿದ್ದು 4 ಬಾರಿ ಶಾಸಕನಾಗಿದ್ದೇನೆ. ಯಾವೂದೇ ಸರ್ಕಾರ ಇದ್ದರೂ ಸಹ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಒಂದೆರಡು ತಿಂಗಳ ಒಳಗಾಗಿ ಆಡಳಿತ ಮಂಡಳಿಗೆ ಚುನಾವಣೆಯನ್ನು ನಡೆಸುತ್ತಿದ್ದರು. ಅದರೆ ನಗರಸಭೆ ಚುನಾವಣೆ ಕಳೆದ ನವೆಂಬರ್‌ನಲ್ಲಿ ಅಗಿದ್ದು ಸುಮಾರು ಒಂದು ವರ್ಷವಾದರೂ ಕಳೆದರೂ ಆಡಳಿತ ಮಂಡಳಿ ರಚನೆಗೆ ಚುನಾವಣೆ ಘೋಷಿಸುವಂತ ಇಚ್ಛೆಯೇ ಇಲ್ಲವಾಗಿದೆ. ಇದೇ ರೀತಿ ಪಂಚಾಯತ್‌ ಚುನಾವಣೆಗಳನ್ನು ಸಹ ಮುಂದೂಡುತ್ತಿರುವುದು ಕಂಡರೇ ಆಡಳಿತ ಪಕ್ಷವು ಕುಂಭಕರ್ಣ ನಿದ್ರಾವಸ್ಥೆಯಲ್ಲಿದ್ದು ಎಚ್ಚರಿಸುವ ಕೆಲಸವನ್ನು ಸಾರ್ವಜನಿಕರು ಮಾಡಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಪಕ್ಷದ ಬಗ್ಗೆ ಜನರಿಗೆ ಬಹಳಷ್ಟುನಿರೀಕ್ಷೆಗಳಿದ್ದವು. ಆದರೆ ಬಿಜೆಪಿ ನಿರೀಕ್ಷೆಗೆ ತಕ್ಕಂತೆ ಅಡಳಿತ ನಿರ್ವಹಿಸುವಲ್ಲಿ ವಿಫಲವಾಗುತ್ತಿದೆ. ಬಿಜೆಪಿ ಆಡಳಿತದಲ್ಲಿ ಒಡಂಬಡಿಕೆಯ ಕೊರತೆ ಇರಬೇಕು. ಇಲ್ಲವೇ ಏನಾದರೂ ಲೋಪ ದೋಷಗಳು ಇರಬೇಕು. ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸಗಳನ್ನು ಮಾಡುವಂತಾಗಬೇಕು. ಕೆಲವೊಂದು ವಿಚಾರಗಳನ್ನು ನಮ್ಮ ಪಕ್ಷದ ವರಿಷ್ಠರು, ಮಾಜಿ ಮುಖ್ಯಮಂತ್ರಿಗಳು ಸದನದಲ್ಲಿ ಪ್ರಸ್ತಾಪಿಸಬೇಕು. ಇವುಗಳನ್ನು ನಾವು ಕೇಳ ಬಹುದಾದರೂ ಪಕ್ಷದ ಶಿಸ್ತು, ಶಿಷ್ಟಾಚಾರಗಳಿಗೆ ನಾವು ಬದ್ಧರಾಗಿರಬೇಕಾಲ್ಲವೇ ಎಂದು ಪ್ರಶ್ನಿಸಿದರು.

ಅಣ್ಣಾಮಲೈ ಬಿಜೆಪಿಗೆ; ಆಯ್ಕೆ ಹಿಂದಿದೆ ಈ ಕಾರಣಗಳು..!..

ಕೆಸಿ ವ್ಯಾಲಿ ನೀರಿನಿಂದ ನಗರದ ಹೊರ ವಲಯದಲ್ಲಿರುವ ಅಮ್ಮೇರಹಳ್ಳಿ ಕೆರೆಗೆ ನೀರು ಹರಿದು ಬರುತ್ತಿದೆ. ಈಗಾಗಲೇ ಸಾಕಷ್ಟುನೀರು ಕೆರೆಯಲ್ಲಿ ಸಂಗ್ರಹವಾಗಿದೆ. ಈ ಕೆರೆ ತುಂಬಿದ ನಂತರ ಕೋಲಾರಮ್ಮನ ಕೆರೆಗೆ ನೀರು ಬರುತ್ತದೆ. ತುಂಬಿರುವ ಕೆರೆಗಳ ಅಕ್ಕಪಕ್ಕದಲ್ಲಿ ಅಂತರ್ಜಲ ಮಟ್ಟವೃದ್ಧಿಯಾಗಿದೆ ಎಂದರು.

ನಗರದಲ್ಲಿ ನೀರಿನ ಸಮಸ್ಯೆಗೆ ಟ್ಯಾಂಕರ್‌ನಿಂದ ಸರಬರಾಜು ಮಾಡುವುದೇ ಸೂಕ್ತ ಅಲ್ಲ ಸದ್ಯ ನೀರಿನ ಸಮಸ್ಯೆ ಅಷ್ಟಾಗಿ ಇಲ್ಲ ಕೊಳವೆ ಬಾವಿಗಳಿಂದ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಇಪ್ಕೋ ಸೇವಾ ಸಂಸ್ಥೆಯಿಂದ ಅನಾರೋಗ್ಯಕ್ಕೆ ಒಳಗಾದ ಆನಂದ್‌, ಬಹದ್ದೋರ್‌ ಕುಮಾರ್‌, ಶ್ರೀನಿವಾಸಗೌಡ, ಗೋಪಾಲಗೌಡ, ಲಕ್ಷ್ಮಯ್ಯ, ಸೀತಾರಾಮ್‌, ನಿಕೀಲ್‌, ಆರ್‌.ಪುರೋಷ್‌ತ್ತಮ್‌, ರಾಜಣ್ಣ, ಶೈಲವತಿ ಸೆರಿದಂತೆ 10 ಮಂದಿಗೆ 2,25 ಲಕ್ಷ ರೂಗಳ ಚೆಕ್‌ ವಿತರಿಸಿದರು. 

ಇದನ್ನೂ ನೋಡಿ | ಶಿರಾ ಬೈ ಎಲೆಕ್ಷನ್: ಕಾಂಗ್ರೆಸ್ ಪ್ರಬಲ ನಾಯಕ ಬಿಜೆಪಿಯಿಂದ ಕಣಕ್ಕೆ..?

"

click me!