ಹೊಸ ಬಾಂಬ್ ಸಿಡಿಸಿದ್ರು ಜೆಡಿಎಸ್ ಮುಖಂಡ ರೇವಣ್ಣ : ಗಂಭೀರ ಆರೋಪ

By Kannadaprabha NewsFirst Published Dec 4, 2020, 1:14 PM IST
Highlights

ಜೆಡಿಎಸ್ ಮುಖಂಡ  ಎಚ್ ಡಿ ರೇವಣ್ಣ ಗಂಭೀರ ಆರೋಪ ಒಂದನ್ನು ಮಾಡಿದ್ದಲ್ಲೇ ಹೊಸ ಬಾಂಬ್ ಸಿಡಿಸಿದ್ದಾರೆ. ಏನದು..?

ಹಾಸನ (ಡಿ.04):  ಈ ತಿಂಗಳು ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ, ಅಧಿಕಾರಿಗಳು ಹಣ(ವಂತಿಗೆ) ಕೊಡಬೇಕೆಂದು ಬಿಜೆಪಿಯ ದೊಡ್ಡ ಮಟ್ಟದ ನಾಯಕರು ಸೂಚನೆ ನೀಡಿದ್ದಾರೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎಚ್‌.ಡಿ.ರೇವಣ್ಣ ಗಂಭೀರ ಆರೋಪ ಮಾಡಿದರು.

ನಗರದಲ್ಲಿರುವ ಸಂಸದರ ನಿವಾಸದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 2 ಹಂತದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಘೋಷಣೆ ಮಾಡಿದೆ. ಆದರೆ ಸರ್ಕಾರ ಗ್ರಾಮ ಪಂಚಾಯತಿ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿತ್ತು. 6 ತಿಂಗಳ ಮುಂಚೆ ಗ್ರಾಮ ಪಂಚಾಯತಿ ಚುನಾವಣೆ ನಡೆಸಬೇಕಿತ್ತು. ಈ ನಿಟಿನಲ್ಲಿ ಸರ್ಕಾರವು ತಮಗೆ ಬೇಕಾದ ಆಡಳಿತಾಧಿಕಾರಿ ನೇಮಿಸಿಕೊಂಡರು ತಮಗೆ ಇಷ್ಟಬಂದಂತೆ ಆಡಳಿತ ಮಾಡಲು ತೀರ್ಮಾನ ತೆಗೆದುಕೊಂಡಿದ್ದರು. ಆದರೆ ನ್ಯಾಯಾಲಯ 3 ವಾರದಲ್ಲಿ ಚುನಾವಣೆ ನಡೆಸಲು ನಿರ್ದೇಶನ ನೀಡಿದ ಮೇಲೆ ಚುನಾವಣೆ ನಡೆಸುತ್ತಿದ್ದಾರೆ ಎಂದರು.

ನಿಂಬೆಹಣ್ಣಿನ ಪ್ರಭಾವ ಹೆಚ್ಚು ದಿನ ಇರಲ್ಲ: ರೇವಣ್ಣಗೆ ಟಾಂಗ್ ...

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಣಾಧಿಕಾರಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ತಾಲೂಕು ಪಂಚಾಯತಿ ಕಾರ್ಯನಿರ್ವಣಾಧಿಕಾರಿ ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ಪಧಿ​ರ್‍ಸುವ ಬಿಜೆಪಿ ಬೆಂಬಲಿತ ಪ್ರತಿ ಅಭ್ಯರ್ಥಿಗೆ 10 ಸಾವಿರ ಹಣ ನೀಡಲು ಬಿಜೆಪಿಯ ದೊಡ್ಡ ಮಟ್ಟದ ನಾಯಕರು ಸೂಚನೆ ನೀಡಿದ್ದಾರೆ. ಜಿಲ್ಲಾ ಮಟ್ಟದ ತಾಲ್ಲೂಕು ಮಟ್ಟದ ಅದಿಕಾರಿಗಳ ಬಳಿ ಚುನಾವಣೆ ವಂತಿಗೆ ವಸೂಲಿ ಮಾಡುತ್ತಿದ್ದಾರೆ. ಇದು ರಾಜ್ಯ ಮಟ್ಟದಲ್ಲಿ ನಡೆಯುತ್ತಿತ್ತು. ಈಗ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ಬಳಿ ವಸೂಲಿಗೆ ಇಳಿದಿದ್ದಾರೆ. ಇದನ್ನು ರಾಜ್ಯದ ಚುನಾವಣೆ ಆಯೋಗ ಮತ್ತು ಜಿಲ್ಲಾಡಳಿತ ತಡೆಯಬೇಕು ಎಂದು ಮನವಿ ಮಾಡಿದರು.

ಹಾಸನ-ಬೇಲೂರು ರಸ್ತೆಯನ್ನು 4 ಪ್ಯಾಕೆಜ್‌ ಮಾಡಿ 1200 ಕೋಟಿ ಅನುದಾನ ಕೊಟ್ಟಿದೆ. ಕೇಂದ್ರ ಸಚಿವ ನಿತಿನ್‌ ಗಡ್ಕರಿ ಮತ್ತು ಮಾಜಿ ಪ್ರಧಾನಿ ದೇವೆಗೌಡರು ಗುದ್ದಲಿ ಪೂಜೆ ನಡೆಸಿದ್ದರು. ಆದರೆ ಇಂದು ಹಾಸನ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳನ್ನು ತಡೆಹಿಡಿದಿದ್ದಾರೆ. ಹಾಸನ, ಬೇಲೂರು, ಎಡೆಗೌಡನಹಳ್ಳಿ, ಬಿಳಿಕೆರೆ 1200 ಕೋಟಿ ರಸ್ತೆ ಕಾಮಗಾರಿ ತಡೆ ಹಿಡಿದು ಅದರ ಅನುದಾನವನ್ನು ರಾಜ್ಯದ ಲೋಕೋಪಯೋಗಿ ಸಚಿವರ ಮತ್ತು ಮುಖ್ಯ ಮಂತ್ರಿಯವರ ಕ್ಷೇತ್ರಕ್ಕೆ ತೆಗೆದುಕೊಂಡುಹೋಗಿದ್ದಾರೆ. ರಾಜ್ಯ ಸರ್ಕಾರದಲ್ಲಿ ಹಣ ವಸೂಲಿ ಮಾಡಲು ಒಬ್ಬರ ನೇಮಕ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ತಡೆ ಹಿಡಿದಿರುವ ಕಾಮಗಾರಿಗಳ ಬಗ್ಗೆ ಮುಂದಿನ ದಿನಗಳನ್ನು ವಿವಿರ ನೀಡುವುದಾಗಿ ಹೇಳಿದರು.

click me!