‘ಜಿಟಿಡಿ ಎಲ್ಲಿಗೆ ಬೇಕೋ ಹೋಗಲಿ’ : ಸಿಗ್ನಲ್ ಕೊಟ್ಟರಾ ವರಿಷ್ಠ

Published : Sep 13, 2019, 08:34 AM IST
‘ಜಿಟಿಡಿ ಎಲ್ಲಿಗೆ ಬೇಕೋ ಹೋಗಲಿ’ : ಸಿಗ್ನಲ್ ಕೊಟ್ಟರಾ ವರಿಷ್ಠ

ಸಾರಾಂಶ

ಜೆಡಿಎಸ್ ಮುಖಂಡರ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿ ಪಕ್ಷದ ಸಭೆಗೂ ಗೈರಾಗಿದ್ದ ಜಿಟಿ ದೇವೇಗೌಡರು ಎಲ್ಲಿ ಹೋಗಬೇಕೋ ಅಲ್ಲಿ ಹೋಗಲಿ ಎಂದು ಎಚ್ ಡಿ ದೇವೇಗೌಡರು ಹೇಳಿದ್ದಾರೆ. 

ಮೈಸೂರು [ಸೆ.13]:  ‘ಜಿ.ಟಿ.ದೇವೇಗೌಡರು ಎಲ್ಲಿಗೆ ಬೇಕೋ ಹೋಗಲಿ ಬಿಡಿ. ಯಾರು ಅವರನ್ನು ಹಿಡಿದುಕೊಂಡಿದ್ದಾರೆ?’

-ಇದು ಎಚ್‌.ಡಿ.ಕುಮಾರಸ್ವಾಮಿ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಚಿವ ಜಿ.ಟಿ. ದೇವೇಗೌಡರ ಬಗ್ಗೆ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರ ಸ್ಪಷ್ಟನುಡಿ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ.ಟಿ. ದೇವೇಗೌಡರ ಬಗ್ಗೆ ನಾನೇನಾದರೂ ಮಾತನಾಡಿದ್ದೀನಾ? ದೇವೇಗೌಡರು ಗುರುಗಳಲ್ಲ ಎಂದು ಅವರು ಹೇಳಿದ್ದಾರೆ. ಜಿ.ಟಿ. ದೇವೇಗೌಡರನ್ನು ನಾನು ಕೇಳಿದ್ದೆನಾ? 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವೈಯಕ್ತಿಕವಾಗಿ ನಾನು ಯಾರನ್ನೂ ಟೀಕಿಸುವುದಿಲ್ಲ. ಅವರು ಹೇಳುವುದನ್ನು ಕೇಳಿಸಿಕೊಳ್ಳುತ್ತೇನೆ ಮತ್ತು ಕೇಳಿದ್ದೇನೆ ಕೂಡ. ಎಚ್‌.ಡಿ. ಕುಮಾರಸ್ವಾಮಿಯೂ ಗುರುವಲ್ಲ. ನಾನು ಸ್ವಂತ ಬೆಳೆದಿದ್ದೇನೆ ಎಂದು ಹೇಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ