ಚುನಾವಣೆಯಲ್ಲಿ ಅನಿರೀಕ್ಷಿತ ಫಲಿತಾಂಶ ಬಂದಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರದಿಂದ ವಂಚಿತವಾಗಿದೆ. ಜೆಡಿಎಸ್ ಅಧಿಕಾರ ಪಡೆದಿದೆ.
ಶಿಡ್ಲಘಟ್ಟ (ನ.01): ಬಾರಿ ಕುತೂಹಲ ಮೂಡಿಸಿದ್ದ ಶಿಡ್ಲಘಟ್ಟನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅನಿರೀಕ್ಷಿತ ಫಲಿತಾಂಶ ಬಂದಿದ್ದು, 13 ಚುನಾಯಿತ ಸದಸ್ಯರಿದ್ದ ಕಾಂಗ್ರೆಸ್ ಪಕ್ಷ ಅಧಿಕಾರದಿಂದ ವಂಚಿತವಾಗಿದ್ದು, 10 ಸದಸ್ಯರನ್ನು ಹೊಂದಿದ್ದ ಜೆಡಿಎಸ್ ಪಕ್ಷ 17 ಮತಗಳನ್ನು ಪಡೆದು ಆಶ್ಚರ್ಯ ಕರ ರೀತಿಯಲ್ಲಿ ಜೆಡಿಎಸ್ ಪಕ್ಷದ ಸುಮಿತ್ರಾ ರಮೇಶ್ ಅಧ್ಯಕ್ಷೆ ಹಾಗೂ ಬಿಎಸ್‌ಪಿ ಪಕ್ಷದ ಮಾಜಿ ನಗರಸಭಾ ಅಧ್ಯಕ್ಷ ಅಪ್ಸರ್ ಪಾಷಾ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.
ಶಿಡ್ಲಘಟ್ಟನಗರಸಭೆಯು ಅಧ್ಯಕ್ಷ ಸ್ಥಾನ ಪರಿಶಿಷ್ಟಜಾತಿ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಅಭ್ಯರ್ಥಿ ಎಂದು ಘೋಷಣೆಯಾಗಿದೆ. ನಗರಸಭಾ ಚುನಾವಣೆಗೆ 31 ನಗರಸಭಾ ಸದಸ್ಯರು, ಶಾಸಕರು ಹಾಗೂ ಸಂಸತ್ ಸದಸ್ಯರು ಸೇರಿದಂತೆ ಒಟ್ಟು 33 ಮತಗಳಿದ್ದು, ಶಾಸಕರು ಹಾಗೂ ಓರ್ವ ನಗರಸಭಾ ಸದಸ್ಯರ ಗೈರು ಹಾಜರಿ ಅಂತಿಮ ಕ್ಷಣದಲ್ಲಿ ಜೆಡಿಎಸ್ ಸದಸ್ಯರೊಬ್ಬರು ಮತದಾನ ಮಾಡಿದರು. ಬಿಜೆಪಿಯ ಇಬ್ಬರು, ಬಿಎಸ್‌ಪಿಯ ಇಬ್ಬರು ಹಾಗೂ ಪಕ್ಷೇತರರ ಬೆಂಬಲದಿಂದಾಗಿ ಜೆಡಿಎಸ್ ಪಕ್ಷ ನಗರಸಭೆಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಆಪರೇಷನ್ ಕಮಲ ಸಕ್ಸಸ್: ಸಚಿವ ಸುಧಾಕರ್ ವರ್ಚಸ್‌ನಿಂದ ಕಾಂಗ್ರೆಸ್‌ಗೆ ಮರ್ಮಾಘಾತ ..
ಚಿಂತಾಮಣಿ ಉಪ ವಿಭಾಗದ ಡಿವೈಎಸ್‌ಪಿ ಲಕ್ಷಯ್ಯ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್‌್ತ ವ್ಯವಸ್ಥೆ ಮಾಡಲಾಗಿದ್ದು, ನಗರಸಭೆಯ ಸುತ್ತಲಿನ 500 ಮೀ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಚುನಾವಣಾಧಿಕಾರಿಯಾಗಿ ಎ.ಸಿ. ರಘುನಂದನ್, ತಹಸೀಲ್ದಾರ್ ಆರುಂಧತಿ, ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.